Advertisement

ಎಪಿಎಂಸಿಯಲ್ಲಿ ರೈತರ ಶೋಷಣೆ

08:45 AM Jul 05, 2017 | Team Udayavani |

ಕಲಬುರಗಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮಿತಿಯ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ರಾಜಾರೋಷದಿಂದ ಹಣ್ಣುಗಳ ಮಾರಾಟದ ಮೇಲೆ ಶೇ. 10ರಷ್ಟು ಕಮೀಷನ್‌ನ್ನು ವರ್ತಕರು (ಮಧ್ಯವರ್ತಿಗಳು) 
ರೈತರಿಂದ ವಸೂಲಿ ಮಾಡುತ್ತಿರುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ಬಿಜೆಪಿ ಮುಖಂಡ ಹಣಮಂತರಾಯ ಮಲಾಜಿ ಮತ್ತು ರೈತ ಮುಖಂಡರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಆಗ್ರಹಿಸಿದರು.

Advertisement

ವರ್ಷವಿಡಿ ಕಷ್ಟಪಟ್ಟು ಬೆಳೆದ ಹಣ್ಣು ಹಂಪಲುಗಳನ್ನು ಮಾರುಕಟ್ಟೆಗೆ 50 ಸಾವಿರ ರೂ. ಮೌಲ್ಯದಷ್ಟು ಮಾರಾಟ ಮಾಡಿದರೆ ರೈತರಿಂದ 5 ಸಾವಿರ ರೂ. ಕಮಿಷನ್‌ ಹೆಸರಿನಲ್ಲಿ ವಸೂಲಿ ಮಾಡಲಾಗುತ್ತಿದೆ. ರೈತರಿಂದ ಕಮೀಷನ್‌
ಪಡೆಯುವುದು ಕಾನೂನು ಬಾಹಿರವಾಗಿದೆ ಎಂದು ಮಂಗಳವಾರ ಜಿಲ್ಲಾ ಧಿಕಾರಿಗಳ ಗಮನಕ್ಕೆ ತಂದರು.

ವರ್ತಕರು ಶೇ. 5ರಷ್ಟು ಕಮೀಷನ್‌ನ್ನು ಖರೀದಿದಾರರಿಂದ ಪಡೆಯಬೇಕು. ಕಮೀಷನ್‌ ಪಡೆಯುವುದಕ್ಕೆ ರೈತರು ಆಕ್ಷೇಪಿಸಿದರೆಉತ್ಪನ್ನ (ಮಾಲನ್ನೇ) ತೆಗೆದುಕೊಳ್ಳುವುದಿಲ್ಲವೆಂದು ಎಲ್ಲ ವರ್ತಕರೂ ಒಗ್ಗೂಡಿ ದೊಡ್ಡದಾದ ಬಾಯಿ
ಮಾಡುತ್ತಾರೆ. ಯಾಕಾದರೂ ಕೇಳಿದೆ ಎನ್ನುವಂತೆ ರೈತರಿಗೆ ಹಿಂಸಿಸುತ್ತಾರೆ. ರೈತರು ಉತ್ಪನ್ನಗಳಿಗೆ ಮಾರಾಟ ಮಾಡಿದ್ದಕ್ಕೆ ಎಪಿಎಂಸಿ ಸಮಿತಿ ನೀಡಿರುವ ಲೆ„ಸನ್ಸ್‌ ನಂಬರದೊಂದಿಗೆ ವರ್ತಕರು ಅಧಿಕೃತ ರಸೀದಿ ನೀಡಬೇಕು. ಆದರೆ ಬಿಳಿ ಹಾಳೆ ಮೇಲೆ ರಸೀದಿ ನೀಡಲಾಗಿ ಸರ್ಕಾರಕ್ಕೂ ವಂಚಿಸಲಾಗುತ್ತಿದೆ ಎಂದು ದಾಖಲೆಗಳ ಸಮೇತ
ವಿವರಿಸಿದರು.

ದೂರು: ಕಲಬುರಗಿ ಎಪಿಎಂಸಿಯಲ್ಲಿ ಹಣ್ಣುಗಳ ಮಾರಾಟಕ್ಕೆ ರೈತರಿಂದ ಶೇ. 10ರಷ್ಟು ಕಮೀಷನ್‌ ಪಡೆಯುತ್ತಿರುವ ಬಗ್ಗೆ ರಸೀದಿಗಳ ಸಮೇತ ಈಗಾಗಲೇ ಎಪಿಎಂಸಿ ಅಧಿಕಾರಿಗಳು ದೂರಿಗೆ ಲಗತ್ತಿಸಲಾದ ಎರಡು ಅಂಗಡಿಗಳಿಗೆ
ನೋಟಿಸ್‌ ನೀಡಿ ಕೈ ತೊಳೆದುಕೊಂಡಿದ್ದಾರೆ. ಆದರೆ ಮುಂದಿನ ಯಾವುದೇ ಕ್ರಮ ಕೈಗೊಂಡಿಲ್ಲ. ಎಪಿಎಂಸಿಯಲ್ಲಿ ಶೇ.10ರಷ್ಟು ಕಮೀಷನ್‌ ಪಡೆಯುವ ದಂಧೆಗೆ ಕಡಿವಾಣ ಹಾಕುವಂತೆ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ
ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಕಮೀಷನ್‌ ಪಡೆಯುವ ದಂಧೆ ನಿಂತಿಲ್ಲ. ಇನ್ನೊಂದು ವಾರ ಕಾಲ ಕಾದು ನೋಡಲಾಗುವುದು. ತದನಂತರ ರೈತರೊಂದಿಗೆ ಬೀದಿಗಿಳಿದು ಹೋರಾಟಕ್ಕೀಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಪಂ ಸದಸ್ಯರ ಹಾಗೂ ಮುಖಂಡರ ಮನವಿ ಆಲಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ಎಪಿಎಂಸಿ ಅಧಿ ಕಾರಿಗಳಿಂದ
ಪಡೆದು ಮುಂದಿನ ಹೆಜ್ಜೆ ಇಡಲಾಗುವುದು. ಯಾವುದಕ್ಕೂ ಅಕ್ರಮದಿಂದ ಕೂಡಿರುವ ಈ ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾ ಧಿಕಾರಿ ಉಜ್ವಲಕುಮಾರ ಘೋಷ್‌ ಸ್ಪಷ್ಟ ಭರವಸೆ ನೀಡಿದರಲ್ಲದೇ ರೈತರು ಕಮೀಷನ್‌ ನೀಡದಿರುವುದಕ್ಕೆ ಮುಂದಾಗಬೇಕು ಎಂದರು. ರೈತ ಮುಖಂಡರಾದ ಮಲ್ಲು ಕಂದಗೋಳ, ಶಿವಕುಮಾರ ರತ್ನಾಜಿ, ಧೂಳಪ್ಪ ಢೋಲೆ, ಬಸವರಾಜ ಹಣಗುಜಿ, ಖಂಡೇರಾವ್‌ ಮುರುಡ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next