Advertisement

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

07:57 PM Apr 30, 2024 | Team Udayavani |

ಕಲಬುರಗಿ: ರಾಜ್ಯದ ಚುಕ್ಕಾಣಿ ಹಿಡಿಯುವವರ ನಿಯತ್ತು ಮತ್ತು ಗುಣಗಳು ಚೆನ್ನಾಗಿರಬೇಕು. ಈ ಹಿಂದೆ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಅತಿವೃಷ್ಟಿಯಾಗಿ ಜನ, ಜಾನುವಾರುಗಳಿಗೆ ನೀರು, ಮೇವು ಎಲ್ಲವೂ ಸಿಕ್ಕಿತು. ಆದರೆ, ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಕೂಡುತ್ತಿದ್ದಂತೆ ರಾಜ್ಯಕ್ಕೆ ಬರ ಬಡಿದಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬರಗಾಲ ಬಿದ್ದ ಮೇಲೂ ಕೂಡಲೇ ರೈತರ, ಕಾರ್ಮಿಕರ ನೆರವಿಗೆ ಬರದೇ ಕೇವಲ ಎರಡು ಸಾವಿರ ರೂ. ಪರಿಹಾರ ನೀಡಿ ಕೇಂದ್ರ ಸರ್ಕಾರಕ್ಕೆ ಬಾಯಿಗೆ ಬಂದಂತೆ ಆಪಾದನೆ ಮಾಡುತ್ತಾ ಜನರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಹಿಂದೆ ಯಡಿಯೂರಪ್ಪ ಎನ್‌ಡಿಆರ್‌ಎಫ್‌ ನಿಧಿಗಾಗಿ ಕಾಯದೇ ರಾಜ್ಯದ ಬೊಕ್ಕಸದಿಂದ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿದ್ದರು. ರಾಜ್ಯದಲ್ಲಿ ಮುಸ್ಲಿಂ ತುಷೀrಕರಣದಿಂದಾಗಿ ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಮೇಲೆ, ಯಾದಗಿರಿಯಲ್ಲಿ ಹಿಂದೂ ಯುವಕನ ಕೊಲೆಯಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ಆಗುತ್ತಿವೆ. ಇದೆಲ್ಲವೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಸಂಕೇತವಾಗಿದೆ ಎಂದರು.

ಪ್ರಜ್ವಲ್‌ ಜತೆ ಇನ್ನು ಯಾವುದೇ ಸಂಬಂಧ ಇಲ್ಲ: ವಿಜಯೇಂದ್ರ
ಮೈತ್ರಿ ಪಕ್ಷದ ಮುಖಂಡ ಹಾಗೂ ಹಾಸನ ಲೋಕಸಭೆ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪ್ರಕರಣ ಮುಗಿದ ಅಧ್ಯಾಯ. ಅವರನ್ನು ಯಾವುದೇ ಕಾರಣಕ್ಕೆ ಬೆಂಬಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಕಮಲಾಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ನಾನು ಮಾತುಕತೆ ಮಾಡಿ ನಿರ್ಣಯಿಸಿದ್ದೇವೆ. ಇನ್ನು ಮುಂದೆ ಅವರೊಂದಿಗೆ ಯಾವುದೇ ಸಂಬಂಧವನ್ನು ನಾವು ಹೊಂದುವುದಿಲ್ಲ. ಯಾವುದೇ ಕಾರಣಕ್ಕೂ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next