Advertisement

ಜಗತ್ತಿನ ಮುಂದೆ ಮೋಡಿ ಮಾಡಿದ ತೈವಾನ್‌

12:18 PM Apr 06, 2020 | mahesh |

ಕೋವಿಡ್-19 ವಿರುದ್ಧದ ಸಮರದಲ್ಲಿ ತೈವಾನ್‌ಗೆ ಒಂದು ರೀತಿಯ ಜಯ ಸಿಕ್ಕಿದೆ. ಸಾಕಷ್ಟು ಪೂರ್ವಸಿದ್ಧತೆ ಎನ್ನುವುದಕ್ಕಿಂತಲೂ ಅಪಾಯವನ್ನು ಮೊದಲೇ ಗ್ರಹಿಸಿ ಕೊಂಚವೂ ತಡಮಾಡದೆ ಯೋಜಿಸಿ ಕಾರ್ಯಗತಗೊಳಿಸಿದ್ದು ಇದಕ್ಕೆ ಕಾರಣ. ಕೆಲವು ಕ್ರಮಗಳನ್ನು ಕೈಗೊಳ್ಳುವಾಗ ಸಂಬಂಧಗಳ ಲೆಕ್ಕವನ್ನೂ ಬದಿಗಿಟ್ಟಿದ್ದು ಮತ್ತೂಂದು ಕಾರಣ.

Advertisement

ಹಾಂಗ್‌ ಕಾಂಗ್‌: ಕೋವಿಡ್-19 ಜನವರಿ 25 ರಂದು ಮಧ್ಯ ಚೀನದಿಂದ ವೇಗವಾಗಿ ಹರಡುವ ಅಪಾಯದ ಬಗ್ಗೆ ಜಗತ್ತು ಎಚ್ಚರಗೊಳ್ಳುತ್ತಿದ್ದಂತೆ, ಆಸ್ಟ್ರೇಲಿಯಾ ಮತ್ತು ತೈವಾನ್‌ನಲ್ಲಿ 4ಹೊಸ ಸೋಂಕುಗಳು ದಾಖಲಾಗಿದ್ದವು.

ಆಸ್ಟ್ರೇಲಿಯಾ ಮತ್ತು ತೈವಾನ್‌ ಸುಮಾರು 24 ದಶಲಕ್ಷ ಜನಸಂಖ್ಯೆಯನ್ನು ಹೊಂದಿವೆ. ಎರಡೂ ದ್ವೀಪ ರಾಷ್ಟ್ರಗಳಾಗಿರುವ ಕಾರಣ ತಮ್ಮ ಗಡಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೊಂದಲು ಸಾಧ್ಯವಾಗಿತ್ತು. ಹಾಗಂತ ಈ ಎರಡು ರಾಷ್ಟ್ರಗಳು ಚೀನದ ಮುಖ್ಯ ಭೂಭಾಗದೊಂದಿಗೆ ಬಲವಾದ ವ್ಯಾಪಾರ ಮತ್ತು ಸಾರಿಗೆ ಸಂಪರ್ಕವನ್ನು ಹೊಂದಿವೆ. ಆದರೆ ಇಲ್ಲಿ ತೈವಾನ್‌ ಮಾತ್ರ ತನ್ನ ಅದ್ಭುತ ಕೈಚಳಕವನ್ನು ತೋರಿದೆ.

ಈತನಕ ಆಸ್ಟ್ರೇಲಿಯಾದಲ್ಲಿ ಸುಮಾರು 5,000 ಕೋವಿಡ್-19 ಪ್ರಕರಣ ಪತ್ತೆಯಾಗಿದ್ದರೆ, ತೈವಾನ್‌ 400 ಕ್ಕಿಂತ ಕಡಿಮೆ ಪ್ರಕರಣಗಳನ್ನು ಹೊಂದಿದೆ. ಇಲ್ಲಿ ಆಸ್ಟ್ರೇಲಿಯಾ ಏನು ತಪ್ಪು ಮಾಡಿದೆ ಎಂಬುದು ದೊಡ್ಡ ಪ್ರಶ್ನೆಯಲ್ಲ. ಆಸ್ಟ್ರೇಲಿಯಾಕ್ಕಿಂತ ಹೆಚ್ಚಿನ ಪ್ರಕರಣಗಳು 20 ದೇಶಗಳಲ್ಲಿವೆ. ಮಾತ್ರವಲ್ಲದೇ ಏಳು ದೇಶಗಳಲ್ಲಿ 10 ಪಟ್ಟು ಹೆಚ್ಚು ಪ್ರಕರಣಗಳಿವೆ. ಆದರೆ ವಿಶ್ವದ ಇತರ ಭಾಗಗಳಲ್ಲಿ ಸಾಧ್ಯವಾಗದೇ ಇದ್ದಾಗ ಇತ್ತ ತೈವಾನ್‌ ವೈರಸ್‌ ಅನ್ನು ನಿಯಂತ್ರಣದಲ್ಲಿರಿಸಿರುವುದು ಅಚ್ಚರಿ.

ಕಲಿತ ಪಾಠಗಳು
2003ರಲ್ಲಿ ತೀವ್ರವಾದ ಉಸಿರಾಟದ ಸಿಂಡ್ರೋಮ್‌ (ಸಾರ್ಷ್‌) ಏಕಾಏಕಿ, ತೈವಾನ್‌, ಹಾಂಗ್‌ ಕಾಂಗ್‌ ಮತ್ತು ದಕ್ಷಿಣ ಚೀನಕ್ಕೆ ಬಡಿಯಿತು. ಜಗತ್ತಿನಲ್ಲಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಇದೂ ಒಂದು. ಚೀನದ ಆಗ್ನೇಯ ಕರಾವಳಿಯಿಂದ 180 ಕಿಲೋಮೀಟರ್‌(110 ಮೈಲಿ) ದೂರದಲ್ಲಿರುವ ದ್ವೀಪದಲ್ಲಿ 150,000 ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. 181 ಜನರು ಸಾವನ್ನಪ್ಪಿದರು. ಆಗ ಕಲಿತ ಪಾಠದಿಂದ ಈ ಬಾರಿ ಕೋವಿಡ್-19 ವೈರಸ್‌ ನ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಯಿತು.

Advertisement

ಸರಕಾರದ ಕ್ರಮಗಳು, ಸಾಮಾಜಿಕ ಅಂತರ, ಗಡಿ ನಿಯಂತ್ರಣಗಳು ಮತ್ತು ಮಾಸ್ಕ್ಗಳನ್ನು ಧರಿಸುವುದು ಮೊದಲಾದ ಕ್ರಮಗಳನ್ನು ತೈವಾನ್‌ ಬಹಳ ಬೇಗನೆ ಕೈಗೊಂಡಿತ್ತು. ವಿಶ್ವಮಟ್ಟದಲ್ಲಿ ಉತ್ತಮ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ತೈವಾನ್‌ ಒಂದು. ವುಹಾನ್‌ನಿಂದ ಕೊರೊನಾ ವೈರಸ್‌ನ ಸುದ್ದಿ ಪ್ರಕಟವಾದಾಗ, ತೈವಾನ್‌ನ ರಾಷ್ಟ್ರೀಯ ಆರೋಗ್ಯ ಕಮಾಂಡ್‌ ಸೆಂಟರ್‌(ಎನ್‌ಎಚ್‌ಸಿಸಿ) ಯ ಅಧಿಕಾರಿಗಳು ಸಂಭವನೀಯ ಅಪಾಯವನ್ನು ಗ್ರಹಿಸಿದರು.

ಸಾರ್ಷ್‌ ಸಂದರ್ಭದಲ್ಲೂ ಇದನ್ನೇ ಮಾಡಲಾಗಿತ್ತು. ಜನರಲ್‌ ಆಫ್‌ ದ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಶನ್‌ನ (ಜಮಾ) ಇತ್ತೀಚಿನ ವರದಿಯ ಪ್ರಕಾರ, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಕಳೆದ ಐದು ವಾರಗಳಲ್ಲಿ ತೈವಾನ್‌ ಕನಿಷ್ಠ 124 ಕ್ರಿಯಾಶೀಲ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಗಡಿ ನಿಯಂತ್ರಣವನ್ನು ಬಿಗಿಗೊಳಿಸುವುದೂ ಒಂದಾಗಿತ್ತು. ತನ್ನ ಆರಂಭಿಕ ನಿರ್ಣಾಯಕ ಕ್ರಮಗಳಲ್ಲಿ ಚೀನದೊಂದಿಗಿನ ಎಲ್ಲಾ ಸಂಪರ್ಕ, ವಹಿವಾಟು ಬಂದ್‌ ಮಾಡಿತು. ದ್ವೀಪದ ಬಂದರುಗಳಲ್ಲಿ ಕ್ರೂಸ್‌ ಹಡಗುಗಳು ನಿಲ್ಲಿಸುವುದನ್ನು ತಡೆಯಿತು. ಮನೆಯಲ್ಲಿನ ಕ್ವಾರಟೈನ್‌ ಬಿಟ್ಟು ಹೊರ ಬಂದು ಆದೇಶವನ್ನು ಉಲ್ಲಂ ಸಿದವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಯಿತು.

SARS ನ ಪಾಠ
ತೈವಾನ್‌ ಸರಕಾರವು 2003ರಲ್ಲಿ ಅಪ್ಪಳಿಸಿದ SARS ನಿಂದ ಅನುಭ ಕಲಿತುಕೊಂಡಿತತು. ಇದು ಮುಂದಿನ ಬಿಕ್ಕಟಿಗೆ ಪೂರಕವಾಗಿ ಸ್ಪಂದಿಸಲು ನೆರವಾಗಿದೆ. ಬಿಕ್ಕಟ್ಟಿಗೆ ತ್ವರಿತ ಕ್ರಮಗಳನ್ನು ಶಕ್ತಗೊಳಿಸಲು ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆ ವ್ಯವಸ್ಥೆಯನ್ನು ಸ್ಥಾಪಿಸಿತ್ತು. ಅನುಭವಿ, ಪರಿಣತ ಅಧಿಕಾರಿಗಳ ತಂಡಗಳು ನೇಮಕವಾಗಿದ್ದವು. ಇವರೆಲ್ಲರೂ ಈ ತುರ್ತುಸ್ಥಿತಿ ನಿರ್ವಹಣಾ ರಚನೆಗಳನ್ನು ಸಕ್ರಿಯಗೊಳಿಸಿದ್ದವು.

ದಾನ ತೈವಾನ್‌ ಈಗ ಪ್ರಬಲ ಸ್ಥಾನದಲ್ಲಿದೆ. ದೇಶೀಯ ಬೇಡಿಕೆಯ ಪೂರೈಕೆಯನ್ನು ಖಚಿ ತ ಪಡಿ ಸಿಕೊಳ್ಳಲು ಫೇಸ್‌ ಮಾಸ್ಕ್ ರಫ್ತು ಮಾಡುವುದನ್ನು ನಿಷೇಧಿಸಿತ್ತು. ವಾರಗಳ ಬಳಿಕ ಯುನೈಟೆಡ್‌ ಸ್ಟೇಟ್ಸ್, ಇಟಲಿ, ಸ್ಪೇನ್‌ ಮತ್ತು ಇತರ 9 ಯುರೋಪಿಯನ್‌ ದೇಶಗಳಿಗೆ 10 ಮಿಲಿಯನ್‌ ಮುಖವಾಡಗಳನ್ನು ದಾನ ಮಾಡುವುದಾಗಿ ತೈವಾನ್‌ ಘೋಷಿಸಿತು.

ಫೇಸ್‌-ಮಾಸ್ಕ್ ಉತ್ಪಾದನೆ
ದೇಶೀಯ ಮಾಸ್ಕ್ ಉತ್ಪಾದನೆಗೆ ಬಲ ತುಂಬಲಾಯಿತು. ದ್ವೀಪವ್ಯಾಪಿಯಾಗಿ ಕೋವಿಡ್-19 ವೈರಸ್‌ ಪರೀಕ್ಷೆಯನ್ನು ಪ್ರಾರಂಭಿಸಿದರು. ಕೋವಿಡ್‌ -19 ಪ್ರಪಂಚದಾದ್ಯಂತ ನಿರಂತರವಾಗಿ ಹರಡುವುದನ್ನು ಗಮನಿಸಿದರೆ, ತೈವಾನ್‌ನಲ್ಲಿ ತ್ವರಿತವಾಗಿ ಜಾರಿಗೆ ಬಂದ ಈ ಕ್ರಿಯಾಶೀಲ ಉಪಕ್ರಮಗಳು ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಕೆಲಸ ಮಾಡಿವೆ.

ಆರಂಭಿಕ ಕ್ರಮಗಳು
ಇತರ ದೇಶಗಳು ಇನ್ನೂ ಕ್ರಮ ತೆಗೆದುಕೊಳ್ಳಬೇಕೆ ಎಂದು ಚರ್ಚಿಸುತ್ತಿರುವಾಗ ತೈವಾನ್‌ ಕಾರ್ಯ ನಿರ್ವಹಿಸುತ್ತಿತ್ತು. ಜನವರಿಯಲ್ಲಿ ಜಾನ್‌ಹಾಪ್ಕಿನ್ಸ್‌ ವಿಶ್ವವಿದ್ಯಾಲಯವು ನಡೆಸಿದ ಅಧ್ಯಯನವೊಂದರ ಪ್ರಕಾರ ಚೀನಾದ ಮುಖ್ಯ ಭೂ ಭಾಗದ ಹೊರಗಿನ ತೈವಾನ್‌ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದು ಎಂದು ಹೇಳಿತ್ತು. ಅದರ ಸಾಮೀಪ್ಯ, ಹೊಂದಿರುವ ಸಂಬಂಧಗಳು ಮತ್ತು ಸಾರಿಗೆ ಸಂಪರ್ಕಗಳಿಂದಾಗಿ ಹೆಚ್ಚು ಪರಿಣಾಮ ಆ ದೇಶಕ್ಕೇ ಎಂದು ಊಹಿಸಲಾಗಿತ್ತು

ಕಾರ್ತಿಕ್‌ ಆಮೈ

Advertisement

Udayavani is now on Telegram. Click here to join our channel and stay updated with the latest news.

Next