Advertisement

ನಿರೀಕ್ಷಿತ ಅನಿರೀಕ್ಷಿತ

05:55 PM Aug 12, 2019 | mahesh |

ರಿಚರ್ಡ್‌ ಫೆಯ್ನಮನ್‌ ವಿಜ್ಞಾನಿಯಾಗಿ ಪ್ರೊಫೆಸರ್‌ ಆಗಿ ದೊಡ್ಡ ಹೆಸರು ಮಾಡಿದ್ದವನು. ಅಮೆರಿಕಾದ ಮೊದಲ ನ್ಯೂಕ್ಲಿಯರ್‌ ಬಾಂಬ್‌ ಯೋಜನೆಯಲ್ಲಿ (ಇದು ಮ್ಯಾನ್‌ಹಟ್ಟನ್‌ ಪ್ರಾಜೆಕ್ಟ್ ಎಂದೇ ಪ್ರಸಿದ್ಧ) ಪ್ರಮುಖ ಪಾತ್ರವಸಿ ತನ್ನ ಜ್ಞಾನ ಸಾಧನೆಗಾಗಿ ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ ಪಡೆದಾತ ಫೆಯ್ನಮನ್‌. ಆತನ ಜ್ಞಾನೋಪನ್ಯಾಸಗಳಿಗೆ ದ್ಯಾಥಿಗಳಂತೆಯೇ ನೂರಾರು ಸಾಮಾನ್ಯಜನ ಕೂಡ ಸೇರುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು.

Advertisement

ಅದೊಂದು ದಿನ ಕಾಲೇಜು ಕ್ಯಾಂಪಸ್‌ನಲ್ಲಿ ಒಬ್ಬರು ಪ್ರೊಫೆಸರ್‌ ರಾತ್ರಿ ಹೊತ್ತು ನಡೆದು ಹೋಗುತ್ತಿದ್ದರು. ಯಾವುದೋ ಕೋಣೆಯೊಳಗಿಂದ ಪಾಠ ಕೇಳಿಬರುತ್ತಿತ್ತು. ಇಷ್ಟು ಹೊತ್ತಿನಲ್ಲಿ ಇದ್ಯಾವುದಪ್ಪ ಕ್ಲಾಸು ಎಂದು ಕುತೂಹಲಗೊಂಡ ಅವರು ಮೆಲ್ಲನೆ ಅತ್ತ ಹೋಗಿ ಇಣುಕಿದರು. ಕ್ಲಾಸಿನಲ್ಲಿ ಫೆಯ್ನಮನ್‌ ಪಾಠ ಮಾಡುತ್ತಿದ್ದ. ಆದರೆ ಕ್ಲಾಸ್‌ನಲ್ಲಿ ಆತನನ್ನು ಬಿಟ್ಟರೆ ಒಂದು ನರಪಿಳ್ಳೆಯೂ ಇರಲಿಲ್ಲ! ಖಾಲಿ ತರಗತಿಗೆ, ಅದು ಭರ್ತಿಯಾಗಿಬಿಟ್ಟಿದೆಯೇನೋ ಎಂಬಂತೆ, ಥರ್ಮೋಡೈನುಕ್ಸ್‌ ವಿಷಯದಲ್ಲಿ ಉಪನ್ಯಾಸ ನೀಡುತ್ತಿದ್ದ ಫೆಯ್ನಮನ್‌. ಕುತೂಹಲದಿಂದ ಪ್ರಾಧ್ಯಾಪಕರು ಸುಮಾರು ಹೊತ್ತು ಈ ಏಕವ್ಯಕ್ತಿ ಪ್ರದರ್ಶನವನ್ನು ನೋಡಿ ನಂತರ ಸದ್ದಿಲ್ಲದೆ ಸರಿದು ತನ್ನ ಮನೆದಾರಿ ಡಿದರು.

ಮರುದಿನ ಫೆಯ್ನಮನ್‌ನ ಒಂದು ಉಪನ್ಯಾಸ ಕಾಲೇಜು ಆವರಣದಲ್ಲಿ ಏರ್ಪಾಟಾಗಿತ್ತು. ಸಭಾಂಗಣ ಎಂದಿನಂತೆ ಕಿಕ್ಕಿರಿದು ತುಂಬಿತ್ತು. ಫೆಯ್ನಮನ್‌ ವೇದಿಕೆ ಮೇಲೆ ಬಂದು, ಹಾ! ಇಂದು ಯಾವ ವಿಷಯದ ಬಗ್ಗೆ ಮಾತಾಡೋಣ? ಎಂದು ಕೇಳಿದ. ಮೆಕಾನಿಕ್ಸ್‌, ಸಾಲಿಡ್‌ ಸ್ಟೇಟ್‌ ಫಿಸಿಕ್ಸ್‌, ವೇವ್ಸ್‌, ಆಪ್ಟಿಕ್ಸ್‌ಗೆ ಹತ್ತು ಕೊರಳುಗಳು ಹತ್ತು ವಿಷಯಗಳ ಒರಲಿದವು. ಈ ಎಲ್ಲ ಗದ್ದಲದ ನಡುವಲ್ಲಿ ಒಬ್ಬಳು ಹುಡುಗಿ ಥರ್ಮೋಡೈನುಕ್ಸ್‌ ಎಂದೂ ಕೂಗಿದಳು. ಫೆಯ್ನಮನ್‌ ಸಾಕು! ಸಾಕು! ಎಂಬಂತೆ ಸೂಚಿಸಿ ತರಗತಿಯನ್ನು ಮೌನವಾಗಿಸಿ, ಹತ್ತು ಷಯಗಳ ನಡುವೆ ಒಂದನ್ನು ಯಾದೃಚ್ಛಿಕವಾಗಿ ((random ಆಗಿ) ಆರಿಸುವಂತೆ ನಟಿಸುತ್ತ ಆ ಹುಡುಗಿಯತ್ತ ತಿರುಗಿ ಒಂದು ನೋಟ ಬೀರಿ, ಸರಿ, ಥರ್ಮೋಡೈನುಕ್ಸ್‌ ಎತ್ತಿಕೊಳ್ಳೋಣ. ಅದರ ಬಗ್ಗೆ ಇಂದಿನ ಉಪನ್ಯಾಸ ಎಂದು ಹೇಳಿ ಪಾಠ ಶುರುಮಾಡಿದ.ಹಿಂದಿನ ರಾತ್ರಿ ಕದ್ದುಮುಚ್ಚಿ ಪಾಠ ಕೇಳಿದ್ದ ಪ್ರಾಧ್ಯಾಪಕರೂ ಕುತೂಹಲಕ್ಕೆ ಈ ಉಪನ್ಯಾಸಕ್ಕೆ ಹಾಜರಿ ಹಾಕಿದ್ದರು. ಅವರಿಗಿದು ರೀಪ್ಲೇ ಶೋ! ಆದರೆ ಉಳಿದಷ್ಟೂ ಜನ ಮಾತ್ರ ಫೆಯ್ನಮನ್‌ ಅದ್ಭುತ ವ್ಯಕ್ತಿ! ಯಾವ ವಿಷಯವನ್ನು ಅವರತ್ತ ಎಸೆದರೂ ಅದರ ಮೇಲೆ ಅಸ್ಮರಣೀಯವಾಗುವ ಉಪನ್ಯಾಸ ಕೊಡುತ್ತಾರೆ ಎಂದು ಮಾತಾಡಿಕೊಂಡರು.

– ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next