ಕುಂದಾಪುರ: ಸಂಗೀತ, ಸಾಹಿತ್ಯ, ಸಂಸ್ಕೃತಿಯ ಭಂಡಾರವನ್ನೇ ಹೊಂದಿರುವ ಭಂಡಾರ್‌ಕಾರ್ ಕಾಲೇಜಿನಲ್ಲಿ ಪಠ್ಯದೊಂದಿಗೆ ಕಲಾ ಪ್ರಕಾರಗಳನ್ನು ಅಳವಡಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಸೃಜನಶೀಲ ಪರಿಕಲ್ಪನೆಯಿಂದಲೇ ಶಿಕ್ಷಣ ಸಾರ್ಥಕವಾಗುವುದು ಎಂದು ಮೈಸೂರಿನ ಡಾ| ಕಬ್ಬಿನಾಲೆ ವಸಂತ ಭಾರದ್ಜಾಜ ಹೇಳಿದರು.
ಅವರು ಬುಧವಾರ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಡಾ| ಎಚ್.ಶಾಂತಾರಾಮ್ ಗಮಕ ವಾಚನ ಹಾಗೂ ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಮಕ ವ್ಯಾಖ್ಯಾನ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದರು.
ವಿದ್ಯಾರ್ಥಿಯಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಪ್ರಕಾಶಮಾನ ಆಗಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ತÌದ್ದು. ಗಮಕ ಯಕ್ಷ ಗಾನದ ತಾಯಿ. ಈ ಬಗ್ಗೆ ಹೊಳಲ್ಕೆರೆ ಶಾಸನದಲ್ಲಿಯೇ ಉಲ್ಲೇಖವಿದೆ. ಆದರೆ ಇಂದು ಗಮಕ ಕಲೆಯ ಕಲಿಯುವಿಕೆ ಕಡಿಮೆ ಆಗುತ್ತಿದೆ. ಅದರಲ್ಲೂ ಇಂದಿನ ತರುಣ ಜನಾಂಗದಲ್ಲಿ ಕಾವ್ಯ ರಸಸ್ವಾದ ಕಡಿಮೆ ಯಾಗುತ್ತಿದೆ ಎಂದರು.
ಪ್ರಶಸ್ತಿಗೆ ಸ್ವೀಕರಿಸಿ ಮಾತನಾಡಿದ ಗಮಕ ಕಲಾಶ್ರೀ ಗಣೇಶ ಉಡುಪ, ಇಂದಿನ ಶೇ. 80ರಷ್ಟು ಯುವಕ – ಯುವತಿ ಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಆದರೆ ನಮ್ಮ ಭಾರತೀಯ ಸಂಸ್ಕೃತಿ ಉಳಿಸಿ- ಬೆಳೆಸುವಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ. ಗಮಕ ಕಲೆಯಲ್ಲಿ ಆಸಕ್ತಿ ಇರುವವರಿಗೆ ಕಲಿಯಲು ಅನುಕೂಲ ಮಾಡಿಕೊಡಬೇಕು. ಪ್ರಶಸ್ತಿಯ ಹಿಂದೆ ಹೋಗದೆ, ಆತ್ಮತƒಪ್ತಿಗಾಗಿ ಈ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣ ನೀಡುವುದನ್ನು ಮಾತ್ರ ಗುರಿಯಾಗಿಸಿಕೊಳ್ಳಬಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಯಲ್ಲಿ ಸಂಸ್ಥೆಯ ಪಾತ್ರ ದೊಡ್ಡದು. ಕೇವಲ ಪಠ್ಯಕ್ಕೆ ಸೀಮಿತವಾಗದೇ, ಸೃಜನಶೀಲ ವ್ಯಕ್ತಿಯನ್ನಾಗಿ ರೂಪಿಸುವುದೇ ನಿಜವಾದ ಶಿಕ್ಷಣ ಎಂದರು.
ಪ್ರಶಸ್ತಿ ಸಮಿತಿಯ ಸದಸ್ಯರು ಉಪಸ್ಥಿತ ರಿದ್ದರು. ಭಂಡಾರ್‌ಕಾರ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಪ. ಪೂ. ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಂ.ಗೊಂಡ ವಂದಿಸಿದರು. ಸಮಿತಿಯ ಸಂಚಾಲಕ ಪ್ರೊ| ಗಣಪತಿ ಭಟ್ ಪ್ರಸ್ತಾವಿಸಿದರು. ಉಪನ್ಯಾಸಕಿ ಮಮತಾ ಕೆ.ಎಸ್. ನಿರ್ವಹಿಸಿದರು. ಶಿವರಂಜಿನಿ, ಕೀರ್ತಿ ಪರಿಚಯಿಸಿದರು.