Advertisement

ಪ್ರಬಂಧ: ಒತ್ತೋಣ ಬನ್ನಿ

12:30 AM Dec 30, 2018 | |

ಇಷ್ಟು ಬೇಗ ಹೊಸವರ್ಷ ಬರುತ್ತೆ ಅಂತ ನಂಗೆ ಗೊತ್ತೇ ಇರ್ಲಿಲ್ಲ. ಕ್ಯಾಲೆಂಡರಲ್ಲಿ ಕೆಲವು ತಿಂಗಳುಗಳು ಮಿಸ್ಸಾಯೆ¤àನೋ ಅಂತ ಡೌಟ್‌ ಬಂತು. ಆದ್ರೆ ಸಂಬಳ ಸರಿಯಾಗಿ ಬಂದಿರೋದರಿಂದ ಎಲ್ಲ ತಿಂಗಳೂ ಸರಸರ ಬಂದು ಹೋಗಿವೆ ಅಂತ ಅನ್ನಿಸಿತು. 

Advertisement

ಆದ್ರೂ ಹೇಳ್ತೀನಿ, 2019 ಇಷ್ಟು ಬೇಗ ಬರಬಾರದಾಗಿತ್ತು. ರಾಜಕಾರಣಿಗಳಿಗೆ ಇರೋ ಅರ್ಜೆಂಟ್‌ ನನಗಿಲ್ಲ. ಓಟಿಂಗ್‌ ಮೆಶಿನ್ನಿನ ಬಟನ್‌ ಒತ್ತೋ ಆತುರ ನನಗಿಲ್ಲ. ಹೊಸವರ್ಷ ಹುಟ್ಟೋಕೆ ಮುಂಚೆ ಡಿಸೆಂಬರ್‌ ತಿಂಗಳು ಬರುತ್ತೆ. ಈ ಸಲವೂ ಬಂದಿದೆ. ಡಿಸೆಂಬರ್‌ ಚಳೀಲಿ ಆಗಬಾರದ್ದೆಲ್ಲÉ ಆಗುತ್ತೆ ಅಂತಾರೆ. ಇಲ್ಲೀಗಲ್‌ ಕನೆಕ್ಷನ್ಸ್‌ ಡಿಸೆಂಬರಲ್ಲಿ ಜಾಸ್ತಿಯಂತೆ. ಉದಾ: ಚಳಿ ಜಾಸ್ತಿ ಆಯ್ತು ಅಂತ ಹೀಟರ್‌ಗೆ ರಾಂಗ್‌ ಕನೆಕ್ಷನ್‌ ಕೊಡೋದು!

ಘಟಾನುಘಟಿಗಳು ತೀರೊಳ್ಳೋದೂ ಡಿಸೆಂಬರಲ್ಲೇ. ವರ್ಷಾಂತ್ಯಕ್ಕೆ ಖಾತೆ ಮುಗಿಸಿ ಕಂತೆ ಒಗೀತಾರೆ. ಸುನಾಮಿ ಆಗೋದೂ ಡಿಸೆಂಬರ್‌ ತಿಂಗಳಲ್ಲಿ. ಈ ಸಲವೂ ಹಾಗೇ ಆಯ್ತು. ಪಾಪ, ಇಂಡೋನೇಷ್ಯಾದಲ್ಲಿ 250 ಜನ ಹಾಡು ಕೇಳ್ತಾ ಉಪ್ಪುನೀರು ಕುಡಿದು ಇನ್ಶೂರೆನ್ಸ್‌ ಪಾಲಿಸಿಗಳನ್ನು ಅವಧಿಗೆ ಮೊದಲೇ ಮೆಚೂರ್‌ ಮಾಡಿಸಿಕೊಂಡುಬಿಟ್ರಾ. ಸಮುದ್ರಕ್ಕೇನು ಕೋಪ ಇತ್ತೋ ಉಕ್ಕಿ ಬಂತು ಮೇಲೆ, ಸಂಗೀತ ಕೇಳ್ಳೋಕೆ ! ಸಮುದ್ರದಂಡೆಯಲ್ಲಿ ಸಂಜೆ ಹೊತ್ತು ಸಂಗೀತಸಂಜೆ ಇಟ್ಕೊಳ್ಳೋದು ಅಪಾಯ. ಹಗಲು ಹೊತ್ತು ಬೀಚಲ್ಲಿ ಸನ್‌ಬಾತ್‌ ತಗೊಳ್ಳೋದು ಇನ್ನೂ ಅಪಾಯ !

ವರ್ಷಾಂತ್ಯದಲ್ಲಿ ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲ. ನಾವು ಒತ್ತಿದಾಗ ಈ ಎಡವಟ್ಟುಗಳು ಕಾಣುತ್ತೆ. ಒತ್ತೋದು ಅಂದ್ರೆ ಮೊಬೈಲಲ್ಲಿ. ಕೈಯಲ್ಲಿ ಮೊಬೈಲ್‌ ಹಿಡ್ಕೊಂಡು ಒತ್‌ತಾ ಇದ್ರೆ ಇಡೀ ಪ್ರಪಂಚಾನೇ ನಮ್ಮ ಹತ್ರ ಇರುತ್ತೆ. ಅಬ್ಟಾ! ಸನ್ನಿಲಿಯೋನ್‌ ಡ್ಯಾನ್ಸ್‌ ಮಾಡ್ತಾ ಬಂದು ಅವಳ ಅಂಗೋಪಾಂಗಗಳು ನಮ್ಮ ತಲೆಗೇ ಬಡಿದಂತಾಗುತ್ತೆ. 

ಹಿಂದಿನ ಕಾಲದಲ್ಲಿ ಹೆಣ್ಮಕ್ಕಳು ತಲೆ ತಗ್ಗಿಸ್ಕೊಂಡು ಹೋಗ್ತಾ ಇದ್ರು. ತಲೆ ತಗ್ಗಿಸಿಕೊಂಡು ಹೋಗು ಅಂತ ಹಿರಿಯರು ಬುದ್ಧಿ ಹೇಳ್ತಾ ಇದ್ರು ಕೂಡ. ಈಗ ಹೇಳಿÉಲ್ಲಾಂದ್ರೂ ತಲೆ ತಗ್ಗಿಸ್ಕೊಂಡು ಹೋಗ್ತಾರೆ. ಎಷ್ಟು ಶಿಸ್ತು!

Advertisement

ಹಿಸ್ಟರಿ ರಿಪೀಟ್ಸ್‌ ಅಂತ ಹೇಳ್ತಾರೆ. ಸಂಸ್ಕೃತೀನೂ ಹಾಗೇ. ತಿರುಗೋ ಚಕ್ರ ಮೇಲಿರೋದನ್ನ ಕೆಳಗಡೆಗೆ ತರುತ್ತೆ. ಹೆಣ್ಮಕ್ಕಳು ತಲೆ ತಗ್ಗಿಸ್ಕೊಂಡು ಹೋಗ್ತಾರೆ, ಆದ್ರೆ ಕೈಯಲ್ಲಿ ಮೊಬೈಲ್‌ ಇರುತ್ತೆ. ಮೆಸೇಜುಗಳನ್ನ ನೋಡ್ತಾ, ವಾಟ್ಸಾಪ್‌ಗ್ಳನ್ನ ಓದ್ತಾ, ಬಾಯ್‌ಫ್ರೆಂಡ್‌ ಜೊತೆ ಹರಟಾ¤ ಹೆಣ್ಮಕ್ಕಳು ತಲೆತಗ್ಗಿಸಿ ನಡೀತಾರೆ. ನೋಡಬಾರದ್ದು ನೋಡೋದೂ ಉಂಟು. ತೋರಿಸಬಾರದ್ದು ಯಾರೋ ತೋರಿಸಿದರೆ ನೋಡಬಾರದ್ದು ಇವರು ನೋಡ್ತಾರೆ.

ಮೊಬೈಲ್‌ ನೋಡ್ತಾ ಹೋಗಿ ಅಕಸ್ಮಾತ್ತಾಗಿ ಢಿಕ್ಕಿ ಹೊಡೆದ್ರೂ ಸಹ ಜನ ತಪ್ಪು ತಿಳಿಯೋಲ್ಲ. ಯಾಕಂದ್ರೆ ಹೆಣ್ಣು ಢಿಕ್ಕಿಗೆ ಇವತ್ತು ಅಪೋಸಿಷನ್‌ ಇಲ್ಲ. ಅದನ್ನ ಸಾಫ್ಟ್ ಡ್ಯಾಶ್‌ ಅಂತಾರೆ. ದಿಂಬು ಮೇಲೆ ಬಿದ್ದ ಹಾಗೆ. ಆದರೆ, ಹುಡುಗ ಢಿಕ್ಕಿ ಹೊಡೆದರೆ ಬೊಂಬು ಮೇಲೆ ಬಿದಾØಗೆ ! 

ಇನ್ನು ಮನೆಗೆ ಬಂದ ಕೂಡಲೇ ಮೊಬೈಲ್‌ ಬಿಸಿ ಆಗುತ್ತೆ. ಮನೆ ಒಳಗಡೆ ಎಂಟ್ರಿ ತಗೊಳ್ಳೋವಾಗ ಒತ್ತೋದೇ ಕೆಲ್ಸ. ಆಫೀಸು, ಬ್ಯಾಂಕುಗಳಲ್ಲಿ ಹೆಬ್ಬೆಟ್ಟು ಒತ್ತಲಿಲ್ಲ ಅಂದ್ರೆ ಕೆಲಸ ನಡೆಯೋಲ್ಲ. ಪರ್ಸ್‌ ಮರೆತರೂ “ತಂಬ್‌’ ತಗೊಂಡು ಹೋಗಬೇಕು. ಲಿಫ್ಟ್ ಬಟನ್‌ ಒತ್ಲಿಲ್ಲ ಅಂದ್ರೆ ಲಿಫ್ಟ್ ಮೇಲಕ್ಕೆ ಹೋಗೊಲ್ಲ. ಮೈನ್‌ ಡೋರ್‌ನ ಕಾಲಿಂಗ್‌ ಬೆಲ್‌ ಒತ್ಲಿಲ್ಲ ಅಂದ್ರೆ ಬಾಗಿಲು ಸಹ ಓಪನ್‌ ಆಗೋಲ್ಲ. ಮನೆಗೆ ಬರ್ತಾನೇ ಹೆಂಡ್ತಿಯ ಕೆನ್ನೆ ಹಿಂಡಿ ರೇಗಿಸೋದು, ರಮಿಸೋದು ಒಂದು ಕಾಲಕ್ಕಿತ್ತು. ಆದ್ರೆ, ಅದು ಹೋಯ್ತು. ಹೆಂಡ್ತೀನೂ ಮೊಬೈಲ್‌ ಒತ್ಕೊಂಡು ಒಂದು ಕಡೆ ಕೂತಿರ್ತಾಳೆ. ಗಂಡಾನೂ ಒತ್ಕೊಂಡು ಮತ್ತೂಂದು ಕಡೆ ಕೂತಿರ್ತಾನೆ.

2010ರಲ್ಲಿ ಹೆಚ್ಚಾದ ಈ ಒತ್ತೋ ಸಂಸ್ಕೃತಿ 2020ರ ವೇಳೆಗೆ ತಾರಕಕ್ಕೆ ಏರುವ ಲಕ್ಷಣಗಳಿವೆ. ಎಡಬಿಡದೆ ಒತ್‌ತಾ ಇದ್ರೆ ಬೆರಳುಗಳು ಸವೆದು ಹೋಗುತ್ತೆ. ತೋರು ಬೆರಳು ಮೊದಲಿಗಿಂತ ಉದ್ದ ಕಡಿಮೆಯಾಗಿದೆ ಅಂತ ಈಗಾಗ್ಲೆà ಸಂಶೋಧಕರು ಹೇಳಿದ್ದಾರೆ. ಹೆಬ್ಬೆರಳೂ ಅಷ್ಟೇ, ರೇಖೆ ಕಾಣದಷ್ಟು ಸವೀತಾ ಇದೆಯಂತೆ. ಅದಕ್ಕೇ ಪಾಸ್‌ಪೋರ್ಟ್‌, ಆಧಾರ್‌ಕಾರ್ಡ್‌ಗೆ ಕಣ್ಣನ್ನು ಇಮೇಜ್‌ ಮಾಡಿ ತಗೋತಾರೆ. ಕಣ್ಣು ಹೊಡೀಬಹುದು, ಆದರೆ ಕಣ್ಣು ಒತ್ತೋಲ್ಲ. ಈಗೊಂದು ಎರಡು ದಶಕದ ಹಿಂದೆ ಒತ್ತೋದು ಅಂದ್ರೆ ಬೇರೆ ಅರ್ಥ ಬರ್ತಾ ಇತ್ತು. ಆದ್ರೆ ಈಗ ಒತ್ತೋದು ಮೊಬೈಲ್‌ ಮಾತ್ರ.

“ಒತ್ತೋಣ ಬನ್ನಿ’ ಅಂತ ಜನ ಮುಂದೊಮ್ಮೆ ಕರೆ ಕೊಡಬಹುದು. ಬೇಗ ಒತ್ತಿದ್ರೆ ಅದಕ್ಕೊಂದು ಬಹುಮಾನ. ಫಾಸ್ಟೆಸ್ಟ್‌ ಫಿಂಗರ್‌ ಅಂತ ಕೌನ್‌ಬನೇಗಾ ಕರೋಡ್‌ಪತಿಯಲ್ಲಿ ಬಹುಮಾನ ಕೊಡೋ ಸಂಪ್ರದಾಯಾನ ಬಹಳ ಹಿಂದೆಯೇ ಶುರು ಮಾಡಿದ್ದಾರೆ. ಬೇಗ ಒತ್ತಿದರೆ, ಬೇಗ ಬಹುಮಾನ! ಒತ್ಲಿಲ್ಲ ಅಂದ್ರೆ ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡೋಕೆ ಆಗೋದೇ ಇಲ್ಲ. ಕೀಬೋರ್ಡ್‌ ಒತ್ಲಿಲ್ಲ ಅಂದ್ರೆ ಶಬ್ದ ಬರೋಲ್ಲ. ಅಕ್ಷರ ಬೀಳೊಲ್ಲ.

ಮೆಟ್ರೋನಲ್ಲಿ, ಬಸ್ಸುಗಳಲ್ಲಿ ಓಡಾಡೋವಾಗ ರಶುÏ ಇದ್ದೇ ಇರುತ್ತೆ. ಒತ್ಕೊಂಡು ನಡೀಬೇಕು. ಒತ್ಕೊಂಡು ಕೂರ್ಬೇಕು. “”ಒತ್ತೀ ಸ್ವಾಮೀ” ಅಂತ ಕಟುವಾಗಿ ಹೇಳ್ಳೋದನ್ನ ನಾವು ಕೇಳಿದ್ದೀವಿ. ಹದಿಹರೆಯದವರು ಒತ್ತೋಕೇ ಪೀಕ್‌ ಅವರ್ ಪಬ್ಲಿಕ್‌ ಟ್ರಾನ್ಸ್‌ಪೊàರ್ಟ್‌ ಹಿಡೀತಾರೆ. ಪ್ರತಿಯೊಬ್ರೂ ಒತ್ತೋದ್ರಲ್ಲೇ ಬ್ಯುಸಿ ಆಗಿºಟ್ರೆ ಇತರ ಚಟುವಟಿಕೆಗಳು ಹ್ಯಾಗೆ?

ಮಗೂನ ಎತ್ಕೊಂಡು ಪ್ರೀತಿಯಿಂದ ಮುದ್ದಾಡೋವ್ರು, ಹೆಂಡ್ತಿ ಕೈ ಹಿಡಿದು ವಾಕಿಂಗ್‌ ಹೋಗೋವ್ರು, ಗರ್ಲ್ಫ್ರೆಂಡ್‌ನ‌ ಮೋಟಾರ್‌ಬೈಕ್‌ನಲ್ಲಿ ಪಿಲಿಯನ್‌ಕೂರಿಸ್ಕೊಂಡು ನೈಸ್‌ ರೋಡಲ್ಲಿ ನೂರಿಪ್ಪತ್ತು ಕಿಲೋಮೀಟರ್‌ ಸ್ಪೀಡಲ್ಲಿ ಹೋಗೋವ್ರು ಕಡಿಮೆ ಆಗ್ತಾ ಇದ್ದಾರೆ. ಯಾಕಂದ್ರೆ ದಿನದ ಅರ್ಧಭಾಗ ಒತ್ತೋದರಲ್ಲೇ ಕಳೀತೀವಿ. ಯಾವುದೇ ಆಫೀಸ್‌ ಕೆಲ್ಸ ಆದರೂ ಒತ್‌ತಾ ಕೂರಬೇಕು.

ಮೋಟಾರ್‌ಬೈಕಲ್ಲಿ ಕೂರೋ ಪ್ರಿಯತಮೆ ಮುಂದೆ ಇರೋ ಪ್ರಿಯತಮನನ್ನ ಒತ್ತಿ ಹಿಡೀತಾಳೆ. ಅವಳು ಒತ್ತಿದಷ್ಟೂ ಹುಡುಗ ಆ್ಯಕ್ಸಿಲರೇಟರ್‌ ಒತ್‌ತಾನೆ. ಸ್ಪೀಡ್‌ ಜಾಸ್ತಿ ಆಗುತ್ತೆ. “ಅವಸರವೇ ಅಪಘಾತಕ್ಕೆ ಕಾರಣ’ ಅಂತ ಬೋರ್ಡುಗಳಿವೆ. ಅವಸರದಲ್ಲಿ ಹೋಗಿ ಯಾವೊªà ಮರಕ್ಕೋ, ಲೈಟ್‌ ಕಂಬಕ್ಕೋ ಒತ್ತಿಬಿಟ್ರೆ ಆಸ್ಪತ್ರೆ ಸೇರಿ ನರ್ಸ್‌ ಕೈಲಿ ಒತ್ತಿಸಿಕೊಳ್ಳಬೇಕಾಗುತ್ತೆ !

ಮನುಷ್ಯ ಒತ್ತೋದರಲ್ಲಿ ಇಷ್ಟು ಬ್ಯುಸಿಯಾಗಿºಟ್ರೆ ಪರಸ್ಪರ ಪ್ರೀತಿ, ಸೌಹಾರ್ದತೆಗಳು ಹೊರಟು ಹೋಗುತ್ತವೆ. ಮನೆಗೆ ಬಂದವರ ಜೊತೆ ಮಾತಾಡೋಕೆ ಟೈಮಿರೋಲ್ಲ. ಮುಖ ನೋಡಿ ನಗೋಕೆ, ತಲೆ ಎತ್ತೋಕೆ ಒತ್ತೋ ಗುಂಡಿಗಳು ಬಿಡೋಲ್ಲ. ಬಂದವರೂ ಒತ್ಕೊಂಡು ಕೂತಿರ್ತಾರೆ. ಮನೆಯವರೂ ಒತ್‌ತಾ ಕೂತಿರ್ತಾರೆ. ಚಂಡೀಘರ್‌ನಲ್ಲಿ ಗೃಹಿಣಿ ಒಬ್ಬಳು ಮೊಬೈಲ್‌ ಒತ್ಕೊಂಡು ಮನೇಲಿ ಕೂತಿದು. ಚಂಡೀಘರ್‌ನಲ್ಲಿ ಎಲ್ಲ ಮನೆಗಳೂ ಒಂದೇ ಥರ ಇರುತ್ತೆ. ಯೂನಿಫಾರಂ ಹೌಸುಗಳು. ಒಂದೇ ಬಣ್ಣ, ಒಂದೇ ರೂಪ, ಎರಕ ಹೊಯ್ದಂತೆ ಮನೆಗಳು ಕಟ್ಟಿರ್ತಾರೆ. 

ಗಂಡಾನೂ ಮೊಬೈಲ್‌ ಒತ್ಕೊಂಡು ಬಂದ. ಮನೆ ಹೊಸಿಲು, ಬಾಗಿಲು ಒಂದೇ ರೀತಿ ಇರೋದರಿಂದ  ಯಾವುದೇ ಅಡಚಣೆ ಇಲ್ಲದೆ ಯಾವೊªà ಮನೆಗೆ ಅವನು ನುಗ್ಗಿದ. ಅಲ್ಲಿ ಯಾವೊªà ಹೆಂಡ್ತಿ ಒತ್ಕೊಂಡು ಕೂತಿದೆ. ಅವಳು ಇವನ್ನ ನೋಡ್ಲಿಲ್ಲ, ಇವನು ಅವಳ್ನ ನೋಡಲಿಲ್ಲ. ಒತ್ಕೊಂಡು ಅವನು ಬೆಡ್‌ರೂಂಗೆ ಹೋದ. ಅವಳೂ ಒತ್ಕೊಂಡು ಬೆಡ್‌ರೂಂಗೆ ಬಂದುÉ. ಇಬ್ರೂ ಒತ್ಕೊಂಡು ಮಲಗಿರೋವಾಗ ಅಕಸ್ಮಾತ್‌ ಮುಖ ನೋಡಿಕೊಂಡು ಜೋರಾಗಿ ಚೀರಿದರು.

“”ನೀನ್ಯಾಕೆ ಇಲ್ಲಿ, ನೀನ್ಯಾಕೆ ಇಲ್ಲಿ” ಅಂತ ಕಿರುಚಾಡಿದ್ರು. ಆಮೇಲೆ ಗೊತ್ತಾಯ್ತು, ಹಿಂದಿನ ರಸ್ತೇಲಿ ತನ್ನ ಮನೆಗೆ ಹೋಗೋ ಬದಲು ಮುಂದಿನ ರಸ್ತೇಲಿ ಮತ್ತೂಬ್ಬಳ ಮನೆಗೆ ಆ ವ್ಯಕ್ತಿ ಬಂದಿದ್ದ. ಪ್ರಕರಣ ಸುಖಾಂತವಾಯೊ¤, ದುಃಖಾಂತವಾಯೊ¤à, ರಾಂಗ್‌ ಕನೆಕ್ಷನ್‌ ಹಾಗೇ ಮುಂದುವರೀತೋ ಗೊತ್ತಿಲ್ಲ. ಒತ್ತೋದರಿಂದ ಅಪಾಯಾನೂ ಇದೆ, ಅನುಕೂಲಾನೂ ಇದೆ. 

ಒತ್ತೋಣ. ಎರಡು ಒತ್ತುಗಳ ನಡುವೆ ಹೆತ್ತವಳ್ನ ನೆನೆಯೋಣ. ಎತ್ತಾಡಿಸಿದವರನ್ನು ಸ್ಮರಿಸೋಣ. ನಮ್ಮತನ ಉಳಿಸ್ಕೊಳ್ಳೋಣ. ಒತ್ತೋ ಸಂಸ್ಕೃತಿ ಗೊತ್ತಿಲ್ಲದ ಹಿರಿಯರ ಜೊತೆ ಒತ್ತಿ ಕೂತು ಮೆತ್ತಗೆ ಮಾತಾಡೋಣ, ಮುಗುಳ್ನಕ್ಕು, ಕೆನ್ನೆಗೆ ಕೆನ್ನೆ ಒತ್ತೋಣ.

ಹೊಸವರ್ಷದ ಶುಭಾಶಯಗಳು ! 

ಎಂ.ಎಸ್‌. ನರಸಿಂಹಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next