Advertisement

ಪರಿಸರ ಸೂಕ್ಷ್ಮವಲಯ ಕಡಿತಗೊಳಿಸುವುದಿಲ್ಲ

04:33 PM Mar 08, 2020 | Team Udayavani |

ಆನೇಕಲ್‌: ಬೆಂಗಳೂರಿನ ಶ್ವಾಸಕೋಶದಿಂತಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವದ ಪರಿಸರ ಸೂಕ್ಷ್ಮವಲಯವನ್ನು ಯಾವುದೇ ರೀತಿಯಿಂದಲೂ ಕಡಿತಗೊಳಿಸುವ ಮಾತೇ ಇಲ್ಲ ಎಂದು ಪರಿಸರ ಮತ್ತು ಅರಣ್ಯಖಾತೆ ಸಚಿವ ಆನಂದ್‌ ಸಿಂಗ್‌ ಹೇಳಿದರು.

Advertisement

ಬನ್ನೇರುಘಟ್ಟ ಜೈವಿಕ ಉದ್ಯಾನವಕ್ಕೆ ಬೇಟಿ ನೀಡಿದ್ದ ಅವರು ಉದ್ಯಾನವನನ್ನು ವೀಕ್ಷಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. 268 ಚದುರ ಕಿಮೀ ನಿಂದ 168 ಚದುರ ಕಿ ಮೀ ಗೆ ಕಡಿತ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿರುವೆ. ಈವಿಷಯವಾಗಿ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ಪಡೆದು, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕಡಿತ ಮಾಡುವುದನ್ನು ಮರು ಪರಿಶೀಲಿಸುವಂತೆ ಪತ್ರ ಬರೆಯುತ್ತೇವೆ ಎಂದರು.

ನಾಡು ಉಳಿಸಿ ಕಾಡನ್ನು ರಕ್ಷಿಸಿ ಎಂದು ಹೇಳಬೇಕಾದರೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಾಡನ್ನು ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಹಾಗಾಗಿ ಈ ವಿಷಯವಾಗಿ ಎಲ್ಲರೂ ಸಹಕರಿಸುತ್ತಾರೆಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ಬನ್ನೇರುಘಟ್ಟ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ ಹಾಗಾಗಿ ಸದ್ಯ ಇರುವ ರಸ್ತೆ ಅಗಲೀಕರಣಕ್ಕಿಂತ ಏಕಮುಖ ಸಂಚಾರಕ್ಕೆ ಒತ್ತು ನೀಡಲಾಗಿದೆ. ಅದಕ್ಕಾಗಿ ಖಾಸಗಿ ವ್ಯಕ್ತಿಗಳ ಜಮಿನು ನಮಗೆ ಬೇಕಿರುವುದರಿಂದ ಅವರೊಂದಿಗೆ ಮಾತ ಕಥೆ ನಡೆಸುವ ಪ್ರತಯ್ಯದಲ್ಲಿದ್ದೇವೆ ಎಂದರು.

ಇದಕ್ಕೂ ಮೊದಲು ಅಧಿಕಾರಿಗಳೊಂದಿಗೆ ಮೃಗಾಲಯದ ಪಿಕ್‌ ನಿಕ್‌ ಕಾರ್ನರ್‌ ಒಳಗೆ ಒಂದು ಸುತ್ತು ಬಂದ ಸಚಿವರು ಉದ್ಯಾನವನದನ್ನು ಮತ್ತಷ್ಟು ಹಸಿರು ಬೆಳೆಸಲು ಮುಂದಾಗ ಹಾಗೆ ಬೇಗ ಬೆಳೆಯುವ ಗಿಡಗಳನ್ನು ನೆಟ್ಟು ಪೋಷಿಸಿ ಎಂದು ಸಲಹೆ ನೀಡಿದರು. ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಅರಣ್ಯ ಪಡೆ) ಪುನಾಟಿ ಶ್ರೀಧರ್‌, ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್‌ಸಿಂಗ್‌, ಉಪನಿರ್ದೇಶಕ ಕುಶಾಲಪ್ಪ, ಪಶುವೈದ್ಯ ಸೇವೆಯ ಸಹಾಯಕ ನಿರ್ದೇಶಕ ಡಾ ಉಮಾಶಂಕರ್‌, ಮಂಜುನಾಥ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next