Advertisement
ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜರುಗುತ್ತಿರುವ ಜಾತ್ರೆ, ೨೪ನೇ ಸತ್ಸಂಗ ಮಹೋತ್ಸವ, ತೊಟ್ಟಿಲೋತ್ಸವ ಹಾಗೂ ಪೂಜ್ಯರ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಸ್ವಾರ್ಥತೆಯಿಂದ ಕೆಲಸ ಮಾಡಿದರೆ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
Related Articles
Advertisement
ತಾಯಿ-ತಂದೆಯವರನ್ನು ದೇವರಂತೆ ಪೂಜೆಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ತಾಯಿ-ತಂದೆಯವರನ್ನೇ ನಿಜವಾದ ದೇವರು ಎಂದು ಪ್ರತಿನಿತ್ಯ ಪೂಜಿಸುತ್ತಾರೆ. ನೋಂದವರನ್ನು, ಕಷ್ಟದಲ್ಲಿದ್ದವರನ್ನು ಅಪ್ಪಿಕೊಳ್ಳುವ ಸ್ವಭಾವ ಇವರದ್ದಾಗಿದೆ. ಬಾಲಚಂದ್ರ ಅವರು ಕೊಡುಗೈ ದಾನಿಯಾಗಿದ್ದು, ತಮ್ಮ ಕುಟುಂಬದ ಸದಸ್ಯರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಇವರೊಬ್ಬ ಜಾರಕಿಹೊಳಿ ಮನೆತನದಲ್ಲಿಯೇ ಧರ್ಮರಾಯ ಆಗಿದ್ದಾರೆ ಎಂದು ಶ್ಲಾಘಿಸಿದ ಅವರು, ಇಂದು ಕೆಎಂಎಫ್ ಜಾಗತಿಕ ಮಟ್ಟದಲ್ಲಿ ಗುರುತಿಸುವಲ್ಲಿ ಅಧ್ಯಕ್ಷರಾಗಿರುವ ಬಾಲಚಂದ್ರ ಅವರ ಪಾತ್ರ ಅನನ್ಯವಾಗಿದೆ. ಇವರ ಕಾರ್ಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೊಂಡಾಡಿದ್ದಾರೆ. ಯಾರನ್ನೂ ವಿರೋಧ ಕಟ್ಟಿಕೊಳ್ಳದ ಬಾಲಚಂದ್ರ ಜಾರಕಿಹೊಳಿ ಅಜಾತಶತ್ರು ಎಂದು ಬಣ್ಣಿಸಿದರು. ಮುಂದಿನ ವರ್ಷ ನಿಜಗುಣ ದೇವರ ೬೦ನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಅದರೊಳಗೆ ಬಾಲಚಂದ್ರ ಭವನ ನಿರ್ಮಾಣಕ್ಕೆ ಶಾಸಕರು ಅಗತ್ಯವಿರುವ ಎಲ್ಲ ಸಹಕಾರ ನೀಡುವಂತೆ ಅವರು ಬಾಲಚಂದ್ರ ಜಾರಕಿಹೊಳಿ ಬಳಿ ಮನವಿ ಮಾಡಿಕೊಂಡರು. ನಮ್ಮ ಶ್ರೀಮಠದ ಎರಡು ಕಣ್ಣುಗಳು : ನಿಜಗುಣ ದೇವರು
ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರು ಮಾತನಾಡಿ, ಇಡೀ ಕನ್ನಡ ನಾಡು ಕಣ್ಣೆತ್ತಿ ನೋಡುವ ಶಾಸಕರು ಯಾರಾದರೂ ಇದ್ದರೇ ಅದು ಬಾಲಚಂದ್ರ ಜಾರಕಿಹೊಳಿ ಅವರು. ಮಾಜಿ ಸಚಿವ ಶಿವಾನಂದ ಕೌಜಲಗಿ ಮತ್ತು ಜಾರಕಿಹೊಳಿ ಕುಟುಂಬವು ನಮ್ಮ ಶ್ರೀಮಠದ ಎರಡು ಕಣ್ಣುಗಳಿದ್ದಂತೆ. ೨೫ ವರ್ಷಗಳ ಹಿಂದೆ ಪ್ರವಚನ ಹೇಳಲು ಆಗಾಗ ಹುಣಶ್ಯಾಳ ಪಿಜಿಗೆ ಬರುತ್ತಿದ್ದ ನನಗೆ ಇಲ್ಲಿ ಮಠವನ್ನು ನೀಡಿ ಮಠಾಧಿಪತಿಯಾಗಲು ಈ ಎರಡು ಕುಟುಂಬಗಳು ಸಹಕಾರ ನೀಡಿವೆ. ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಜನರ ದೇವರು ಎಂದೇ ಕಾರ್ಯಕ್ರಮವೊಂದರಲ್ಲಿ ಇಂಚಲದ ಶಿವಾನಂದ ಭಾರತಿ ಮಹಾಸ್ವಾಮಿಗಳು ಉಲ್ಲೇಖಿಸಿದ್ದಾರೆ. ಬಾಲಚಂದ್ರ ಅವರು ಸೇವಕರಂತೆ ಜನಸೇವೆ ಮಾಡುತ್ತಿದ್ದಾರೆ. ಕಳೆದ ೫ ವರ್ಷದಲ್ಲಿ ಈ ಗ್ರಾಮಕ್ಕೆ 8 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿಪರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂದು ನಿಜಗುಣ ದೇವರು ಹೇಳಿದರು. ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಗಳು ಪುಷ್ಪಾರ್ಪನೆ ಮಾಡಿ ಸತ್ಕರಿಸಿದರು. ನಿಜಗುಣ ದೇವರ ತುಲಾಭಾರವನ್ನು ಇದೇ ಸಂದರ್ಭದಲ್ಲಿ ಭಕ್ತರು ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರದ ಗಣೇಶಾನಂದ ಮಹಾರಾಜರು ವಹಿಸಿದ್ದರು. ಈ ಸಂದರ್ಭದಲ್ಲಿ ಮಹಾದೇವಾನಂದ ಸರಸ್ವತಿ ಸ್ವಾಮಿಗಳು, ವೆಂಕಟೇಶ ಮಹಾರಾಜರು, ಶಿವಾನಂದ ಮಹಾಸ್ವಾಮಿಗಳು, ಪ್ರಭು ದೇವರು, ಕೃಪಾನಂದ ಸ್ವಾಮಿಗಳು, ಚಿದಾನಂದ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ಬಸವರಾಜ ಮಹಾರಾಜರು, ಸಿದ್ದಾರೂಢ ಮಹಾಸ್ವಾಮಿಗಳು, ಬಸವರಾನಂದ ಮಹಾಸ್ವಾಮಿಗಳು, ಸದಾನಂದ ಮಹಾಸ್ವಾಮಿಗಳು, ಚಿದಾನಂದ ಮಹಾಸ್ವಾಮಿಗಳು, ಸಿದ್ಧಾನಂದ ಸ್ವಾಮಿಗಳು, ಭೀಮಾನಂದ ಸ್ವಾಮಿಗಳು, ನಿಂಗಯ್ಯಾ ಸ್ವಾಮಿಗಳು, ಬಸವರಾಜ ಶರಣರು, ಸಿದ್ಧೇಶ್ವರ ತಾಯಿ, ಅನುಸೂಯಾ ದೇವಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.