Advertisement

ಸ್ಕೋರ್‌ಕಾರ್ಡ್‌ ಬೃಹತ್‌ಗೊಳಿಸಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ನಿರ್ಧಾರ

03:03 AM May 17, 2019 | Team Udayavani |

ಲಂಡನ್‌: ಇತ್ತೀಚೆಗೆ ಅಭಿಮಾನಿಗಳನ್ನು ಖುಷಿಪಡಿಸುವುದಕ್ಕೆ ಸಂಪೂರ್ಣ ಬ್ಯಾಟಿಂಗ್‌ಗೆ ಅನುಕೂಲವಾಗುವಂತಹ ಅಂಕಣಗಳನ್ನು ಎಲ್ಲ ಕಡೆಗೆ ಮಾಡಲಾಗಿದೆ. ಆದ್ದರಿಂದ ಏಕದಿನ ಕ್ರಿಕೆಟ್‌ನಲ್ಲಿ ಒಂದೊಂದು ತಂಡದ ಮೊತ್ತವೂ ಭಾರೀ ಮಟ್ಟದಲ್ಲಿ ಏರುತ್ತಿದೆ. ಇದರಿಂದ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ ಹೊಸತೊಂದು ಬದಲಾವಣೆಗೆ ಮುಂದಾಗಿದೆ.

Advertisement

ಇದುವರೆಗೆ ಅದು ಪ್ರತೀಪಂದ್ಯ ಪಂದ್ಯ ಮುಗಿದಾಗ, ಅಭಿಮಾನಿಗಳಿಗಾಗಿ ಮುದ್ರಿತ ಸ್ಕೋರ್‌ಕಾರ್ಡ್‌ ಅನ್ನು ಸ್ಮರಣಿಕೆ ರೂಪದಲ್ಲಿ ನೀಡುತ್ತಿತ್ತು. ಇಲ್ಲಿಯವರೆಗೆ ಒಂದು ಇನಿಂಗ್ಸ್‌ನಲ್ಲಿ 400 ರನ್‌ಗಳಾದರೂ ಹೊಂದಿಸಬಹುದಾದ ಕಾರ್ಡನ್ನು ಅದು ಸಿದ್ಧಪಡಿಸಿಟ್ಟುಕೊಂಡಿತ್ತು. ಈ ಮೊತ್ತ ಈಗೀಗ 450ರ ಗಡಿಯನ್ನೂ ದಾಟಿರುವುದರಿಂದ, 500 ರನ್‌ಗಳಾದರೂ ಹೊಂದುವಂತಹ ಕಾರ್ಡನ್ನು ಸಿದ್ಧ ಪಡಿಸಲು ಇಂಗ್ಲೆಂಡ್‌ ಮಂಡಳಿ ಚಿಂತಿಸಿದೆ. ಕಳೆದ ವರ್ಷ ಇಂಗ್ಲೆಂಡ್‌ ತಂಡವೇ ಆಸ್ಟ್ರೇಲಿಯ ವಿರುದ್ಧ ಬ್ರಿಸ್ಟಲ್ನಲ್ಲಿ 6 ವಿಕೆಟ್‌ಗೆ 481 ರನ್‌ ಗಳಿಸಿತ್ತು. ಇದು ವಿಶ್ವದಾಖಲೆಯಾಗಿ ದಾಖಲಾಗಿರುವುದನ್ನು ಇಲ್ಲಿ ಗಮನಿಸಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next