Advertisement

ಶತ್ರು ಸೋಲಿಸೋ ತಾಕತ್ತಿದೆ: ಮತ್ತೆ ಭಾರತಕ್ಕೆ ಚೀನ ಎಚ್ಚರಿಕೆ

06:05 AM Jul 31, 2017 | Harsha Rao |

ಬೀಜಿಂಗ್‌: ಅತಿಕ್ರಮಿಸುವ ಶತ್ರುಗಳನ್ನು ಸೋಲಿಸುವ ತಾಕತ್ತು ಚೀನದ ಸೇನೆ (ಪೀಪಲ್ಸ್‌ ಲಿಬರೇಷನ್‌ ಆರ್ಮಿ -ಪಿಎಲ್‌ಎ)ಗೆ ಇದೆ ಎಂದು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ. ಈ ಮೂಲಕ ಚೀನ ಮತ್ತೂಮ್ಮೆ ಭಾರತವನ್ನು ಕೆಣಕುವ ಪ್ರಯತ್ನ ಮಾಡಿದೆ.

Advertisement

ಪಿಎಲ್‌ಎಯ 90ನೇ ಸಂಸ್ಥಾಪನಾ ದಿನದ ಅಂಗವಾಗಿ ರವಿವಾರ ನಡೆದ ಅತೀ ದೊಡ್ಡ ಸೇನಾ ಪರೇಡ್‌ ಸಂದರ್ಭದಲ್ಲಿ ಕ್ಸಿ ಭಾಷಣ ಮಾಡಿದ್ದು, ಎಂಥ ಸಂದರ್ಭದಲ್ಲೂ ಸನ್ನದ್ಧ ಸ್ಥಿತಿಯಲ್ಲಿರುವ ಸೇನೆಯನ್ನು ಪ್ರಶಂಸಿ ಸಿದ್ದಾರೆ. ಡೋಕ್ಲಾಮ್‌ ವಿವಾದದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕ್ಸಿ ಜಿನ್‌ಪಿಂಗ್‌ ಶತ್ರುಗಳನ್ನು ಹಿಮ್ಮೆಟ್ಟಿ ಸುವ ಶಕ್ತಿ ನಮ್ಮ ಸೈನ್ಯಕ್ಕೆ ಇದೆ ಎಂಬ ನಂಬಿಕೆ ನಮ್ಮದಾಗಿದೆ ಎಂದು ಹೇಳಿಕೊಂಡಿದ್ದಾರೆ.

ಡೋಕ್ಲಾಮ್‌ ವಿವಾದ ಕುರಿತಂತೆ ಚೀನ ಕೆಲವು ದಿನಗಳಿಂದ ಭಾರತಕ್ಕೆ ಕಠಿನ ಕ್ರಮದ ಎಚ್ಚರಿಕೆ ನೀಡುತ್ತಲೇ ಬಂದಿದ್ದು, ಭೂತಾನ್‌ ಪರ ತಮ್ಮ ಗಡಿಯೊಳಕ್ಕೆ ನುಗ್ಗಿಸಿದ ಸೇನೆಯನ್ನು ಬೇಷರತ್ತಾಗಿ ಹಿಂದೆಗೆದುಕೊಳ್ಳ ಬೇಕು. ಆ ಬಳಿಕ ಏನಿದ್ದರೂ ನಮ್ಮ ಮಾತುಕತೆ ಎಂದು ಹೇಳುತ್ತಲೇ ಇದೆ. ಇದ ರೊಂದಿಗೆ ದಕ್ಷಿಣ ಚೀನ ಸಮುದ್ರ ವಿವಾದ ಕುರಿತಂತೆಯೂ ಅಮೆರಿಕದ ಮಿತ್ರ ರಾಷ್ಟ್ರ ಗಳ ವಿರುದ್ಧ ಚೀನ ಆ ಭಾಗದಲ್ಲಿ ತೋಳ್ಬಲ ತೋರಿಸಲು ಮುಂದಾಗಿದ್ದು, ಕ್ಸಿ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

ಚೀನದ ಇನ್ನರ್‌ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿ ನಡೆದ ಸುಮಾರು 12 ಸಾವಿರ ಸೇನಾ ತುಕಡಿಗಳ ಪರೇಡ್‌ ಅನ್ನು ವೀಕ್ಷಿಸಿದ ಕ್ಸಿ, ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು, ಗೌರವವಂದನೆ ಸ್ವೀಕ ರಿಸಿದ್ದಾರೆ. ಅತೀ ದೊಡ್ಡ ಪರೇಡ್‌ ಎಂದು ಹೇಳಲಾದ ಈ ಕಾರ್ಯಕ್ರಮದಲ್ಲಿ 127 ಯುದ್ಧ ವಿಮಾನಗಳು, ಸುಮಾರು 571 ವಿಧದ ಯುದ್ಧ ಸಲಕರಣೆಗಳ ಪ್ರದರ್ಶನ ಮಾಡಲಾಯಿತು. ಇವುಗಳಲ್ಲಿ ಸುಮಾರು ಅರ್ಧಾಂಶಕ್ಕೂ ಹೆಚ್ಚು ಸಲಕರಣೆಗಳನ್ನು ಇದೇ ಮೊದಲ ಬಾರಿಗೆ ಚೀನ ಸೇನೆ ಸಾರ್ವ ಜನಿಕವಾಗಿ ಪ್ರದರ್ಶಿಸಿದೆ ಎನ್ನಲಾಗಿದೆ.

ಪರಮಾಣು, ಸಾಂಪ್ರದಾಯಿಕ ಕ್ಷಿಪಣಿಗಳ ಪ್ರದರ್ಶನ
ಸೇನಾ ಪರೇಡ್‌ನ‌ಲ್ಲಿ 5 ವಿಧದ ಪರ ಮಾಣು, ಸಾಂಪ್ರದಾಯಿಕ ಕ್ಷಿಪಣಿಗಳನ್ನು ಪ್ರದರ್ಶಿಸಲಾಗಿದೆ. ಡಾಂಗ್‌ಫೆಂಗ್‌-26 ಬ್ಯಾಲಿಸ್ಟಿಕ್‌ ಕ್ಷಿಪಣಿ, ಡಾಂಗ್‌ಫೆಂಗ್‌-21ಡಿ ಯುದ್ಧ ನೌಕೆ ನಿಗ್ರಹ ಕ್ಷಿಪಣಿ ಮತ್ತು ಡಾಂಗ್‌ಫೆಂಗ್‌ 16ಜಿ ಸಾಂಪ್ರದಾಯಿಕ ಕ್ಷಿಪಣಿ ಪ್ರದರ್ಶಿಸಿದೆ. ಇದರೊಂದಿಗೆ ಎರಡು ವಿಧದ ಅಣ್ವಸ್ತ್ರ ಕ್ಷಿಪಣಿ, ಅವುಗಳ ಲಾಂಚರ್‌ಗಳನ್ನು ಪ್ರದರ್ಶಿಸಿದೆ. ಜೆ-20 ಅತ್ಯಾಧುನಿಕ ಯುದ್ಧ ವಿಮಾನ, ಚೀನದ ಅತೀ ದೊಡ್ಡ, ಹೊಸ ಸರಕು ಸಾಗಾಣಿಕೆ ವಿಮಾನ ವೈ-20 ಅನ್ನು ಪ್ರದರ್ಶಿಸಲಾಗಿದೆ.

Advertisement

ರಷ್ಯಾದೊಂದಿಗೆ ಭಾರತ ಮಿ-17 ಹೆಲಿಕಾಪ್ಟರ್‌ ಡೀಲ್‌
ರಷ್ಯಾದಿಂದ 48 ಮಿ-17ವಿ-5 ಯುದ್ಧ ಸರಕು ಸಾಗಣೆ ಹೆಲಿಕಾಪ್ಟರ್‌ ಅನ್ನು ಖರೀದಿಸುವ ಸಂಬಂಧ ಭಾರತ-ರಷ್ಯಾ ಮಾತುಕತೆ ನಡೆಸುತ್ತಿದೆ. ಈ ವರ್ಷಾಂತ್ಯಕ್ಕೆ ಈ ಒಪ್ಪಂದ ಅಂತಿಮಗೊಳ್ಳಲಿದೆ ಎಂಬ ವಿಶ್ವಾಸವನ್ನು ರಷ್ಯಾ ಹೊಂದಿದೆ. ಕಳೆದ ವರ್ಷವಷ್ಟೇ ಭಾರತ ಈ ಮೊದಲು ಖರೀದಿಸಿದ್ದ 151 ಮಿ-17ವಿ-5 ಹೆಲಿಕಾಪ್ಟರ್‌ಗಳ ಅಂತಿಮ ಮೂರನ್ನು ರಷ್ಯಾ ದಿಂದ ಪಡೆದಿತ್ತು. ಈಗ ಮತ್ತೆ 48 ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾ ಗಿದೆ. ಇದಕ್ಕಾಗಿ ರಷ್ಯಾದ ಸರಕಾರಿ ಸ್ವಾಮ್ಯದ ರೋಸೋಬೊರೋ ನೆಕ್ಸ್‌ಪೋರ್ಟ್‌ ಕಂಪೆನಿ ಜತೆ ಮಾತುಕತೆಯಲ್ಲಿದೆ ಎಂದು ಕಂಪೆನಿಯ ಸಿಇಒ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next