ವಿದ್ಯಾರ್ಥಿಗಳು ಗಣತತಿ ವೇಳೆ ಹುಲಿಕಂಡ ಖುಷಿಯಲ್ಲಿ ವಾಪಸ್ ಆದರು.
Advertisement
ಮೊದಲ ಮೂರುದಿನ ಮಾಂಸಹಾರಿ, ನಂತರದ ಮೂರು ದಿನ ಸಸ್ಯಹಾರಿ ಪ್ರಾಣಿಗಳ ಗಣತಿ ಹಾಗೂ ಉದ್ಯಾನದಲ್ಲಿ ವನ್ಯಜೀವಿಗಳ ಆಹಾರ ಹಾಗೂ ಜೀವ ವೈವಿಧ್ಯತೆ ಮತ್ತು ಉದ್ಯಾನದ ಪರಿಸರ, ಸ್ಥಿತಿಗತಿ ಬಗ್ಗೆ ಗಣತಿ ನಡೆಸಿ, ವೆಜ್ಞಾನಿಕವಾಗಿ ದಾಖಲು ಮಾಡಿರುವ ಎಲ್ಲ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಿದ್ದಾರೆ.
ಒಟ್ಟಾರೆ ಗಣತಿಯಲ್ಲಿ 15ಕ್ಕೂ ಹೆಚ್ಚು ಹುಲಿ, ಮೂರು ಚಿರತೆ ಸೇರಿದಂತೆ ಸಾಕಷ್ಟು ಆನೆ, ಜಿಂಕೆ, ಸಾಂಬಾರ್
ಜಿಂಕೆ, ಕಾಡೆಮ್ಮೆ, ಕಾಡುಕುರಿ, ಕಾಡುಹಂದಿ, ಮುಳ್ಳುಹಂದಿ, ಕಾಡು ಕೋಳಿ, ಉಡ, ಪಕ್ಷಿಗಳು ಸೇರಿದಂತೆ ಉದ್ಯಾನದಲ್ಲಿನ ವನ್ಯಜೀವಿಗಳನ್ನು ಕಂಡಿದ್ದಾರೆ. ಇವೆಲ್ಲದರ ಜೊತೆಗೆ ಗಣತಿ ದಾರರು ಪ್ರಾಣಿಗಳಿಗೆ ಕಾಡಿನೊಳಗೆ ಲಭ್ಯವಿರುವ ಹುಲ್ಲು, ವಿವಿಧ ಜಾತಿಯ ಮರಗಳ ವಿವರ ದಾಖಲಿಸಿದರು. ಇತ್ತ ಮೈಸೂರು, ಕೊಡಗು, ಕೇರಳದ ಮಧಮಲೆ, ತಮಿಳುನಾಡಿನ ವೈನಾಡುಗಡಿ ಭಾಗದವರೆಗೆ ಪಶ್ಚಿಮಘಟ್ಟಗಳ (ಬ್ರಹ್ಮಗಿರಿ) ಸಾಲಿನಲ್ಲಿ ಸೇರಿ ಹಸಿರು ಹಾಸು ಹೊಕ್ಕಾಗಿರುವ ಈ ವಿಶ್ವ ವಿಖ್ಯಾತ ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನವನದ 643 ಚದರ ಕಿ.ಮೀ ವ್ಯಾಪ್ತಿಯ 8 ವಲಯಗಳಲ್ಲಿ ಕೊಡಗು ಜಿಲ್ಲೆಗೆ ಸೇರಿದ ಆನೆಚೌಕೂರು, ಕಲ್ಲಹಳ್ಳ, ವೀರನಹೊಸಹಳ್ಳಿ, ನಾಗರ ಹೊಳೆ, ಡಿ.ಬಿ.ಕುಪ್ಪೆ, ಅಂತರಸಂತೆ, ಮೇಟಿಕುಪ್ಪೆಗಳಲ್ಲಿ ಹುಣಸೂರು ವಲಯಗಳನ್ನಾಗಿ ವಿಂಗಡಿಸಿದ್ದು, ನಾಗರಹೊಳೆ ಉದ್ಯಾನದ ನುಗು ಜಲಾಶಯ, ಕಬಿನಿ ಹಿನ್ನೀರು ಪ್ರದೇಶದ ದಟ್ಟ ಕಾಡಿರುವ ಡಿ,ಬಿ,ಕುಪ್ಪೆ, ಮೇಟಿಕುಪ್ಪೆ, ಅಂತರ ಸಂತೆಯಲ್ಲಿ ಮತ್ತು ಹೆಚ್ಚಾಗಿ ಹುಲಿಗಳು ಕಾಣಿಸಿದೆ, ಕಲ್ಲಹಳ್ಳ ವಲಯದಲ್ಲಿ ರಸ್ತೆ ಬದಿಯೇ ಹುಲಿ ಕಾಣಿಸಿಕೊಂಡಿದ್ದರೆ, ಹುಣಸೂರು ವಲಯದಲ್ಲಿ ಎರಡು, ವೀರನಹೊಸಹಳ್ಳಿಯಲ್ಲಿ ಒಂದು ಮಾತ್ರ ಗಣತಿ ವೇಳೆ ಗೋಚರಿಸಿದೆ. ಹಲವು ಸ್ವಯಂ ಸೇವಕರು ಹಾಗೂ ಸಿಬ್ಬಂದಿಗಳು ಮತ್ತು ವನ್ಯಜೀವಿ ಛಾಯಾ ಚಿತ್ರಗ್ರಾಹಕರು ನೇರವಾಗಿ ಕಂಡ ಪ್ರಾಣಿಗಳನ್ನು ಸೆರೆ ಹಿಡಿದಿದ್ದಾರೆ.
Related Articles
Advertisement
ಸಂಪತ್ ಕುಮಾರ್