Advertisement

ಅಂಗನವಾಡಿ ಕಾರ್ಯಕರ್ತರ ಧರಣಿ ಅಂತ್ಯ

02:20 PM Jul 07, 2019 | Team Udayavani |

ಕಲಘಟಗಿ: ಸರ್ಕಾರವು ಎಲ್ಕೆಜಿ- ಯುಕೆಜಿಯನ್ನು ಅಂಗನವಾಡಿ ಕೇಂದ್ರ ಗಳಲ್ಲಿಯೇ ಪ್ರಾರಂಭಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ತಾಲೂಕು ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಶನಿವಾರ ಸಂಜೆ ಅಂತ್ಯವಾಗಿದ್ದು, ಶಾಸಕ ಸಿ.ಎಂ. ನಿಂಬಣ್ಣವರಗೆ ಮನವಿ ಸಲ್ಲಿಸಿದರು.

Advertisement

ಶಾಸಕ ನಿಂಬಣ್ಣವರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಎಲ್ಲ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ಶಿಕ್ಷಕಿಯರಿಗೆ ಅಂಗನವಾಡಿ ಕಾರ್ಯ ಹೊರತುಪಡಿಸಿ ಇತರೇ ಕೆಲಸ ಕಾರ್ಯಗಳಿಗೆ ನೇಮಿಸದಂತೆಯೂ ಒತ್ತಾಯಿಸುವುದಾಗಿ ತಿಳಿಸಿದರು.

ಮಾರುತಿ ಹೊಸಮನಿ, ಸುಜಾತಾ ಜಾಧವ, ಗಂಗಾಧರ ನೂಲ್ವಿ, ಚನ್ನಕ್ಕ ಅಂಗಡಿ, ಸರೋಜಾ ಹಾರೊಗೇರಿ, ಮಂಗಲಾ ಬೋಳಾರ, ಮಂಜುಳಾ ಬಳಿಗೇರ, ಸಂಜೋತಾ ಉಡುಪಿ, ರೇಖಾ ಕಲಾಲ್, ವಿಜಯಲಕ್ಷ್ಮೀ ಉಳ್ಳಾಗಡ್ಡಿ, ಸುವರ್ಣಾ ಕಡ್ಲಿಗಣ್ಣವರ, ಶೋಭಾ ಕೋಟಿ, ಅನುಸೂಯಾ ಕುಂಜೊಜಿ, ನಿರ್ಮಲಾ ದೊಡ್ಡಮನಿ, ಜಯಶ್ರೀ ಕುರಟ್ಟಿ, ವಿಜಯಲಕ್ಷ್ಮೀ ಗಾಣಿಗೇರ, ರುದ್ರವ್ವ ಪಲ್ಲೇದ, ನೀಲಾ ನಿಂಬಣ್ಣವರ, ರೇಣುಕಾ ವಾಲಿಕಾರ, ಗಿರಿಜಮ್ಮ ಕಾಮಧೇನು, ಉಮಾ ಸಂಗಣ್ಣವರ, ನೇತ್ರಾ ಕಡ್ಲಾಸ್ಕರ ಸೇರಿದಂತೆ ತಾಲೂಕಿನ 191 ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು ಮತ್ತು ಸಹಾಯಕಿಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next