Advertisement

ಪಾಕ್‌ ನೆರವಿಂದಲೇ ಲಾಡೆನ್‌ ಅಂತ್ಯ

01:04 AM Jul 24, 2019 | mahesh |

ವಾಷಿಂಗ್ಟನ್‌: ಉಗ್ರ ಸಂಘಟನೆ ಅಲ್‌ -ಖೈದಾ ಸಂಸ್ಥಾಪಕ, ವಿಶ್ವದ ನಂ.1 ಉಗ್ರನಾಗಿದ್ದ ಒಸಾಮಾ ಬಿನ್‌ ಲಾಡೆನ್‌ನನ್ನು ಕೊಲ್ಲಲು ಅಮೆರಿಕಕ್ಕೆ ಮಾಹಿತಿ ಕೊಟ್ಟದೇ ಪಾಕ್‌ ಐಎಸ್‌ಐ. ಅದರ ಸಹಾಯ ದಿಂದಲೇ ಅಮೆರಿಕದ ನೌಕಾಪಡೆಯ ಸೀಲ್‌ ಪಡೆ 2011ರಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಕೊಂದಿತು ಎಂಬ “ಕುತೂ ಹಲಕಾರಿ’ ಅಂಶವನ್ನು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಬಹಿರಂಗ ಪಡಿಸಿದ್ದಾರೆ.

Advertisement

“ಫಾಕ್ಸ್‌ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಈವರೆಗೆ ಒಸಾಮಾ ಸಾವಿನಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡು ಬಂದಿದ್ದ ಪಾಕಿಸ್ಥಾನವು ಈಗ ಉಲ್ಟಾ ಹೊಡೆದಿರುವುದು ಅಚ್ಚರಿ ಮೂಡಿಸಿದೆ. ಇದೇ ವೇಳೆ, ಪಾಕಿಸ್ಥಾನದಲ್ಲಿ ಲಾಡೆನ್‌ನನ್ನು ಕೊಲ್ಲಲು ನೆರವಾದ ಪಾಕಿಸ್ಥಾನದ ವೈದ್ಯ ಶಕೀಲ್‌ ಅಫ್ರಿದಿ ಬಿಡುಗಡೆಗೆ ಸಿದ್ಧವಿರು ವುದಾಗಿಯೂ ಖಾನ್‌ ಹೇಳಿದ್ದಾರೆ. ಅಫ್ಘಾನಿಸ್ಥಾನದಲ್ಲಿ 2010ರಲ್ಲಿ ಎಫ್ಬಿಐ ಅಧಿಕಾರಿಗಳು, ಅಮೆರಿಕದ ಸೈನಿಕರತ್ತ ಗುಂಡು ಹಾರಿಸಿದ ಆರೋ ಪಕ್ಕೆ ಗುರಿಯಾಗಿ ಅಮೆರಿಕದ ಜೈಲಲ್ಲಿರುವ ನರ ವಿಜ್ಞಾನಿ ಆಫಿಯಾ ಸಿದ್ಧಿಕಿಯನ್ನು ಬಿಡುಗಡೆ ಮಾಡಿದರೆ ವೈದ್ಯನ ಬಿಡುಗಡೆ ಆಗಲಿದೆ ಎಂದಿದ್ದಾರೆ.

ಭಯೋತ್ಪಾದನೆ ಬಗ್ಗೆ ಚರ್ಚೆ: ಅಧ್ಯಕ್ಷ ಟ್ರಂಪ್‌ ಜತೆಗಿನ ಮೊದಲ ಭೇಟಿಯಲ್ಲಿ ಇಮ್ರಾನ್‌ ಖಾನ್‌ ಭಯೋತ್ಪಾದನೆ, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದ್ದಾರೆ. 2015ರ ಬಳಿಕ ಎರಡೂ ದೇಶಗಳ ನಡುವಿನ ಅಧಿಕೃತ ಮಾತುಕತೆ ಇದಾಗಿದೆ. ಇದೇ ವೇಳೆ ಮಾತುಕತೆಯಲ್ಲಿ ಪಾಕಿಸ್ಥಾನಕ್ಕೆ ಸ್ಥಗಿತಗೊಳಿಸಿರುವ ನೆರವನ್ನು ಪುನಃಸ್ಥಾಪಿಸುವ ಬಗ್ಗೆ ಪ್ರಸ್ತಾವವಾಗಿಲ್ಲ. ದ್ವಿಪಕ್ಷೀಯ ವಾಗಿ ಬಾಂಧವ್ಯ ವೃದ್ಧಿಗೆ ಅವಕಾಶ ಇರುವ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಾಗಿ ಟ್ರಂಪ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next