Advertisement

ಪ್ರಾಯೋಗಿಕ ಮಾರುಕಟ್ಟೆ: ರೈತರಲ್ಲಿ ಮಂದಹಾಸೆ

05:00 PM Apr 21, 2020 | mahesh |

ದೇವನಹಳ್ಳಿ: ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ರೈತರು ಪ್ರಾಯೋಗಿಕ ಮಾರುಕಟ್ಟೆಯಲ್ಲಿ ತಾವು ಬೆಳೆದ ತರಕಾರಿ, ಹಣ್ಣು
ಮಾರಾಟ ಮಾಡಿ, ಹೊಸ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದು, ಬೆಂಗಳೂರಿನ ಪದ್ಮನಾಭ ನಗರ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ತೋಟಗಾರಿಕೆ
ಇಲಾಖೆಯ ಜಿಲ್ಲೆಯ ಉಪ ನಿರ್ದೇಶಕ ಮಹಾಂತೇಶ್‌ ಮುರುಗೋಡ್‌ ತಿಳಿಸಿದ್ದಾರೆ.

Advertisement

ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಆದೇಶ ಜಾರಿಗೊಳಿಸಿದ್ದರಿಂದ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯಿಲ್ಲದೆ, ಸಂಕಷ್ಟಕ್ಕೆ ಒಳಗಾಗಿದ್ದರು. ಅದನ್ನು ಅರಿತುಕೊಂಡ ಸರ್ಕಾರ ಕೃಷಿ ಚಟುವಟಿಕೆ ಸೇರಿದಂತೆ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮತ್ತು ಸರಬರಾಜಿಗೆ ಸಂಬಂಧಪಟ್ಟ ನಿಯಮ ಸಡಿಲಿಸಿ ರೈತರ ಬೆನ್ನಿಗೆ ನಿಂತಿದೆ. ಈ ಮಧ್ಯೆ ರೈತರ ಉತ್ಪನ್ನಗಳ ಸಂಘದವರು ಬೆಂಗಳೂರು ನಗರದ ಮಾರತಹಳ್ಳಿಯಲ್ಲಿ ತಮ್ಮಲ್ಲಿರುವ ಸಂಪರ್ಕದ ಮೂಲಕ ಅರ್ಪಾಮೆಂಟ್‌ ಹುಡುಕಿಕೊಂಡಿದ್ದು, ಮಧ್ಯವರ್ತಿಗಳಿಲ್ಲದೇ ನೇರ ವ್ಯವಹರಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಈ ಪರ್ಯಾಯ ಪ್ರಾಯೋಗಿಕ ಮಾರುಕಟ್ಟೆ ಮಾರ್ಗ ಕೋವಿಡ್-19
ಸೋಂಕು ಸಾಂಕ್ರಾಮಿಕ ರೋಗದಿಂದ ಸಂಕಷ್ಟ ಎದುರಿಸುತ್ತಿರುವ ರೈತರ ಜೀವನ ಆರ್ಥಿಕವಾಗಿ ಸಬಲರಾಗಲು ನೆರವಾಗಿದೆ ಎಂದು ಹೇಳಿದರು.

ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ರೈತರಿಗೆ ಉತ್ತಮ ಪ್ರಾಯೋಗಿಕ ಮಾರುಕಟ್ಟೆ
ಕಲ್ಪಿಸಲಾಗಿದೆ. ರೈತರಿಗೆ ಎರಡು ದಿನಗಳಿಗೊಮ್ಮೆ ಸಂಪರ್ಕಿಸಿ ಕೊಡಲಾಗಿರುವ ಅಪಾರ್ಟಮೆಂಟ್‌ಗಳಿಗೆ ತಾಜಾ ಹಣ್ಣು ಮತ್ತು ತರಕಾರಿ ಸರಬರಾಜು ಮಾಡಲು ತಿಳಿಸಲಾಗಿದೆ. ಇದರಿಂದಾಗಿ ರೈತರು ಮತ್ತು ಗ್ರಾಹಕರಿಗೆ ಉತ್ತಮ ವೇದಿಕೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಯವರು ಹಾಗೂ ರೈತರ ಸಹಕಾರದಿಂದ ಮತ್ತಷ್ಟು ರೈತರು, ಈ ಪ್ರಾಯೋಗಿಕ ಮಾರುಕಟ್ಟೆ ಪ್ರಯೋಜನ ಪಡೆಯಲಿ ಎಂದು ತೋಟಗಾರಿಕೆ ಇಲಾಖೆಯ ಜಿಲ್ಲೆಯ ಉಪ ನಿರ್ದೇಶಕ ಮಹಾಂತೇಶ್‌ ಮುರುಗೋಡ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next