Advertisement
ನಗರದ ಸಕೀಟ್ ಹೌಸ್‌ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಪಕ್ಷದ ಪ್ರತಿಯೋರ್ವರೂ ಪಕ್ಷದ ಶಿಸ್ತು ಪಾಲನೆ ಮಾಡಬೇಕು. ಅನಗತ್ಯ ಹೇಳಿಕೆಗಳಿಂದ ಜನರಿಗೆ ಸರಕಾರದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಶಾಸಕ ಸೋಮಶೇಖರ್ ವ್ಯತಿರಿಕ್ತ ಹೇಳಿಕೆ ಗಳನ್ನು ನೀಡಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದು, ಸ್ಪಷ್ಟೀಕರಣ ನೀಡಿದ್ದಾರೆ ಎಂದರು.
ಸಂಸದ ನಳಿನ್ ಅವರು 24 ತಾಸುಗಳೊಳಗೆ ಸರಕಾರ ಬೀಳುತ್ತದೆ ಎಂಬ ಹೇಳಿಕೆ ನೀಡುತ್ತಾರೆ. ಬಿಜೆಪಿಯವರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಬಿಜೆಪಿಯವರ ಈ ರೀತಿಯ ಧೋರಣೆ ಅವರ ಭ್ರಷ್ಟ ರಾಜಕಾರಣಕ್ಕೆ ನಿದರ್ಶನ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.
Related Articles
ಗಾಂಧೀಜಿ ಪುಣ್ಯತಿಥಿಯಂದು ಹಿಂದೂ ಮಹಾಸಭಾದ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಗಾಂಧೀಜಿಯವರಿಗೆ ಅವಮಾನ ಮಾಡಿರುವುದು ಹಾಗೂ ಗಾಂಧೀಜಿಯವರ ಹತ್ಯೆ ಮಾಡಿರುವ ಗೋಡ್ಸೆಗೆ ಜೈಕಾರ ಹಾಕಿರುವ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಫೆ.4ರಂದು ಪ್ರತಿಭಟನೆ ಹಮ್ಮಿ ಕೊಂಡಿದೆ. ಕೇಂದ್ರ ಸರಕಾರ ಕೂಡಲೇ ಇಂಥ ಕೃತ್ಯಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
Advertisement
ಶಾಸಕಾಂಗ ಸಭೆಗೆ ಎಲ್ಲ ಶಾಸಕರುಫೆ.6 ಅಥವಾ 7ರಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಎಲ್ಲ 80 ಶಾಸಕರು ಭಾಗವಹಿಸುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಕಂಪ್ಲಿ ಶಾಸಕ ಗಣೇಶ್ ತಲೆಮರೆಸಿಕೊಂಡಿದ್ದಾರೆ. ಅವರ ಮೇಲೆ ಮುಂದಿನ ಕ್ರಮದ ಬಗ್ಗೆ ಸೋಮವಾರ ಪಕ್ಷದ ಸಮಿತಿ ಸಭೆ ನಡೆಸಲಿದೆ. ಸಮಿತಿಯ ವರದಿ ಆಧಾರದ ಮೇಲೆ ಕೆಪಿಸಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು. ನಮ್ಮದೇ ಬಜೆಟ್
ಸಮ್ಮಿಶ್ರ ಸರಕಾರವು ಭದ್ರವಾಗಿದೆ. ನಾವೇ ಈ ಬಾರಿಯೂ ಬಜೆಟ್ ಮಂಡನೆ ಮಾಡಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ತೆಂಕ ಎರ್ಮಾಳಿನ ರಾಜೀವ್ ಗಾಂಧಿ ಎಕಾಡೆಮಿ ಫಾರ್ ಪೊಲಿಟಿಕಲ್ ಸ್ಟಡೀಸ್ ಮುಖ್ಯ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಹೇಳಿದರು. ಐವನ್ ಡಿ”ಸೋಜ, ಎಂ. ಎ. ಗಫೂರ್, ನವೀನ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ದಿನೇಶ್ ಗುಂಡೂ ರಾವ್ ರವಿವಾರ ದೇವರ ದರ್ಶನ ಮಾಡಿದ ಬಳಿಕ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.