Advertisement

ಚುನಾವಣೆಗೆ ಸಿಕ್ಕಿತು ಮತ್ತಷ್ಟು ರಂಗು

10:25 PM Apr 07, 2019 | Team Udayavani |

ನವದೆಹಲಿ: ಎರಡು ಪ್ರಮುಖ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಈ ಬಾರಿಯ ಮಹಾ ಚುನಾವಣೆಗಾಗಿ ತಾವು ಅಳವಡಿಸಿಕೊಂಡಿರುವ ಧ್ಯೇಯವಾಕ್ಯಗಳನ್ನು ಪ್ರಕಟಿಸಿವೆ. ಕಾಂಗ್ರೆಸ್ಸಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಧ್ಯೇಯವಾಕ್ಯದೊಂದಿಗೆ ಮೂರು ಥೀಮ್‌ ಹಾಡುಗಳನ್ನೂ ಬಿಡುಗಡೆ ಮಾಡಿದೆ.

Advertisement

ದೆಹಲಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ, “ಫಿರ್‌ ಏಕ್‌ ಬಾರ್‌, ಮೋದಿ ಸರ್ಕಾರ್‌’ ಎಂಬ ಉದ್ಘೋಷವನ್ನು ಬಿಡುಗಡೆ ಮಾಡಿದರು.

ಇದರ ಜತೆಗೆ, “ಕಾಮ್‌ ಕರನೇ ವಾಲಿ ಸರ್ಕಾರ್‌’ (ಕೆಲಸ ಮಾಡುವ ಸರ್ಕಾರ), “ಇಮಾನ್‌ದಾರ್‌ ಸರ್ಕಾರ್‌’ (ನಂಬಿಕೆಗೆ ಅರ್ಹವಾದ ಸರ್ಕಾರ) ಮತ್ತು “ಬಡಾ ಫೈಸಲೇ ಲೇನೇ ವಾಲಿ ಸರ್ಕಾರ್‌’ (ದೊಡ್ಡ ನಿರ್ಧಾರ ಕೈಗೊಳ್ಳಬಲ್ಲ ಸರ್ಕಾರ) ಎಂಬ ಮೂರು ಥೀಮ್‌ ಹಾಡುಗಳನ್ನು ಅನಾವರಣಗೊಳಿಸಿದರು.

“ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌’ ಎಂಬ ಮತ್ತೂಂದು ಹಾಡನ್ನೂ ಇದೇ ವೇಳೆ ಬಿಡುಗಡೆ ಮಾಡಿದ ಅವರು, ಪ್ರಚಾರದ ವೇಳೆ ಅದೇ ಮುಖ್ಯ ಹಾಡು ಆಗಿರುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next