Advertisement
ಮತ ಜಾಗೃತಿ ಅಭಿಯಾನದ ಭಾಗವಾಗಿ “ಉದಯವಾಣಿ’ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಈ ವಿಚಾರದಲ್ಲಿ ಗೂಗಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತಿತರ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಜೊತೆಗೆ ಸಮನ್ವಯ ಸಾಧಿಸಿ ಅವರಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು.
Related Articles
Advertisement
ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳುವುದು ಸುಲಭ. ಈ ಮಾಧ್ಯಮಗಳಲ್ಲಿ ಪ್ರಸಾರವಾಗುವ ಯಾವ ವಿಷಯಗಳು ನೀತಿ ಸಂಹಿತೆ ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತವೆ ಅಥವಾ ಇಲ್ಲ ಎಂಬ ಬಗ್ಗೆ ಸ್ಪಷ್ಟ ಕಾನೂನುಗಳು ಇವೆ ಮತ್ತು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳು ಇವೆ. ಆದರೆ, ಸಾಮಾಜಿಕಮಾಧ್ಯಮಗಳು ಇತ್ತಿಚಿನ ವರ್ಷಗಳಲ್ಲಿ ತುಂಬಾ ಪ್ರಚಲಿತಕ್ಕೆ ಬಂದಿವೆ. ಇದರ ಕುರಿತು ಅನೇಕ ವಿಚಾರಗಳಲ್ಲಿ ಇಲ್ಲಿವರೆಗೆ ಆಯೋಗಕ್ಕೂ ಸ್ಪಷ್ಟತೆ ಸಿಕ್ಕಿಲ್ಲ. ಸಾಕಷ್ಟು ವಿಚಾರಗಳಲ್ಲಿ ಕಾನೂನು ತೊಡಕುಗಳು ಇವೆ. ಅತ್ಯಾಧುನಿಕ ತಂತ್ರಜ್ಞಾನ ಇದ್ದಾಗ್ಯೂ ಸಾಮಾಜಿಕ ಮಾಧ್ಯಮಗಳನ್ನು ಹಿಂಬಾಲಿಸುವ ವ್ಯವಸ್ಥಿತ ಜಾಲದ ಕೊರತೆಯೂ ಇದೆ ಎಂದು
ಇದೇ ವೇಳೆ ಸಂಜೀವ ಕುಮಾರ್ ಅಸಹಾಯಕತೆ ತೋಡಿಕೊಂಡರು. 312 ದೂರುಗಳು
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ ಒಟ್ಟು 312 ಪ್ರಕರಣಗಳು ದಾಖಲಾಗಿವೆ. ನಮ್ಮ ಕೋರಿಕೆಯ ಮೇರೆಗೆ ಫೇಸ್ ಬುಕ್, ಗೂಗಲ್, ವಾಟ್ಸಪ್ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿನ 350ಕ್ಕೂ ಹೆಚ್ಚು ಸಂದೇಶಗಳನ್ನು ಆಯಾ ಕಂಪೆನಿಗಳು ತೆಗೆದುಹಾಕಿವೆ. ಇಡೀ ದೇಶದಲ್ಲಿ ಇವುಗಳ ಸಂಖ್ಯೆ ಲಕ್ಷಾಂತರವಾಗಿದೆ. ನೀತಿ ಸಂಹಿತೆ ಜಾರಿ ದೃಷ್ಟಿಯಿಂದ ಫೇಸ್‌ಬುಕ್, ವಾಟ್ಸಪ್, ಗೂಗಲ್ ಮತ್ತಿತರರ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಿಗೆ ಚುನಾವಣಾ ಆಯೋಗದಿಂದ ತರಬೇತಿ ನೀಡಲಾಗಿದೆ. ಅವರಿಂದ ಎಲ್ಲ ಹಂತಗಳಲ್ಲಿ ಸಮನ್ವಯ ಸಾಧಿಸಿ ಸಹಕಾರ ಪಡೆದುಕೊಳ್ಳಲಾಗುತ್ತಿದೆ ಎಂದು ಸಂಜೀವ ಕುಮಾರ್ ಮಾಹಿತಿ ನೀಡಿದರು. ಒಂದೊಂದು ಓಟಿನಿಂದಲೂ ದೇಶ ರಕ್ಷಣೆ
17ನೇ ಲೋಕಸಭೆ ಚುನಾವಣೆ “ಪ್ರಜಾಪ್ರಭುತ್ವದ ಮಹಾ ಉತ್ಸವ’ ಆಗಿದೆ. ಇದರಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಮತ ಹಾಕುವ ಮೂಲಕ ಸಂಭ್ರಮಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತಕ್ಕೂ ಅದರದೇ ಆದ ಮೌಲ್ಯವಿದೆ. ಮತದಾನ ಪ್ರತಿಯೊಬ್ಬ ಪ್ರಜೆಯ ಪವಿತ್ರ ನಾಗರಿಕ ಸೇವೆಯಾಗಿದೆ. ಕ್ರಿಕೆಟ್‌ನಲ್ಲಿ ಒಂದು ಓಟ ಪಂದ್ಯದ ಫಲಿತಾಂಶ ನಿರ್ಣಯಿ ಸುತ್ತದೆ. ಹಾಗೆಯೇ ಒಂದು ಓಟು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಟ್ಟುವಲ್ಲಿ ನಿರ್ಣಾ ಯಕ ಪಾತ್ರ ವಹಿಸುತ್ತದೆ. ನನ್ನ ಒಂದು ಓಟಿನಿಂದ ಏನಾಗಲಿದೆ ಎಂಬ ಅಸಡ್ಡೆ ಬೇಡ, ಮತದಾನದ ದಿನ ರಜೆಯನ್ನು ಮೋಜಿಗೆ ಮೀಸಲಿಡಬೇಡಿ. ಕಡ್ಡಾಯವಾಗಿ ಮತದಾನ ದಲ್ಲಿ ಪಾಲ್ಗೊಳ್ಳಿ, ಇತರರಿಗೂ ಪ್ರೇರೇಪಿಸಿ ಎಂದು ಸಂಜೀವ್‌ಕುಮಾರ್ ಸಲಹೆ ನೀಡಿದರು. ನೈತಿಕ ಚುನಾವಣೆ ಸಾಧ್ಯವಾಗಬೇಕಾದರೆ ಮತದಾರರು ಹೆಚ್ಚು ಜಾಗೃತರಾಗಬೇಕು. ಅಭ್ಯರ್ಥಿಗಳ ಪೂರ್ವಾಪರ ತಿಳಿದುಕೊಂಡು ಯಾರು ಉತ್ತಮರು ಎಂದು ತಿಳಿದು ತಮ್ಮ ಪ್ರತಿನಿಧಿಗಳನ್ನು ಚುನಾಯಿಸ ಬೇಕು. ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗದೇ ಸ್ವಂತ ವಿವೇಕ ದಿಂದ ಮುಕ್ತವಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು.