Advertisement
ಭಾರತ ನಾಲೇಡ್ಜ್ ಹಬ್ ಆಗಿದ್ದು, ಕರ್ನಾಟಕ ಎಜುಕೇಷನ್ ಹಬ್ ಎನಿಸಿಕೊಂಡಿದೆ. ಇದಕ್ಕೆ ಖಾಸಗಿ ಸಂಸ್ಥೆಗಳ ಕೊಡುಗೆ ಸಾಕಷ್ಟಿದೆ. ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ, ಮಣಿಪಾಲ್ ವಿಶ್ವವಿದ್ಯಾಲಯ ಹೀಗೆ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇಲ್ಲಿನ ಶೈಕ್ಷಣಿಕ ಗುಣಮಟ್ಟ ಉನ್ನತೀಕರಿಸುವಲ್ಲಿ ಸಹಕಾರಿಯಾಗಿವೆ. ಖಾಸಗಿ ಸಹಭಾಗಿತ್ವದಲ್ಲಿ ಶಿಕ್ಷಣ ಕ್ಷೇತ್ರವನ್ನು ಉನ್ನತೀಕರಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.
Related Articles
Advertisement
ಎಂ.ಎಸ್. ರಾಮಯ್ಯ ಸಂಸ್ಥೆಯ ನೂತನ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಇಸ್ರೋ ಸಂಸ್ಥೆಯ ಅಧ್ಯಕ್ಷ ಕಿರಣ್‌ಕುಮಾರ್ ಅವರು, ಇಸ್ರೋ ಸಂಸ್ಥೆ ಜನರ ವಿಶ್ವಾಸದ ಆಧಾರದಲ್ಲಿ ದೇಶದ ಉನ್ನತಿಗೆ ಶ್ರಮಿಸುತ್ತಿದೆ. ಮೀನುಗಾರರು ಸಮುದ್ರದ ಯಾವ ಭಾಗದಲ್ಲಿ ಮೀನು ಹಿಡಿಯಬೇಕು ಮತ್ತು ಹವಾಮಾನ ವರದಿ ಇತ್ಯಾದಿ ಎಲ್ಲವನ್ನು ಅವರ ಪ್ರಾದೇಶಿಕ ಭಾಷೆಯಲ್ಲೇ ಇಸ್ರೋ ನೀಡುತ್ತಿದೆ. ನಮ್ಮಲ್ಲಿ ಲಭ್ಯವಿರುವ ಸೌಲಭ್ಯ ಬಳಸಿಕೊಂಡು ಸತತ ಪರಿಶ್ರಮದ ಮೂಲಕ ಸಮಾಜದ ಒಳಿತಿಗೆ ಬೇಕಾದ ಉತ್ತಮ ಅಂಶವನ್ನು ನೀಡಲು ಸಾಧ್ಯ ಎಂದರು.
ಬಾಹ್ಯಾಕಾಶದಲ್ಲಿ ಇಸ್ರೋ ಸಂಸ್ಥೆಯ ಸಾಧನೆ ಜಗತ್ತಿನ ಗಮನ ಸೆಳೆಯುತ್ತಿದೆ. ನಮ್ಮಲ್ಲಿರುವ ಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡು ಇಸ್ರೋ ಕೆಲಸ ಮಾಡುತ್ತಿದೆ. ಜಗತ್ತು ವೇಗವಾಗಿ ಬದಲಾಗುತ್ತಿದೆ. ಸಾಮಾಜಿಕ ಹಾಗೂ ಭೌಗೋಳಿಕವಾಗಿ ಬದಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಕೌಶಲ್ಯ ನೀಡುವ ಮೂಲಕ ಹೊಸ ಸಂಶೋಧನೆಗೆ ಒಗ್ಗಿಕೊಳ್ಳುವಂತೆ ಪ್ರೇರಣೆಯಾಗಬೇಕು. ಭವಿಷ್ಯದಲ್ಲಿ ಭಾರತಕ್ಕೆ ಬರುವವರ ಸಂಖ್ಯೆ ಹೆಚ್ಚಾಗಲಿದೆ. ಭವಿಷ್ಯ ಭಾರತದ ಪಾಲಿಗೆ ವರವಾಗಲಿದೆ ಎಂದು ಹೇಳಿದರು.
ಎಂ.ಎಸ್. ರಾಮಯ್ಯ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಿರುವ ಡಾ.ಎಂ.ಎಸ್. ರಾಮಯ್ಯ ಅವರ ಆಳೆತ್ತರದ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಲಾಯಿತು.ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಹಾಗೂ ರಾಜ್ಯ ಯೋಜನಾ, ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್, ಕಾರ್ಯದರ್ಶಿ ಎಂ.ಆರ್.ರಾಮಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪೆಂಚಕುಂಡ ಪಂಚಿತೆ
ಪೆಂಚಕುಂಡ ಪಂಚಿತೆ, ಪಂಚಕೂಡ ಉಂಡದು….(ಆದಾಯ ವೃದ್ಧಿಸಿಕೊಳ್ಳದೇ ದಾನ ಮಾಡಲು ಹೊರಟರೆ ಪಂಚೆಯೂ ಉಳಿಯುವುದಿಲ್ಲ). ಹೀಗಾಗಿ ಮೊದಲು ಉತ್ತಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಬೇಕು. ನಂತರ ಅದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಏಳ್ಗೆಗಾಗಿ ವಿನಿಯೋಗ ಮಾಡಬೇಕು. ಸಂಪತ್ತು ಸಂಗ್ರಹಿಸದೇ ದಾನ ಮಾಡಿದರೆ, ನಮ್ಮಲ್ಲಿ ಏನೂ ಉಳಿಯುವುದಿಲ್ಲ ಎಂದು ಸಚಿವ ವೆಂಕಯ್ಯ ನಾಯ್ಡು ಹೇಳಿದರು.