ಸಂಭಾಷಣೆ, ದೃಶ್ಯ ಜೋಡಣೆಯವರೆಗೆ ಅಧ್ಯಯನದ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಸಿದಟಛಿಪಡಿಸಿದಾಟಕವಿದು. ಭಿನ್ನ ತಿರುವುಗಳ ದೃಶ್ಯಗಳನ್ನು ಕಟ್ಟಿ, ಉತ್ತಮ ಅಭಿನಯದೊಂದಿಗೆ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲುಪುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾದದ್ದು ಹೆಗ್ಗಳಿಕೆ.
Advertisement
ಲೇಖಕಿಯೊಬ್ಬಳ ಬದುಕಿನ ಪಯಣದ ಪುಟಗಳನ್ನು ಕೃತಿ ಮೂಲಕ ಅನಾವರಣಗೊಳಿಸ ಹೊರಟು, ಗೌಪ್ಯತೆಯನ್ನು ಮೀರಿ ಹೆಣ್ಣು ಬದುಕು ಕಟ್ಟಿಕೊಳ್ಳಲಾಗದು ಎಂಬ ವಾಸ್ತವ ಸತ್ಯವನ್ನು ಬಿಂಬಿಸುವಂತಿದೆ. ಹೆಣ್ಣೊಬ್ಬಳು “ಹೊಂದಾಣಿಕೆ’ ಎಂಬ ಪದವನ್ನು ಮುಂದಿಟ್ಟು, ತನ್ನವರಿಂದ ಬೇಕಿದ್ದನ್ನು ಪಡೆದು ಸಾಗುವಲ್ಲಿ ಹಿಂದೆ ಸರಿಯುವುದಿಲ್ಲ ಎಂಬುದಂತೂ ನಿಜವೆಂದು ಸ್ಪಷ್ಟವಾಗುತ್ತದೆ. ಸಾಮರ್ಥ್ಯ, ಸಾಧನೆಯ ಹಿಂದೆಏನೋ ಇದೆ ಎಂಬ ಸಮಾಜದ ಶಂಕಿತ ದೃಷ್ಟಿಗಳ ಬಿರುನುಡಿಗಳನ್ನು ಎದುರಿಸುವಲ್ಲಿ ಸೋತಂತೆ
ಕಂಡರೂ, ಅವಳು ಮತ್ತೆ ಗಟ್ಟಿಯಾಗುತ್ತಾಳೆ.
ಇಡೀ ನಾಟಕ ಇಷ್ಟೊಂದು ವಿಷಯಗಳನ್ನು ಕೆದಕಿ, ಬೆದಕಿದ ಪತ್ರಕರ್ತೆಯೊಬ್ಬಳು ತಾನೂ
ಹೆಣ್ಣಾಗಿ ಅವಳ ಗೌಪ್ಯತೆಯ ವಿಚಾರಗಳನ್ನು ಗೌಪ್ಯವಾಗಿರಿಸುವಲ್ಲಿ ಸಫಲಳಾಗುತ್ತಾಳೆ.
ಗತಕಾಲದ ವಿಷಯ ವಿಚಾರಗಳೇ ದಾಖಲೆ ಅಲ್ಲ. ಹಾಗಂತ ದಾಖಲಾಗಿದ್ದೆಲ್ಲಾ ಸುಳ್ಳಲ್ಲ ಎಂಬ ವಾಸ್ತವ
ಚಿತ್ರಣವನ್ನು ನಾಟಕದಲ್ಲಿ ಪ್ರಸ್ತುತ ಪಡಿಸಲಾಗಿದೆ.
Related Articles
ನೋಡುಗರನ್ನು ಚಿಂತನೆಗೆ ತಳ್ಳುತ್ತದೆ. ಈ ನಿಟ್ಟಿನಲ್ಲಿ ಒಂದೇ ಪಾತ್ರಕ್ಕೆ ನಾಲ್ಕು ಆಯಾಮಗಳನ್ನು ಸೃಷ್ಟಿಸಿ, ನಾಲ್ಕು ಭಿನ್ನ ಪಾತ್ರಧಾರಿಗಳನ್ನು ಬಳಸಿಕೊಂಡಿರುವ ನಿರ್ದೇಶಕ ಜಗನ್ ಪವಾರ್ ಜಾಣ್ಮೆ ಮೆಚ್ಚತಕ್ಕದ್ದು. ಅಲ್ಲದೆ ಆ ಪಾತ್ರದ ಜತೆ ಸರಿಸಮವಾಗಿ ನಿಲ್ಲಬಲ್ಲ ಸಹ ಪಾತ್ರಗಳು ಪೂರಕ ಯಶಸ್ಸಿನ ಭಾಗವೆನ್ನಬಹುದು. ಹದಿಹರೆಯದ ಆಕರ್ಷಣೆಗಳು ನೈಜ ಪ್ರೇಮವಲ್ಲ ಅದು ಬರೀ ಜಾರುವ ಹಾವಸೆ ಮೇಲಿನ ಹೆಜ್ಜೆ ಎಂಬುದನ್ನು ಸೂಕ್ಷ್ಮವಾಗಿ ಹೊಂದಿಸಿದ್ದು, ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ
ಕಿವಿಮಾತಿನಂತಿದೆ. ನಾಟಕ ನಿರ್ದಿಷ್ಟ ಭಾಷೆಯ ಹಂಗಿಗೊಳಗಾಗದೆ, ಬಹುಭಾಷಾ ನಾಟಕವೆನ್ನುವಂತೆ ಎಲ್ಲ ಅರ್ಥೈಸಿಕೊಳ್ಳುವಂತೆ ಆಗಿರುವುದು ಉತ್ತಮ ಅಂಶ.
Advertisement
ನಾಟಕದುದ್ದಕ್ಕೂ ಕೇಂದ್ರೀಕೃತವಾಗಿರುವ ಅಜ್ಜಿ ಪಾತ್ರವನ್ನು ಜೀವ ತುಂಬಿ ಅಭಿನಯಿಸಿದ ಆ್ಯಶೆಲ್ ಮರಿಯ ಡಿ’ಸಿಲ್ವಾ, ಪತ್ರಕರ್ತೆಯಾಗಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ನಾಟಕದ ನಡೆಯನ್ನು ಕಾಯ್ದುಕೊಂಡ ಸಾಕೇತ ಶೆಟ್ಟಿ, ಕಾಲೇಜು ದಿನಗಳಲ್ಲಿ ಪ್ರೇಮದ ಸುಳಿಗೆ ಬಿದ್ದರೂ ಬಿಂದಾಸ್ ಬಣ್ಣದ ಹುಡುಗಿಯಾಗಿ ಕಾಣಿಸಿಕೊಂಡ ನೀಶಲ್, ರಾಜಕೀಯ ವ್ಯಕ್ತಿಯಾಗಿ ಇನ್ನೊಬ್ಬರ ಬದುಕನ್ನು ಒಡೆಯ ಹೊರಟ ರಮೇಶ್ ಪಾತ್ರಧಾರಿ ಅಕ್ಷಯ್, ಕುಟುಂಬದಲ್ಲಿ ಅನ್ಯೋನ್ಯತೆಯನ್ನು ಕಾಯ್ದುಕೊಂಡು ಸಹಕಾರ ನೀಡುತ್ತಿದ್ದ ಗಂಡನಪಾತ್ರ ಮಾಡಿದ ವಿಮರ್ಶ್ ಶೆಟ್ಟಿ, ಹೆಂಡತಿಯಾಗಿ ಬಹಳ ಲವಲವಿಕೆಯಿಂದ ಅಭಿನಯಿಸಿದ ಸೃಷ್ಟಿ
, ದೆಹಲಿಯ ರಾಜಕೀಯ ಕಚೇರಿ ತಲುಪುವ ಪಾತ್ರ ನಿರ್ವಹಿಸಿದ ರೋಹಿಣಿ, ರಾಜಕೀಯ
ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಸಮಿತಿ ಮುಖ್ಯಸ್ಥ ಪಾತ್ರ ವಹಿಸಿದ ಅಕ್ಷಿತ್‌ರವರೆಲ್ಲರ ಅಭಿನಯ
ಚೆನ್ನಾಗಿತ್ತು. ಉಳಿದೆಲ್ಲಾ ಪಾತ್ರಗಳು ಪೂರಕವಾಗಿ ಒಟ್ಟು ನಾಟಕದ ಓಘಕ್ಕೆ ಪೂರಕವಾಗಿತ್ತು. ಸಂಗೀತ
ಸಂದಭೋìಚಿತವಾಗಿತ್ತು. ಹಿತಮಿತವಾಗಿ ದೃಶ್ಯದ ನಡೆಗೆ ಹೊಂದಿ ಕಥಾಮಟ್ಟವನ್ನು ಎತ್ತರಕ್ಕೇರಿಸಿತ್ತು. ಜೆರಾಲ್ಡ್ ಫುರ್ಟಾಡೋ ಎಸ್.ಜೆ.