ಕನಕಪುರ: ಶಿಕ್ಷಣದ ಹಕ್ಕು ಕಾಯ್ದೆಯನ್ನು ಯಾರು ಸಹ ಉಲ್ಲಂಘಿಸುವ ಹಾಗಿಲ್ಲ, ಅಂತಹ ದೂರುಗಳು ಬಂದರೆ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಪೋಷಕರಿಗೆ ಹಣ ವಸೂಲಿ ಮಾಡುವಂತಿಲ್ಲ ಎಂದು ಮಂಡ್ಯ ಜಿಲ್ಲಾ ಡಯೆಟ್ ಉಪನಿರ್ದೇಶಕ ರಾಮನಗರ ಜಿಲ್ಲಾ ಆರ್‌ಟಿಇ ಸಂಬಂಧಿಸಿದ ದೂರುಗಳನ್ನು ಪರಿಶೀಲನೆಗೆ ನಿಯೋಜಿತ ಅಧಿಕಾರಿಯಾದ ಶಿವಮಾದಪ್ಪ ಹೇಳಿದರು.
ನಗರದ ಸೆಂಟ್ಥಾಮಸ್ ಶಾಲೆಯಲ್ಲಿ ತಾಲೂಕು ಶಿಕ್ಷಣ ಇಲಾಖೆ ಆರ್‌ಟಿಇ ಸಂಭಂದಿಸಿದ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಮತ್ತು ದೂರುಗಳ ಸ್ವೀಕಾರ ಸಭೆಯಲ್ಲಿ ಖಾಸಗಿ ಶಾಲೆಗಳ ವ್ಯವಸ್ಥಾಪಕರನ್ನು ಉದ್ದೇಶಿಸಿ ಮಾತನಾಡಿದರು.
ದೂರು ಬರದಂತೆ ಎಚ್ಚರವಹಿಸಿ: ಶಿಕ್ಷಣ ಹಕ್ಕು ಕಾಯ್ದೆಯನ್ವಯ ದಾಖಲಾದ ಯಾವುದೇ ಮಗುವಿಗೆ ಯಾವುದೇ ಶಿಕ್ಷಣ ಸಂಸ್ಥೆಯವರು ತೊಂದರೆ ಕೊಡುವ ಆಗಿಲ್ಲ, ಹಣ ವಸೂಲಿ ಮಾಡುವಂತಿಲ್ಲ ಈ ಬಗ್ಗೆ ವ್ಯಾಪಕ ದೂರು ಕೇಳಿಬಂ ದಿರುವುದರಿಂದ ಇಂತಹ ಸಭೆ ನಡೆಸಲು ಇಲಾಖೆಯ ಸೂಚನೆ ಇದ್ದು, ಒಂದು ದೂರು ಬಂದಿದ್ದು ಅದನ್ನು ಸ್ಥಳದಲ್ಲೇ ಬಗೆಹರಿಸಿದ್ದೇವೆ. ಯಾವುದೇ ಶಾಲೆಯಿಂದ ಇಂತಹ ದೂರು ಬರದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು. ಈ ಮೂಲಕ ದೇಶಕ್ಕೆ ಉತ್ತಮ ಮಕ್ಕಳನ್ನು ರೂಪಿಸುವ ಜವಾಬ್ದಾರಿಯನ್ನು ನೆನಪಿಸಿದರು.
ಪೋಷಕರೊಂದಿಗೆ ಸಹಕರಿಸಬೇಕು: ಪ್ರತಿಷ್ಠಿತ ಶಾಲೆಯಲ್ಲಿ ಮಗು ಕಲಿಕೆಯಲ್ಲಿ ಹಿಂದುಳಿದಿದೆ ಎಂದು ಆ ಮಗುವನ್ನು ದೂಷಿಸುವ ಹಾಗಿಲ್ಲ ಅಂತಹ ಮಕ್ಕಳಿಗೆ ನೀವು ಬೇರೆ ವಿದ್ಯಾರ್ಥಿಗಳಿಂದ ಬೇರ್ಪಡಿಸಿ ನೋಡುವಂತಿಲ್ಲ ಆ ಮಗು ಕಲಿಕೆಯಲ್ಲಿ ಹಿಂದುಳಿಯಲು ಕಾರಣವೇನು ಎಂಬುದನ್ನು ಅರಿತು ನೀವು ಮಗುವಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸಲು ಪೋಷಕರೊಂದಿಗೆ ಸಹಕರಿಸಬೇಕು ಎಂದರು.
ಸಮಸ್ಯೆ ಬಗೆಹರಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್ ಮಾತನಾಡಿ, ಕನಕಪುರ ತಾಲೂಕಿನ ಎಲ್ಲಾ ಖಾಸಗಿ ಮತ್ತು ಅನುದಾನಿತ ಶಾಲೆಗಳ ವ್ಯವಸ್ಥಾಪಕರ ಸಭೆ ಕರೆದು ಈಗಾಗಲೇ ಈ ಸಂಬಂಧ ಎಲ್ಲರಿಗೂ ಸೂಚನೆ ನೀಡಲಾಗಿದ್ದು, ನಮ್ಮ ಹಂತದಲ್ಲಿ ಬಂದಿರುವ ದೂರುಗಳನ್ನು ಬಗೆಹರಿಸಿ ಅವುಗಳನ್ನು ಮುಂದಿನ ಹಂತಕ್ಕೆ ಹೋಗದಂತೆ ಸರಿಪಡಿಸಿದ್ದೇವೆ ಇನ್ನು ಮುಂದೆ ನೀವು ನಮ್ಮನ್ನು ಬಿಟ್ಟು ಮೇಲಧಿಕಾರಿಗಳಿಗೆ ದೂರು ಹೋಗದಂತೆ ಎಚ್ಚರಿಕೆಯಿಂದ ಪೋಷಕರ ಬಳಿ ಸಮಾಧಾನದಿಂದ ನಡೆದುಕೊಂಡು ಎದುರಾಗು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು.
ಫಲಕ ಪ್ರದರ್ಶನ ಮಾಡಬೇಕು: ಇನ್ನು ಪ್ರತಿ ಶಾಲೆಯಲ್ಲಿ ಮಗುವಿನ ಶುಲ್ಕದ ಫಲಕ ಪ್ರದರ್ಶನ ಮಾಡಬೇಕು, ಕರ್ತವ್ಯದಲ್ಲಿರುವ ಶಿಕ್ಷಕರ ಸೇವಾ ದಾಖಲೆ ಸಿದ್ಧಮಾಡಬೇಕು, ಅವರ ಪಿ.ಎಫ್. ನೀಡಬೇಕು, ಕಡ್ಡಾಯವಗಿ ಶುದ್ಧ ಕುಡಿಯುವ ನೀರು, ಉತ್ತಮ ಶೌಚಾಲಯ, ಉತ್ತಮ ಕಟ್ಟಡ, ಸಂಚಾರ ಸುರಕ್ಷತೆ ಸಂಬಂಧಿಸಿದಂತೆ ವಾಹನ ಸೇರಿದಂತೆ ಎಲ್ಲವು ನಿಯಮಾವಳಿಗೆ ಒಳಪಡಬೇಕು ಎಂದು ತಿಳಿಸಿದರು. ದರು. ಖಾಸಗಿ ಶಾಲೆಗಳ ವ್ಯವ ಸ್ಥಾಪಕರು ಕಳೆದ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯ ವಿದ್ಯಾರ್ಥಿಗಳ ಹಣ ಬಿಡುಗಡೆ ಮಾಡಿಲ್ಲ ಅದನ್ನು ಮಾಡಿಕೊಡುವ ಮೊದಲು ಈ ದೂರು ಸಭೆ ಕರೆದಿದ್ದೀರಿ ನಮಗೆ ಮೊದಲು ಸರಕಾರದಿಂದ ಹಣ ಕೊಡಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.ಸಭೆಯಲ್ಲಿ ಶಿಕ್ಷಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಕರಾದ ರಾಮಪ್ರಸ್ನನ್ನ, ದೇವೇಗೌಡ , ಶ್ರೀನಿವಾಸ್, ಸೇರಿದಂತೆ ಇತರರು ಇದ್ದರು.