ಪ್ರವಾಸೋದ್ಯಮ ಮತ್ತು ಐಟಿ ಕಂಪನಿಗಳನ್ನು ನಂಬಿಕೊಂಡಿದ್ದ ಹೋಟೆಲ್‌ಗಳು ಇನ್ನೂ ಬಾಗಿಲು ತೆರೆದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಅವುಗಳು ಸದ್ಯದಲ್ಲಿ ತೆರೆದುಕೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇನ್ನೂ ತೆರೆದು ಕೊಂಡಿಲ್ಲ. ಐಟಿ-ಬಿಟಿ ಕಂಪನಿಗಳು ಕೂಡ ವರ್ಕ್ ಫ್ರಮ್ ಹೋಮ್ ಕಾರ್ಯಕ್ಕೆ ಮೊರೆ ಹೋಗಿವೆ. ಆ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪನಿಗಳು ಮತ್ತು ಪ್ರವಾಸೋದ್ಯಮ ನಂಬಿಕೊಂಡಿದ್ದ ಹಲವು ಹೋಟೆಲ್‌ಗಳ ಮಾಲೀಕರು ಬಾಗಿಲು ತೆರೆಯಲು ಹಿಂದೇಟು ಹಾಕುತ್ತಿದ್ದಾರೆ.
Advertisement
ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ವೈಟ್ ಫೀಲ್ಡ್, ಮಾನ್ಯತಾ ಟೆಕ್‌ಪಾರ್ಕ್ ಸೇರಿದಂತೆ ಬೆಂಗಳೂರಿನ ಇನ್ನೂ ಕೆಲವು ಪ್ರದೇಶಗಳ ವ್ಯಾಪ್ತಿಯಲ್ಲಿ ಐಟಿ- ಕಂಪನಿಗಳು ನೆಲೆಸಿವೆ. ಈ ಪ್ರದೇಶವ್ಯಾಪ್ತಿಯಲ್ಲಿ ಸುಮಾರು1 ಸಾವಿರಕ್ಕೂ ಅಧಿಕ ಹೋಟೆಲ್‌ಗಳು ಇವೆ. ಆದರೆ ಕಳೆದ ಮಾರ್ಚ್‌ನಲ್ಲಿ ಬಾಗಿಲು ಹಾಕಿರುವ ಈ ಹೋಟೆಲ್‌ಗಳು ಇನ್ನೂ ತೆರೆದಿಲ್ಲ. ಕೋವಿಡ್ ಮೊದಲ ಮತ್ತು 2ನೇ ಅಲೆಯಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿದ ಹೋಟೆಲ್ ಮಾಲೀಕರು ಪ್ರವಾಸೋದ್ಯಮ ಮತ್ತು ಐಟಿಬಿಟಿ ಕಂಪನಿಗಳ ವ್ಯಾಪ್ತಿಯಲ್ಲಿರುವ ಹೋಟೆಲ್ ಗಳನ್ನು ತೆರೆಯುವ ಬಗ್ಗೆ ಆಲೋಚನೆ ಹೊಂದಿಲ್ಲ. ಏತನ್ಮಧ್ಯೆ ಸಂಭಾವ್ಯ ಮೂರನೇ ಅಲೆಯ ಬಗ್ಗೆ ಈಗಾಗಲೇ ತಜ್ಞರು ಮಾತನಾಡುತ್ತಿದ್ದಾರೆ. ಹೀಗಾಗಿ ಹೋಟೆಲ್ ಉದ್ಯಮಕ್ಕೂ 3ನೇ ಅಲೆಯ ಭೀತಿ ಶುರುವಾಗಿದೆ ಎಂದು ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಟಾರ್ ಹೇಳಿದ್ದಾರೆ.
ಡಿಸೆಂಬರ್‌ವರೆಗೂ ಆಂತಕ: ಬೆಂಗಳೂರಿನಲ್ಲಿ ಈಗ ಸುಮಾರು 24,500 ಹೋಟೆಲ್‌ಗಳಿವೆ. ಇದರಲ್ಲಿ ಸುಮಾರು 3,500 ಹೋಟೆಲ್‌ಗಳು ಹೋಟೆಲ್ ಕಂ ಕೊಠಡಿ ಸೇವೆಯನ್ನು ಹೊಂದಿದೆ. ದರ್ಶನಿ ಸೇರಿದಂತೆ ಕೆಲವು ಹೋಟೆಲ್‌ಗಳ ವ್ಯಾಪಾರ ಶೇ.70 ರಷ್ಟಿದೆ. ಆದರೆ, ಹೋಟೆಲ್ ಕಂ ಕೊಠಡಿ ಸೇವೆ ಹೊಂದಿರುವ ಹೋಟೆಲ್‌ಗಳಲ್ಲಿ ಶೇ.30 ಮಾತ್ರ ವ್ಯಾಪಾರವಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
Related Articles
ರಾಜ್ಯದ ಪ್ರವಾಸಿಗಳು ಭೇಟಿ ನೀಡುತ್ತಿಲ್ಲ. ಇದು ಹೋಟೆಲ್ ಉದ್ಯಮದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದಿದ್ದಾರೆ. ಕೋವಿಡ್ ಆತಂಕ ಮತ್ತೆ ಶುರುವಾಗಿದೆ. ಹೀಗಾಗಿ ಹೋಟೆಲ್ ಉದ್ಯಮ ಡಿಸೆಂಬರ್ ಬಳಿಕ ದೊಡ್ಡ ಮಟ್ಟದಲ್ಲಿ ಚೇತರಿಕೆ ಕಾಣುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
Advertisement
ಉತ್ತರ ಭಾರತ ಕಾರ್ಮಿಕರಿಗೆ ಭಯರಾಜ್ಯದ ಹೋಟೆಲ್ ಉದ್ಯಮದಲ್ಲಿ ಸುಮಾರು 1.5 ಲಕ್ಷ ಮಂದಿ ಕಾರ್ಮಿಕರಿದ್ದಾರೆ. ಅದರಲ್ಲಿ ಸುಮಾರು 80 ಸಾವಿರದಷ್ಟು ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ, ಪಶ್ಚಿಮಬಂಗಾಳ ಸೇರಿದಂತೆ ಉತ್ತರ ಭಾರತ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಕೋವಿಡ್ 2ನೇ ಅಲೆಯ ವೇಳೆ ಹಲವು ಮಂದಿ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಅದರಲ್ಲಿ ಶೇ.30 ಮಂದಿ ಮಾತ್ರ ಕಾರ್ಮಿಕರು ಕೆಲಸಕ್ಕೆ ಮರಳಿದ್ದಾರೆ. ಉಳಿದ ಕಾರ್ಮಿಕರು 3ನೇ ಅಲೆಯ ನಂತರ ಬರುವುದಾಗಿ ಹೇಳುತ್ತಾರೆ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ ಕೋವಿಡ್ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪನಿಗಳಿಗೆ ವರ್ಕ್ ಫ್ರಮ್ ಹೋಮ್‌ಗೆ ಮೊರೆ ಹೋಗಿವೆ. ಆ ಹಿನ್ನೆಲೆಯಲ್ಲಿಯೇ ಐಟಿ-ಬಿಟಿ ಉದ್ಯಮವನ್ನು ಹೆಚ್ಚಿಕೊಂಡಿದ್ದ ಹೋಟೆಲ್‌ಗಳು ಬಾಗಿಲು ಹಾಕಿವೆ.
-ಪಿ.ಸಿ.ರಾವ್, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷರು -ದೇವೇಶ ಸೂರಗುಪ್ಪ