Advertisement

ಇಂದಿರಾ ಕ್ಯಾಂಟೀನ್‌ಗೆ ಹಿಡಿದ ಗ್ರಹಣ

11:27 AM Sep 27, 2019 | Suhan S |

ಕುಂದಗೋಳ: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದ ಇಂದಿರಾ ಕ್ಯಾಂಟೀನ್‌ಗೆ ಪಟ್ಟಣದಲ್ಲಿ ಗ್ರಹಣ ಹಿಡಿದಿದೆ. ರಾಜ್ಯದಲ್ಲಿ ಅನೇಕ ಕಡೆ ಹಸಿದ ಹೊಟ್ಟೆಗೆ ಕಡಿಮೆ ದರದಲ್ಲಿ ಕ್ಯಾಂಟೀನ್‌ಗಳು ಆಹಾರ ನೀಡುತ್ತಿದ್ದರೆ, ಪಟ್ಟಣದಲ್ಲಿ ಮಾತ್ರ ಕಟ್ಟಡವೇ ಇನ್ನೂ ಮೇಲೇಳುತ್ತಿಲ್ಲ. ಕಳೆದ ಫೆಬ್ರವರಿಯಲ್ಲಿ ತೋಟಗಾರಿಕಾ ಇಲಾಖೆ ಪಕ್ಕದಲ್ಲಿ ಪಟ್ಟಣ ಪಂಚಾಯತಿಯ 352ನೇ ಸರ್ವೇ ನಂಬರಿನಲ್ಲಿ 40ಗಿ60 ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಚಾಲನೆ ನೀಡಲಾಗಿತ್ತು.

Advertisement

ಗುತ್ತಿಗೆದಾರರು ಕೇವಲ ನೆಲಹಾಸು ಕಾಂಕ್ರೀಟ್‌ ಹಾಕಿದ್ದು, ಕಟ್ಟಡ ಇನ್ನೂ ಮೇಲೆ ಎದ್ದಿಲ್ಲ. ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸುವುದರಿಂದ ನಿತ್ಯವು ಕಚೇರಿ ಕೆಲಸಗಳಿಗೆ ಇಲ್ಲಿಗೆ ಆಗಮಿಸುವ ಸಾವಿರಾರು ಬಡ ಜನರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಹಿಂದಿನ ಶಾಸಕರಾದ ದಿ| ಸಿ.ಎಸ್‌. ಶಿವಳ್ಳಿಯವರು ಮುಂದಡಿ ಇಟ್ಟಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣಕ್ಕಿನ್ನೂ ಕ್ಯಾಂಟೀನ್‌ ಮರೀಚಿಕೆಯಾಗಿದೆ.

ರಾಜ್ಯದಲ್ಲಿ ಸರಕಾರವೂ ಬದಲಾಗಿದ್ದು, ಕ್ಯಾಂಟೀನ್‌ ನಿರ್ಮಾಣಕ್ಕೆ ಈಗಿನವರು ಇಚ್ಛಾಶಕ್ತಿ ತೋರುವರೆ ಎಂಬ ಪ್ರಶ್ನೆ ಎದುರಾಗಿದೆ. ಸರಕಾರಗಳು ಬದಲಾದರೂ ಬಡವರಿಗೆ ಅನ್ನ ನೀಡುವ ನಿಟ್ಟಿನಲ್ಲಿ ರಾಜಕೀಯ ಕೈಬಿಟ್ಟು ಕ್ಯಾಂಟೀನ್‌ ಆರಂಭಿಸಬೇಕು ಎಂಬುದು ಜನಾಗ್ರಹವಾಗಿ¨

Advertisement

Udayavani is now on Telegram. Click here to join our channel and stay updated with the latest news.

Next