Advertisement
ನೀವು ಗಮನಿಸಿರಬಹುದು, ಫುಟ್‌ಪಾತ್ ವ್ಯಾಪಾರಿಗಳು ಒಂದು ವೈರಿನ ಮಂಚ ಅಥವಾ ಸ್ಟ್ಯಾಂಡಿನ ಮೇಲೆ ಪ್ಲಾಸ್ಟಿಕ್ ಶೀಟ್ ಹಾಕಿ ಅದರ ಮೇಲೆ ಮಾರಾಟದ ವಸ್ತುಗಳನ್ನಿಟ್ಟು ಮಾರುತ್ತಿರುತ್ತಾರೆ. ಇಲ್ಲಿ ಕೂಡ ಹಾಗೇ ಒಂದು ವೈರಿನ ಮಂಚದ ಮೇಲೆ ಪ್ಲಾಸ್ಟಿಕ್ ಶೀಟ್ ಹಾಕಿ ಚಪ್ಪಲಿಗಳನ್ನು ಜೋಡಿಸಿದ್ದರು. ತುಂಬಾ ತುರ್ತಾಗಿ ಬೇಕಾದ್ದರಿಂದ ಅಲ್ಲೇ ಕೊಳ್ಳಲು ಕೈಲಿದ್ದ ಒಂದು ಸೂಟ್‌ಕೇಸ್ ಒಂದು ಬ್ಯಾಗ್ ಕೆಳಗಿಟ್ಟೆ. ಚಪ್ಪಲಿ ಖರೀದಿಸಿ ಹಾಕಿಕೊಂಡು ಆತನಿಗೆ ಹಣ ಕೊಟ್ಟು ಎರಡು ಬ್ಯಾಗ್‌ಗಳನ್ನು ಒಂದೊಂದು ಕೈಯಲ್ಲಿ ಹಿಡಿದು ಹೊರಟೆ. ಇನ್ನೇನು ಬಸ್‌ಸ್ಟಾಂಡ್ ಕಡೆಗೆ ತಲುಪಬೇಕು ಆಗ ನನಗೆ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಬ್ಯಾಗಿನ ಭಾರದಲ್ಲಿ ಏನೋ ವ್ಯತ್ಯಾಸವಾದಂತೆನಿಸಿ ನೋಡಿಕೊಂಡರೆ, ಕೈಯಲ್ಲಿರುವುದು ಎರಡೇ ಬ್ಯಾಗ್‌ಗಳು ಒಂದು ನಾನು ಹಿಡಿದಿದ್ದು, ಮತ್ತೂಂದು ನನ್ನ ಮಗನ ಕೈಯಲ್ಲಿದ್ದ ಹಗುರವಾದ ಬ್ಯಾಗ್ ಮಾತ್ರ. ಓಹ್! ದೇವರೇ ನಾನು ಹಿಡಿದಿದ್ದ ಇನ್ನೊಂದು ಸೂಟ್ಕೇಸ್ ಇಲ್ಲ ಬರೇ ಎರಡು ಬ್ಯಾಗ್‌ಗಳು ಮಾತ್ರ ಇವೆ ಎಂದು ಗಾಬರಿಯಾದೆ. ನನ್ನ ಪುಟ್ಟ ಮಗನನ್ನ “”ಪಾಪಣ್ಣಿ , ಏನಾಯ್ತು, ಬ್ಯಾಗ್ ಎಲ್ಲಿ ಬಿಟ್ಟೆವು?” ಎಂದಾಗ ನನ್ನ ಗಾಬರಿಯನ್ನು ಕಂಡು ಅವನೋ ಚಿಕ್ಕ ಹುಡುಗ ಅಳಲೇ ಆರಂಭಿಸಿದ. ಒಂದು ಕ್ಷಣ ಯೋಚಿಸಿದೆ- ಚಪ್ಪಲಿ ಕಿತ್ತುಹೋದಾಗ ಸಹ ಬ್ಯಾಗ್ ನನ್ನ ಕೈಯಲ್ಲಿದ್ದುದು ನೆನಪಾಯ್ತು. ಅಂದರೆ ಚಪ್ಪಲಿ ಕೊಳ್ಳುವ ಕಡೆಯೇ ಬಿಟ್ಟಿರಬಹುದೆಂಬ ಅನುಮಾನವಾಯಿತು. ಥಟ್ಟನೆ ನನಗೆ ಚಪ್ಪಲಿ ಕೊಳ್ಳುವಾಗ ಚಪ್ಪಲಿ ಜೋಡಿಸಿದ್ದ ಕಡೆ ನೆಲದ ಮೇಲೆ ಇಟ್ಟಿದ್ದು ನೆನಪಾಗಿ ಒಂದೇ ಉಸುರಿಗೆ ಧಡಧಡನೆ ಓಡಿದೆ.
Related Articles
Advertisement
“”ದೇವರೇ ಅಂತೂ ನೀನಿದ್ದೀಯಾ” ಎಂದು ಸೂಟ್ಕೇಸ್ ಕೈಗೆತ್ತಿಕೊಂಡು ಅಂಗಡಿಯಾತನಿಗೆ, “”ನೋಡಿ ಮರೆತು ಬಿಟ್ಟು ಹೋಗಿದ್ದೆ ಸದ್ಯ. ಯಾರ ಕಣ್ಣಿಗೂ ಬೀಳದ ಕಾರಣ ಸಿಕ್ಕಿತು” ಎಂದು ಪಕ್ಕದ ಅಂಗಡಿಯವನಿಗೆ ಕೂಡ ಥ್ಯಾಂಕ್ಸ್ ಹೇಳಿದೆ. ಆತ, “”ಮೇಡಂ ನನ್ಗೆ ಅಲ್ಲ, ನೀವು ಬಾಂಬ್‌ಗ ಥ್ಯಾಂಕ್ಸ್ ಹೇಳ್ಬೇಕು” ಅಂದ. “”ಯಾಕೆ?” ಅಂದೆ. “”ಯಾಕಂದ್ರೆ ಬಾಂಬ್ ಇರತ್ತೆ ಅಂತ ಹೆದರೊಡಿ ಯಾರೂ ಮುಟ್ಟಿಲ್ಲ. ಇಲ್ಲಾಂದ್ರೆ ಒಂದ್ ನಿಮಿಷದಲ್ಲಿ ಮಾಯ ಆಗಿºಡ್ತಿತ್ತು. ಅದೂ ಬಾಂಬ್‌ದು ದಯಾ! ನಿಮ್ಗೆ ವರ ಆಗಿºಡು¤ ನೋಡಿ” ಅಂದ. “”ಹೌದಾ…” ಎನ್ನುತ್ತ ನಾನು ನಿಟ್ಟುಸಿರು ಬಿಟ್ಟೆ. ಅಬ್ಟಾ! ದೇವರೇ ಹೆತ್ತವರ ಪುಣ್ಯ ಎಂದುಕೊಂಡು ಮಗನ ಕೈಗೆ ಪುಟ್ಟ ಬ್ಯಾಗ್ ಕೊಟ್ಟು ಸೂಟ್‌ಕೇಸ್ ಮತ್ತೆ ಮತ್ತೂಂದು ಬ್ಯಾಗನ್ನು ಬಸ್ಸಿನಲ್ಲಿ ಕೂಡ ತೊಡೆಯ ಮೇಲೆ ಇಟ್ಟುಕೊಂಡು ಬಂದೆ. ಮನೆ ತಲುಪಿದಾಗ ಎಲ್ಲರಿಗೂ ಸೀರೆ ನೋಡುವ ಕುತೂಹಲವಾದರೆ ನನಗೋ ಕಳೆದು ಹೋಗಿದ್ದ ಸೀರೆಗಳ ಸೂಟ್‌ಕೇಸ್ ಕಥೆಯ ಫಜೀತಿಯನ್ನು ಅವರಿಗೆಲ್ಲ ಹೇಳುವ ಆತುರ. ತತ್‌ಕ್ಷಣ ನನ್ನ ಪುಟ್ಟ ಮಗ ಮತ್ತೆ “”ಸೂಟ್‌ಕೇಸ್ ಮತ್ತೆ ಸೀರೆ ಎಲ್ಲ ಕಳುª ಹೋಗಿತ್ತು” ಎಂದಾಗ ಎಲ್ಲರಿಗೂ ಗಾಬರಿ. ನಾನು ಎಲ್ಲವನ್ನೂ ವಿವರಿಸಿ ಹೇಳಿದಾಗ, ಎಲ್ಲರೂ “”ಅಬ್ಟಾ! ಯಾರಾದ್ರೂ ಹೊತ್ಕೊಂಡು ಹೋಗಿದ್ರೆ ಏನ್ ಕಥೆ. ಸದ್ಯ ಸಿಕ್ತಲ್ಲ . ಅಮ್ಮಾ ತಾಯಿ, ಅದೇನೋ ಇರಲಿ, ನಿನ್ನ ಮರೆವಿನಲ್ಲಿ ಮಗನನ್ನು ಎಲ್ಲೂ ಕಳೆದು ಬಂದಿಲ್ಲವಲ್ಲ ಪುಣ್ಯ” ಎಂದರು. ಆ ಘಟನೆ ಸಂಭವಿಸಿದ ಸಮಯದಲ್ಲಿ ಎಲ್ಲೆಲ್ಲೋ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಇಟ್ಟ ಉದಾಹರಣೆಗಳಿದ್ದು ನನ್ನ ಸೂಟ್‌ಕೇಸ್ ಮುಟ್ಟಲು, ಎತ್ತಿಕೊಂಡು ಹೋಗಲು ಯಾರಿಗೂ ಧೈರ್ಯವಿಲ್ಲದುದೇ ಕಾರಣವೆಂಬುದು ಸತ್ಯ ಸಂಗತಿ. ಆದ್ದರಿಂದ ಸೂಟ್‌ಕೇಸ್ ಸಿಕ್ಕಿದ್ದು ನನ್ನ ಹೆತ್ತವರ ಪುಣ್ಯ ಎಂದುಕೊಂಡೆ. ಅಂತೂ ಜನರಲ್ಲಿದ್ದ ಬಾಂಬ್ ಎಂಬ ಭಯ, ಭೀತಿ ನಮ್ಮ ಮನೆಯ ಮದುವೆಯ ರೇಷ್ಮೆ ಸೀರೆಗಳನ್ನು ಉಳಿಸಿಕೊಟ್ಟಿದ್ದಂತೂ ಸತ್ಯ.
ರಾಜೇಶ್ವರಿ ಹುಲ್ಲೇನಹಳ್ಳಿ