Advertisement
ಈ ಸಂದರ್ಭದಲ್ಲಿ ಅವರು ಬಸ್ಸು ನಿಲ್ದಾಣದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿ ದ್ದವರನ್ನು ಎಚ್ಚರಿಸಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಬಾರದೆಂದು ಎಚ್ಚರಿಕೆ ನೀಡಿದರು.
Related Articles
ಬದಿಯಡ್ಕ ಗ್ರಾಮ ಪಂಚಾಯತ್‌ನಲ್ಲಿ ಪೇಟೆ ಶುಚಿತ್ವಕ್ಕೆ ನೌಕರರಿಲ್ಲದಿರುವುದೂ ತ್ಯಾಜ್ಯ ಹೆಚ್ಚಾಗಲು ಪ್ರಧಾನ ಕಾರಣವಾಗಿದೆ. ಪೇಟೆಯ ವಿವಿಧೆಡೆ ತ್ಯಾಜ್ಯದ ರಾಶಿ ತುಂಬಿದ್ದು ಮಳೆಗಾಲದಲ್ಲಿ ಇವುಗಳಲ್ಲಿ ನೀರುನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಬದಲಾಗುವುದು ನಿಸ್ಸಂಶಯ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲಗಳು ಹಾಗೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟ ತ್ಯಾಜ್ಯಗಳು ಮಾತ್ರವಲ್ಲದೆ ಕೊಳೆತ ಮಾಂಸದ ತ್ಯಾಜ್ಯಗಳನ್ನೂ ರಸ್ತೆಬದಿಯಲ್ಲಿ ಎಸೆಯುತ್ತಿರುವುದು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸಿದಂತೆಯೇ ಸರಿ.
– ಬಾಲಕೃಷ್ಣ
ನಿಲ್ದಾಣ ಶುಚಿಗೊಳಿಸುವ ಪತ್ರಿಕಾ ವಿತರಕ
Advertisement
ಸ್ವಚ್ಛತೆ ಕೊರತೆ ಸಮಸ್ಯೆಗಕಾರಣಮಾರಕ ರೋಗಗಳು ಸಾಮಾನ್ಯ ಜನರನ್ನು ಬಲಿತೆಗೆಯುತ್ತಿರುವುದು ಪ್ರತಿದಿನ ಕಂಡುಬರುತ್ತದೆ. ಶಿಸ್ತಿಲ್ಲದ ಆಹಾರ ಪದ್ಧತಿ ಹಾಗೂ ಜೀವನ ಕ್ರಮ ಹಾಗೂ ಸ್ವತ್ಛತೆಯ ಕೊರತೆ ಈ ಸಮಸ್ಯೆಗೆ ಮುಖ್ಯ ಕಾರಣ. ಪ್ರತಿಯೊಬ್ಬರೂ ಮನೆ ಹಾಗೂ ಪರಿಸರವದ ಶುಚಿತ್ವಕ್ಕೆ ಆದ್ಯತೆ ನೀಡಿ ಜಾಗ್ರತೆವಹಿಸಬೇಕು.
– ಶ್ಯಾಮ್‌ಪ್ರಸಾದ್‌ಮಾನ್ಯ (ಆರೋಗ್ಯ,ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ)ಸದಸ್ಯರು, ವಳಕಾಡು ವಾರ್ಡ್ ಸ್ವಚ್ಛತೆ ಕಾಪಾಡುವುದ ನಮ್ಮೆಲ್ಲರ ಕರ್ತವ್ಯ
ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವುದು ಕರ್ತವ್ಯ. ಉಪಯೋಗ ಶೂನ್ಯ ವಸ್ತುಗಳಾದ ಪ್ಲಾಸ್ಟಿಕ್ ಚೀಲಗಳು, ಮಕ್ಕಳ ಆಟಿಕೆಗಳೂ ಸೇರಿದಂತೆ ಮಣ್ಣಿನಲ್ಲಿ ಸೇರದೆ ನೀರು ಕಟ್ಟಿನಿಂತು ರೋಗಾಣುಗಳ ಹುಟ್ಟಿಗೆ ಕಾರಣವಾಗುವ ವಸುಗಳ ಬಗ್ಗೆ ಜಾಗ್ರತೆವಹಿಸಬೇಕು. ಕಂಡಕಂಡಲ್ಲಿ ಎಸೆಯದೆ ಸೂಕ್ತವಾದ ರೀತಿಯಲ್ಲಿ ಮಾಲಿನ್ಯ ಸಂಸ್ಕರಣೆ ಮಾಡಬೇಕು.
– ಕೆ.ಎನ್. ಕೃಷ್ಣ ಭಟ್
ಅಧ್ಯಕ್ಷರು ಬದಿಯಡ್ಕ ಗ್ರಾ.ಪಂ. – ಅಖೀಲೇಶ್ ನಗುಮುಗಂ