Advertisement
ವಿಕಾಸ್ ದುಬೆ ವಿರುದ್ಧ ಗುರುತರ ಆರೋಪಗಳಿ ದ್ದರೂ ಕೂಡ ಆತ ಜೈಲಿನಲ್ಲಿ ಇರದೆ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದದ್ದು ಆಘಾತ ತಂದಿದೆ. ಇದು ನಿಜಕ್ಕೂ ವ್ಯವಸ್ಥೆಯ ವೈಫಲ್ಯವಾ ಗಿದೆ. ಸರಕಾರ ಯಾವತ್ತಿದ್ದರೂ ಕಾನೂನನ್ನು ಎತ್ತಿ ಹಿಡಿಯುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಅದು ಅದರ ಕರ್ತವ್ಯವೂ ಆಗಿದೆ ಎಂದು ನ್ಯಾ| ಎ.ಎಸ್. ಬೋಪಣ್ಣ ಮತ್ತು ನ್ಯಾ| ವಿ. ರಾಮ ಸುಬ್ರ ಮಣಿಯನ್ ಅವರನ್ನೊಳಗೊಂಡ ನ್ಯಾಯ ಪೀಠ ಸ್ಪಷ್ಟವಾಗಿ ಹೇಳಿತು. ಅಸುನೀಗಿರುವ ರೌಡಿಗೆ ಜಾಮೀನು ನೀಡಲಾಗಿದ್ದ ಸಂದರ್ಭಗಳ ಬಗ್ಗೆ ವರದಿ ನೀಡಬೇಕು. ತನಿಖೆ ನಡೆಸುವ ಸಮಿತಿಯಲ್ಲಿ ಬದಲು ಮಾಡಬೇಕು. ಅದರ ಕರಡು ನಿಯಮಗಳನ್ನು ಜು. 22ರಂದು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರಕಾರಕ್ಕೆ ರ್ಕೋಟ್ ಸೂಚನೆ ನೀಡಿತು. ಉತ್ತರ ಪ್ರದೇಶ ಸರಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಶಶಿಕಾಂತ್ ಅಗ ರ್ವಾಲ್ ನೇತೃತ್ವದ ಏಕಸದಸ್ಯ ಆಯೋಗದ ಮೂಲಕ ಎನ್‌ಕೌಂಟರ್ ಬಗ್ಗೆ ತನಿಖೆಗೆ ನಡೆಸಲಾ ಗುತ್ತದೆ ಎಂದು ಅಫಿಡವಿಟ್ ಮೂಲಕ ಅರಿಕೆ ಮಾಡಿಕೊಂಡರು.
ಪಾತಕಿ ವಿಕಾಸ್ ದುಬೆಗೆ ಹಣಕಾಸಿನ ನೆರವು ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಜೈ ಬಾಜ್‌ಪೇಯಿ, ಆತನ ಸಹಚರನನ್ನು ಪೊಲೀಸರು ಬಂಧಿ ಸಿದ್ದಾರೆ. ಪೊಲೀಸರ ಹತ್ಯೆಗೆ ನೆರವಾಗು ವಂತೆ ಜು.1ರಂದು ಬಾಜ್‌ಪೇಯಿಗೆ ದುಬೆ ಕರೆ ಮಾಡಿದ್ದನು. ಬಳಿಕ ಮರು ದಿನವೇ ಬಾಜ್‌ಪೇಯಿ ತನ್ನ ಆಪ್ತ ಪ್ರಶಾಂತ್ ಶುಕ್ಲ ಜೊತೆ ಬಿಕ್ರು ಹಳ್ಳಿಗೆ ತೆರಳಿ, 2 ಲಕ್ಷ ರೂ.ನಗದು, 22 ನಾಡ ಬಂದೂಕು, 32 ಬೋರ್ ರಿವಾಲ್ವರ್‌ಗಳನ್ನು ವಿಕಾಸ್ ದುಬೆಗೆ ನೀಡಿದ್ದನು. ಜು.3ರಂದು ದುಬೆ ಗ್ಯಾಂಗ್ ಬಿಕ್ರು ಹಳ್ಳಿಯಲ್ಲಿ ಪೊಲೀಸರನ್ನು ಹತ್ಯೆಗೈದಿತ್ತು. ಜು.4ರಂದು ದುಬೆ ಆಪ್ತ ಬಾಜ್‌ಪೇಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆತನನ್ನು ಬಂಧಿಸಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.