Advertisement

ಮೂಲಭೂತ ಸೌಕರ್ಯ ಒದಗಿಸುವುದು ಕರ್ತವ್ಯ

09:47 PM Sep 21, 2019 | Lakshmi GovindaRaju |

ದೇವನಹಳ್ಳಿ: ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಶಾಸಕ ಎಲ್‌.ಎಲ್‌ ನಾರಾಯಣಸ್ವಾಮಿ ಹೇಳಿದರು. ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ 2018-19 ನೇ ಸಾಲಿನ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು. ಗ್ರಾ ಪಂ ವ್ಯಾಪಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಜವಬ್ದಾರಿ ಚುನಾಯಿತಿ ಜನಪ್ರತಿಗಳ ಕರ್ತವ್ಯ

Advertisement

. ಗಂಗವಾರ ಗ್ರಾಪಂ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ.ನೀಡುತ್ತೇನೆ ಎಂದು ತಿಳಿಸಿದರು. ಷಗಂಗವಾರ ಚೌಡಪ್ಪನಹಳ್ಳಿ ಗ್ರಾಮದಲ್ಲಿ ಸ್ಮಶಾನ ದಾರಿ ಒತ್ತುವರಿಯಾಗಿದೆ ಎಂದು ದೂರು ಬಂದಿದ್ದು, ಸರ್ಕಾರಿ ಜಮೀನು ಆಗಿದ್ದಲ್ಲಿ ತಹಶೀಲ್ದಾರ್‌ಗೆ ಮಾಹಿತಿ ನೀಡಿ ತೆರವುಗೊಳಿಸುತ್ತೇನೆ.ಒಂದು ವೇಳೆ ಖಾಸಗಿ ಜಮೀನು ಹಾದು ಹೋಗಿದ್ದರೆ, ಆ ಜಮೀನು ಮಾಲಿಕರೊಂದಿಗೆ ಸಭೆ ನಡೆಸಿ, ಗ್ರಾಮಸ್ಥರ ಪರವಾಗಿ ನ್ಯಾಯಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಗಂಗವಾರ ಹಾಗೂ ಚೌಡಪ್ಪನಹಳ್ಳಿ ಎರಡು ಗ್ರಾಮಕ್ಕೆ ಬಸ್‌ ತಂಗುದಾಣ ನಿರ್ಮಾಣ ಮಾಡಲು ತಲಾ 5 ಲಕ್ಷದಂತೆ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುತ್ತೇನೆ.ಗ್ರಾಮಗಳ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಯೋಜನೆ ಸಿಗುವಂತೆ ಆಗಬೇಕು ಎಂದರು.  ತಾಪಂ ಅಧ್ಯಕ್ಷ ಚೈತ್ರವೀರೇಗೌಡ ಮಾತನಾಡಿ ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ರೈತಾಪಿ ವರ್ಗದವರಿಗೆ ಮಾಹಿತಿ ತಿಳಿಸಿ, ಜಾಬ್‌ ಕಾರ್ಡ್‌ಗಳನ್ನು ನೊಂದಾವಣಿ ಮಾಡಿಸಬೇಕು ಎಂದರು.

ಎಪಿಎಂಸಿ ನ್ಯಾಮಿನಿ ಮಾಜಿ ನಿರ್ದೇಶಕ ಜಯರಾಮೇಗೌಡ ಮಾತನಾಡಿ, ಗಂಗವಾರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿಗೆ ಹಣಕಾಸಿನ ಮೂಲ ಇಲ್ಲದೆ‌, ಬರುವ ಅನುದಾನಗಳು ಸಾಲುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂ ಅದ್ಯಕ್ಷೆ ಮೇನಕಾ ಕೃಷ್ಣಮೂರ್ತಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷ ಸೋಮತ್ತಹಳ್ಳಿ ಮಂಜುನಾಥ್‌,ಮಾಜಿ ಅದ್ಯಕ್ಷೆ ಭಾರತೀ ಲಕ್ಷ್ಮಣ್‌ ಗೌಡ, ಗಾಪಂ ಮಾಜಿ ಅದ್ಯಕ್ಷ ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ, ಗ್ರಾಪಂ ಉಪಾಧ್ಯಕ್ಷೆ ಸರಸ್ವತಮ್ಮ, ಸದಸ್ಯರಾದ ಮಂಜುನಾಥ್‌,ರಾಜಣ್ಣ, ಸುಜಾತ, ನಾರಾಯಣಮ್ಮ, ಪ್ರೇಮ ರಾಮಸ್ವಾಮಿ, ಶಶಿಕಲ ಶಿವರಾಜ್‌, ರಮೇಶ್‌, ಮಂಜುಳಾ ನಾಗರಾಜ್‌, ಎಂ ರಾಜಣ್ಣ , ಅಭಿವೃದ್ದಿ ಅಧಿಕಾರಿ ಶ್ರೀನಿವಾಸ್‌ ಮೂರ್ತಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next