Advertisement
ಈಗ ನಿರ್ಧಾರವೇಕೆ?ಹ್ಯಾರಿ ಮತ್ತು ಮೆಘನ್ ಜೋಡಿ, 2020ರಲ್ಲೇ ರಾಜ ಮನೆತನವನ್ನು ತೊರೆಯುವ ಬಗ್ಗೆ ಅಧಿಕೃತವಾಗಿ ಘೋಷಿಸಿತ್ತು. ಆಗ ಇವರ ಮನವಿಯನ್ನು ವರ್ಷದ ಅನಂತರ ಪರಿಶೀಲಿಸಲಾಗುವುದು ಎಂದು ರಾಜಮನೆ ತನ ಸೂಚಿಸಿತ್ತು. ಆ ಮೂಲಕ ಹ್ಯಾರಿ ಮತ್ತು ಮೆಘನ್‌ಗೆ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಲು ಒಂದು ವರ್ಷದ ಅವಕಾಶ ಕಲ್ಪಿಸಲಾಗಿತ್ತು. ವರ್ಷದ ಅನಂತರವೂ, ಹ್ಯಾರಿ ಮತ್ತು ಮೆಘನ್ ಅವರ ನಿರ್ಧಾರ ಬದಲಾಗಿಲ್ಲದ ಕಾರಣ, ಮನೆತನದಿಂದ ಅವರಿಬ್ಬರೂ ಹೊರಗುಳಿಯುವ ನಿರ್ಧಾರಕ್ಕೆ ಈಗ ಅಧಿಕೃತ ಮೊಹರು ಒತ್ತಲಾಗಿದೆ.
ಸದ್ಯ ಹ್ಯಾರಿ ಮತ್ತು ಮೆಘನ್ ಇಬ್ಬರೂ ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿ ವಾಸ ಮಾಡುತ್ತಿದ್ದಾರೆ. ಮೆಘನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಕೊನೆ ಪ್ರಯತ್ನವೂ ವಿಫಲ
ರಾಣಿ ಎಲಿಜಬೆತ್ 2 ಅವರು ಹ್ಯಾರಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಅದರ ಆಧಾರದ ಮೇಲೆ ಹ್ಯಾರಿ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಇನ್ನು ಮುಂದೆ ಮನೆತನದ ಯಾವುದೇ ಜವಾಬ್ದಾರಿ, ಕರ್ತವ್ಯಗಳನ್ನು ಹ್ಯಾರಿ ಮತ್ತು ಮೆಘನ್ ನಿಭಾಯಿಸುವಂತಿಲ್ಲ. ಆದರೆ ಕುಟುಂಬ ಸದಸ್ಯ ರಂತೆ ಬಂದು ಹೋಗಬಹುದಾಗಿದೆ.
Related Articles
ಅರಮನೆಯ ನಿಯಮಗಳ ಪ್ರಕಾರ, ಹ್ಯಾರಿಗೆ ಉತ್ತರಾಧಿಕಾರದ ಅಧಿಕಾರವಿದೆ. ಅಂದರೆ, ಸರದಿ ಪ್ರಕಾರ, ಹ್ಯಾರಿ 6ನೇಯವರಾಗಿ ನಿಲ್ಲುತ್ತಾರೆ. ಅಂದರೆ, ಸದ್ಯ ರಾಣಿ ಎಲಿಜೆಬೆತ್ ಅವರಲ್ಲಿ ಅಧಿಕಾರವಿದೆ. ಉತ್ತರಾಧಿಕಾರದ ಮೊದಲ ಸಾಲಿನಲ್ಲಿ ಪ್ರಿನ್ಸ್ ಚಾರ್ಲ್ಸ್ ಮತ್ತು ಪತ್ನಿ ಕೆಮಿಲಿಯಾ ಇದ್ದಾರೆ. 2ನೇ ಸಾಲಿನಲ್ಲಿ ಡ್ನೂಕ್ ಆಫ್ ಕೆಂಬ್ರಿಡ್ಜ್ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್‌ಸನ್, ಮೂರು, ನಾಲ್ಕು ಮತ್ತು ಐದನೇ ಸಾಲಿನಲ್ಲಿ ಕ್ರಮವಾಗಿ ಇವರ ಮೂರು ಮಕ್ಕಳು ಇದ್ದಾರೆ. ಇದಾದ ಮೇಲೆ ಹ್ಯಾರಿ 6ನೇಯವರಾಗಿ ಬರುತ್ತಾರೆ. ಒಂದು ವೇಳೆ ವಿಲಿಯಂ ಮತ್ತು ಕೇಟ್‌ಗೆ ಇನ್ನೊಂದು ಮಗುವಾದರೆ ಹ್ಯಾರಿ ಉತ್ತರಾಧಿಕಾರಿ ಸಾಲು ಮತ್ತಷ್ಟು ಕೆಳಗೆ ಇಳಿಯಲಿದೆ.
Advertisement
ಡ್ನೂಕ್ ಪದವಿಗಳು ರಾಣಿಗೆ ಹಸ್ತಾಂತರರಾಜಮನೆತನದಿಂದ ಡ್ನೂಕ್ ಅವರು ಕ್ಯಾಪ್ಟನ್ ಜನರಲ್ ಆಫ್ ರಾಯಲ್ ಮರೈನ್ಸ್ ಸೇರಿದಂತೆ ಬ್ರಿಟನ್ ಸೇನೆಯ ಇನ್ನಿತರ ಕೆಲವು ಜವಾಬ್ದಾರಿ ಯುತ ಹುದ್ದೆಗಳಿಂದ ಡ್ನೂಕ್ ಅವರನ್ನು ತೆರವುಗೊಳಿಸಲಾಗಿದೆ. ಸೂಕ್ತ ವ್ಯಕ್ತಿಗಳಿಗೆ ಅಧಿಕಾರ ಹಸ್ತಾಂತರಗೊಳ್ಳುವವರೆಗೂ ಅವು ರಾಣಿಯ ಉಸ್ತುವಾರಿಯಲ್ಲೇ ಇರಲಿವೆ.