Advertisement

ಬಾಳುಗೋಡು: ದಂತ ತೆಗೆದು ಆನೆಯ ಶವ ಸಂಸ್ಕಾರ

02:04 AM May 31, 2019 | Team Udayavani |

ಸುಬ್ರಹ್ಮಣ್ಯ: ಬಾಳುಗೋಡು ಮೀಸಲು ಅರಣ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಸಲಗವನ್ನು ಬುಧವಾರ ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳಾದ ಎಸಿಎಫ್ ಆಸ್ಟ್ರೀನ್‌ ಪಿ. ಸೋನ್ಸ್‌ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಹಾಗೂ ಸುಳ್ಯ ಆರ್‌ಎಫ್ಒಗಳಾದ ತ್ಯಾಗರಾಜ್‌, ಮಂಜುನಾಥ್‌ ಅವರ ನೇತೃತ್ವದಲ್ಲಿ ಮಹಜರು ನಡೆಯಿತು.

Advertisement

ಗುತ್ತಿಗಾರು ಪಶುವೈದ್ಯಾಧಿಕಾರಿ ಡಾ| ವೆಂಕಟಾಚಲಪತಿ ಮಹಜರು ನಡೆಸಿದರು. ದಂತಗಳನ್ನು ಬೇರ್ಪಡಿ ಸಿದ ಬಳಿಕ ಶವವನ್ನು ಕಾಡಿನಲ್ಲೇ ದಹಿಸಲಾಯಿತು. ದಂತಗಳನ್ನು ಹಿರಿಯ ಅಧಿಕಾರಿಗಳ ಸೂಚನೆಯಂತೆ ಮೈಸೂರಿನ ಸಂಗ್ರಹಾಲಯಕ್ಕೆ ಕಳುಹಿ ಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕವಷ್ಟೇ ಸಾವಿಗೆ ಕಾರಣಗಳ ಬಗ್ಗೆ ನಿರ್ಧಾರಕ್ಕೆ ಬರಲಾ ಗುತ್ತದೆ. ಗುಂಡೇಟಿನಿಂದ ಸತ್ತಿದೆಯೇ ಎಂಬ ನಿಟ್ಟಿನಲ್ಲೂ ಕೂಲಂಕಷ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಂತ್ಯ ಸಂಸ್ಕಾರದಲ್ಲಿ ಅರಣ್ಯ ಇಲಾಖೆಗೆ ಸ್ಥಳೀಯರು ಸಹಕರಿಸಿ
ದರು. ಕಟ್ಟಿಗೆ ಇತ್ಯಾದಿ ಪರಿಕರಗಳನ್ನು ಸ್ಥಳೀಯ ಜನರೇ ಸಿದ್ಧಪಡಿಸಿದ್ದರು.
ದೇಹ ಸಂಪೂರ್ಣವಾಗಿ ಹೊತ್ತಿ ಉರಿಯುವ ತನಕವೂ ಸ್ಥಳೀಯರು ಅಲ್ಲಿದ್ದರು. ಆನೆಯನ್ನು ಸಾಕು ಪ್ರಾಣಿಯಂತೆ ಕಂಡು ಪೋಷಿಸಿದ ಹಲವು ಮಂದಿ ಚಿತೆಯ ಮುಂದೆ ಭಾವುಕರಾದರು.

Advertisement

Udayavani is now on Telegram. Click here to join our channel and stay updated with the latest news.

Next