Advertisement

Document ಕೇಳಿದ ಪೊಲೀಸ್‌ನನ್ನು ಎಳೆದುಕೊಂಡು ಹೋದ ಚಾಲಕ

01:07 AM Jun 23, 2024 | Team Udayavani |

ಹೊಸದಿಲ್ಲಿ: ಕಾರು ಚಾಲಕನೊಬ್ಬ ಟ್ರಾಫಿಕ್‌ ಪೊಲೀಸ್‌ರೊಬ್ಬರನ್ನು ಎಳೆದುಕೊಂಡು ಹೋದ ಘಟನೆ ಹರಿಯಾಣದ ಫ‌ರಿದಾಬಾದ್‌ನಲ್ಲಿ ನಡೆದಿದೆ. ರಸ್ತೆ ಮಧ್ಯದಲ್ಲೇ ಕಾರ್‌ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದ. ಆಗ ದಾಖಲೆ ತೋರಿಸಬೇಕು ಎಂದು ಪೊಲೀಸ್‌ ಸಿಬಂದಿ ಕೇಳಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ದಾಖಲೆ ಪರಿಶೀಲಿಸಲು ಪೊಲೀಸ್‌ ಕಾರಿನಲ್ಲಿ ಇಣುಕಿದಾಗ, ಚಾಲಕ ಎಕ್ಸಲರೇಟರ್‌ ಒತ್ತಿ ಪೊಲೀಸ್‌ನನ್ನು ಎಳೆದುಕೊಂಡು ಮುಂದೆ ಸಾಗಿದ್ದಾನೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಕಾರನ್ನು ಅಡಗಟ್ಟಿ, ಪೊಲೀಸ್‌ನನ್ನು ರಕ್ಷಿಸಿದ್ದಾರೆ. ಚಾಲಕನನ್ನು ಸೆರೆ ಹಿಡಿಯ ಲಾಗಿದೆ. ಚಾಲಕ ಮದ್ಯ ಸೇವನೆ ಮಾಡಿದ್ದ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next