Advertisement

Anekal: ಶಾಲಾ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ

11:22 AM Sep 18, 2024 | Team Udayavani |

ಆನೇಕಲ್‌: ಶಾಲಾ ಬಸ್‌ ಚಾಲಕ ಹಾರ್ನ್ ಮಾಡಿ ದ್ದಾನೆ ಎನ್ನುವ ಕಾರಣಕ್ಕೆ ಬಸ್‌ ಚಾಲಕನ ಮೇಲೆ ಐದಾರು ಮಂದಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

Advertisement

ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಮಾರಗೊಂಡನಹಳ್ಳಿ ಬಳಿ ಮಕ್ಕಳನ್ನು ಡ್ರಾಪ್‌ ಮಾಡಲು ಎಂದಿನಂತೆ ಬಸ್‌ ಚಾಲಕ ಜೇಮ್ಸ್ ಧೋನ್‌ ಎಲೆಕ್ಟ್ರಾನಿಕ್‌ ಸಿಟಿ ಕಡೆ ಹೊರಟಿದ್ದಾನೆ. ಮುಂದೆ ಸಾಗುತ್ತಿದ್ದ ಸ್ಕಾರ್ಪಿಯೋ ಕಾರು ಸೈಡಿಗೆ ಹೋಗುವಂತೆ ಬಸ್‌ ಚಾಲಕ ಹಾರ್ನ್ ಮಾಡಿದ್ದಾನೆ. ಅಷ್ಟಕ್ಕೇ ಕೆರಳಿದ ಕಾರಿನಲ್ಲಿದ್ದ ಐದಾರು ಮಂದಿ ಮೂರು ಕಡೆ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬಸ್ಸಿನಲ್ಲಿದ್ದ ಶಾಲಾ ಮಕ್ಕಳು ಭಯಗೊಂಡು ಕಿರುಚಾಡುತ್ತಿದ್ದರೂ, ಲೆಕ್ಕಿಸದೇ ಬಸ್ಸಿನ ಗಾಜಿಗೆ ಕಲ್ಲು ಹೊಡೆದು ಪುಂಡಾಟ ನಡೆಸಿದ್ದಾರೆ. ಕುಡಿದ ನಶೆಯಲ್ಲಿದ್ದ ಆರು ಮಂದಿ ಬಸ್‌ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಸಹಾಯಕಿ ಲಕ್ಷ್ಮಮ್ಮ ತಿಳಿಸಿದ್ದಾರೆ.

ಈ ಹಿಂದೆಯು ಪುಂಡರ ಗುಂಪೊಂದು ಶಾಲೆಗೆ ನುಗ್ಗಿ ಬಸ್‌ ಚಾಲಕರ ಮೇಲೆ ಹಲ್ಲೆ ನಡೆಸಿದ್ದರು. ಹಾರ್ನ್ ಮಾಡಿದಕ್ಕೆ ಸ್ಕಾರ್ಪಿಯೋ ಕಾರಿನಲ್ಲಿ ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ಆರು ಮಂದಿ ಪುಂಡಾಟ ನಡೆಸಿದ್ದಾರೆ. ಖಾಸಗಿ ಶಾಲಾ ಬಸ್‌ ಅನ್ನು ಚೇಸ್‌ ಮಾಡಿ, ಒಂದಲ್ಲ ಮೂರು ಬಾರಿ ಬಸ್‌ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಗ್ಗೆ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಮಕ್ಕಳು ಭಯಭೀತರಾಗಿ ಕಿರುಚಾಡುತ್ತಿದ್ದರೂ, ಸ್ಥಳದಲ್ಲಿ ಭಯದ ವಾತವರಣ ಸೃಷ್ಟಿಸಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.