Advertisement
ನೈಸ್ ಸಂಸ್ಥೆ ಮುಖ್ಯಸ್ಥರೂ ಆಗಿರುವ ಅಶೋಕ ಖೇಣಿ ಈ ಕ್ಷೇತ್ರವನ್ನು ಪ್ರತಿನಿಧಿ ಸುತ್ತಿದ್ದಾರೆ. ಒಟ್ಟು 124 ಹಳ್ಳಿಗಳನ್ನು ಹೊಂದಿರುವ ಈ ಕ್ಷೇತ್ರ ರಾಷ್ಟ್ರೀಯ ಹೆದ್ದಾರಿ 9ಕ್ಕೆ ಹೊಂದಿಕೊಂಡಿದ್ದು, ಬೀದರ ದಕ್ಷಿಣ ನಿರ್ಣಾ, ಬೆಮಳಖೇಡಾ, ಸಿರ್ಸಿ ಔರಾದ, ಬಗದಲ್, ಮನ್ನಳ್ಳಿ ಮತ್ತು ಚಿಟ್ಟಾ ಸೇರಿದಂತೆ 7 ಜಿಪಂ ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿನ ಜನ ಕೃಷಿ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ಹೆಚ್ಚಾಗಿ ಮಳೆಯನ್ನೇ ಆಶ್ರಯಿಸಿದ್ದಾರೆ. ರೈತರ ಜೀವನಾಡಿ ಆಗಬೇಕಿದ್ದ ಕಾರಂಜಾ ಜಲಾಶಯದ ಲಾಭ ಕೊನೆಯಂಚಿನ ರೈತರಿಗೆ ತಲುಪುತ್ತಿಲ್ಲ. ತಾಲೂಕಿನಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ಆದರೆ, ವೈಜ್ಞಾನಿಕ ಬೆಲೆ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
Related Articles
ಆಗಿದೆ.
Advertisement
ಯಶಸ್ವಿ ಉದ್ಯಮಿಯಾಗಿರುವ ಖೇಣಿ ಕ್ಷೇತ್ರದ ಜನರ ಕೈ ಸಿಗುವುದಿಲ್ಲ. ಬೆಂಗಳೂರು ಇಲ್ಲವೇ ವಿದೇಶಗಳಲ್ಲಿ ಹೆಚ್ಚಿರುತ್ತಾರೆ ಎಂಬ ಆರೋಪ ಇದೆ. ಸದಾ ಒಂದಿಲ್ಲೊಂದು ವಿಭಿನ್ನ ಹೇಳಿಕೆ ನೀಡುವ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿರುವ ಶಾಸಕರು ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂಬ ನೋವು ಇಲ್ಲಿನವರದ್ದು. ಭಾರಿ ವಿರೋಧದ ನಡುವೆಯೂ ಈಗ ಖೇಣಿ ಕಾಂಗ್ರೆಸ್‌ನ ಸೇರಿದ್ದು, ಮತ್ತೂಮ್ಮೆ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಸಂಘಟಿಸಿರುವ ಮಾಜಿ ಸಿಎಂ ದಿ| ಧರ್ಮಸಿಂಗ್ ಪುತ್ರ ಚಂದ್ರಾಸಿಂಗ್ ಅಡ್ಡಗಾಲಾಗಿದ್ದಾರೆ. ಸರಳ ವ್ಯಕ್ತಿತ್ವದ ಬಂಡೆಪ್ಪ ಖಾಶೆಂಪುರ ಜೆಡಿಎಸ್‌ನಿಂದ ಸ್ಪರ್ಧೆಗಳಿದಿದ್ದರೆ, ಬಿಜೆಪಿಯಿಂದ ಶೈಲೇಂದ್ರ ಬೆಲ್ದಾಳೆ ಮುಖ್ಯ ಆಕಾಂಕ್ಷಿಯಾಗಿದ್ದಾರೆ.
ತೆಲಂಗಾಣಕ್ಕೆ ಹೊಂದಿಕೊಂಡಿರುವ ಈ ಕ್ಷೇತ್ರದಲ್ಲಿ ಕೃಷಿಯೇ ಮೂಲ. ಆದರೆ, ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಮತ್ತು ರೈತರಿಗೆ ಪ್ರೋತ್ಸಾಹ ಸಿಗುವಂಥ ಯಾವುದೇ ಯೋಜನೆ ರೂಪಿಸಲಿಲ್ಲ. ವೈಜ್ಞಾನಿಕ ಪರಿಹಾರಕ್ಕಾಗಿ ಕಾಯುತ್ತಿರುವ ಕಾರಂಜಾ ಸಂತ್ರಸ್ತರ ಕಣ್ಣೀರೋರೆಸುವ ಕೆಲಸ ಆಗಿಲ್ಲ. ಉದ್ಯಮಿ ಖೇಣಿ ಅವರಿಂದ ಕೈಗಾರಿಕೆಗಳು ಸ್ಥಾಪನೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿ ನಿರುದ್ಯೋಗ ಸಮಸ್ಯೆ ಹಾಗೆಯೇ ಉಳಿಯಿತು.
ಕ್ಷೇತ್ರದ ಬೆಸ್ಟ್ ಏನು?ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಪ್ರಯತ್ನ ಆಗಿದೆ. ಬಹುದಿನಗಳ ಬೇಡಿಕೆಯಾಗಿದ್ದ ಬೀದರ- ಮನ್ನಾಎಖ್ಖೇಳ್ಳಿ ಮುಖ್ಯ ರಸ್ತೆಗೆ ದುರಸ್ತಿ ಯೋಗ ಕೂಡಿಬಂದಿದ್ದು, ಅರ್ಧದಷ್ಟು ಪೂರ್ಣಗೊಂಡಿದೆ. ರಂಜೇರಿದಿಂದ ಹಳ್ಳಿಖೇಡವರೆಗೆ ಬಹುಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಿರುವುದು ವಿಶೇಷ. ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಕ್ಷೇತ್ರದ ಕೆಲವೆಡೆ ಉಚಿತ ವೈಫೈ ಸೇವೆ ಅವಕಾಶ ಮಾಡಿಕೊಡಲಾಗಿದೆ. ಕ್ಷೇತ್ರದ ದೊಡ್ಡ ಸಮಸ್ಯೆ?
ಶಾಸಕರ ಅವಧಿಯಲ್ಲಿ 2000 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಅಭಿವೃದ್ಧಿ ಮಾಡಿರುವೆ
ಎಂಬುದು ಖೇಣಿ ವಾದ. ಆದರೆ, ವಾಸ್ತವದಲ್ಲಿ ಅಭಿವೃದ್ಧಿ ಕಣ್ಣಿಗೆ ಕಾಣಿಸುತ್ತಿಲ್ಲ. ಕಾರಂಜಾ ಜಲಾಶಯದ ಕಾಲುವೆಗಳು ಹದಗೆಟ್ಟಿದ್ದು, ಕೊನೆಯಂಚಿನ ರೈತರಿಗೆ ನೀರು ತಲುಪುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಕೃಷಿಗೆ ಉತ್ಸಾಹ ಸಿಗದಿರುವುದು, ಕಬ್ಬಿಗೆ ಉತ್ತಮ ಬೆಲೆ ಇಲ್ಲದೇ ಕ್ಷೇತ್ರದಲ್ಲಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉದ್ಯೋಗ ಅರಸಿ ಇಲ್ಲಿನ ಜನರು ಹೈದ್ರಾಬಾದ, ಬೆಂಗಳೂರಿಗೆ ವಲಸೆ ಹೋಗಿದ್ದು, ವಲಸೆ ತಪ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗಲೇ ಇಲ್ಲ. ಶಾಸಕರು ಏನಂತಾರೆ?
ಬೀದರ ದಕ್ಷಿಣ ಕ್ಷೇತ್ರದಲ್ಲಿ ಜನರು ನನ್ನ ಮೇಲಿಟ್ಟಿದ್ದ ನಿರೀಕ್ಷೆಯಂತೆ ನಾನು ಐದು ವರ್ಷ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಪ್ರತಿ ಹಳ್ಳಿಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ ಸೇರಿದಂತೆ ಮೂಲಭೂತ ಸವಲತ್ತುಗಳನ್ನು ಒದಗಿಸಲು ಪ್ರಯತ್ನ ಪಟ್ಟಿದ್ದೇನೆ. ವಿವಿಧ ಕಡೆಗಳಲ್ಲಿ ಉಚಿತ ವೈಫೈ ಸೇವೆ ಒದಗಿಸಿದ್ದೇನೆ. ಬಹು ಕೋಟಿ ರೂ.ಗಳ ವೆಚ್ಚದಲ್ಲಿ ಮುಖ್ಯ ರಸ್ತೆಗಳು, ಹೆದ್ದಾರಿಗಳ
ನಿರ್ಮಾಣ ಕಾರ್ಯ ನಡೆದಿದೆ. ಕಾರಂಜಾ ಜಲಾಶಯದ ಕಾಲುವೆಗಳ ದುರಸ್ತಿಗೆ ಅನುದಾನ ಮಂಜೂರಾಗಿದೆ.
ಅಶೋಕ ಖೇಣಿ ಕ್ಷೇತ್ರ ಮಹಿಮೆ
ರಾಷ್ಟ್ರಪತಿ ಸೇರಿದಂತೆ ರಾಜಕಾರಣಿಗಳು ಮತ್ತು ದೊಡ್ಡ ಉದ್ಯಮಿಗಳು ಆರಾಧಿಸುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಬೀದರ ದಕ್ಷಿಣದಲ್ಲಿದೆ. ಇಲ್ಲಿ ಹರಕೆ ಹೊತ್ತರೆ ಈಡೇರುವುದು ಖಚಿತ ಎಂಬ ಪ್ರತೀತಿ ಇದೆ. ಬಗದಲ್‌ನ ಖಾದ್ರಿ ಸಾಹೇಬ್ ದರ್ಗಾಕ್ಕೆ ದೇಶ- ವಿದೇಶಗಳಿಂದ ಮುಸ್ಲಿಂ ಬಾಂಧವರು ಬರುತ್ತಾರೆ. ಅಷ್ಟೇ ಅಲ್ಲ, ಚಾಂಗಲೇರಾದ ಶ್ರೀ ವೀರಭದ್ರೇಶ್ವರ, ಕರಕನಳ್ಳಿಯ ಶ್ರೀ ಬಕ್ಕಪ್ರಭು,
ರೇಕುಳಗಿಯ ಬೌದ್ಧ ವಿಹಾರ ಮತ್ತು ನಿರ್ಣಾದ ಬುತ್ತಿ ಬಸವಣ್ಣ ದೇವಸ್ಥಾನಗಳು ಪ್ರಮುಖ ಧಾರ್ಮಿಕ ಕೇಂದ್ರಗಳಾಗಿ ಬೆಳೆದು ನಿಂತಿವೆ. ಬೀದರ ದಕ್ಷಿಣ ಕ್ಷೇತ್ರದಲ್ಲಿ ರಸ್ತೆಗಳ ನಿರ್ಮಾಣ ಕೆಲಸ ಆಗಿರುವುದು ಬಿಟ್ಟರೇ ಮತ್ತಾವ ಕೆಲಸಗಳಾಗಿಲ್ಲ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ಬೀದಿ ದೀಪಗಳ ಸಮಸ್ಯೆ ಇದೆ. ಉದ್ಯೋಗ ಮಾಡುವಂಥ ನಿರುದ್ಯೋಗಗಳು ಹೆಚ್ಚಿದ್ದಾರೆ. ಆದರೆ, ಖಾಸಗಿ ಸಕ್ಕರೆ ಕಾರ್ಖಾನೆಗಳು ಬಿಟ್ಟರೆ ಒಂದು ಒಂದು ಕೈಗಾರಿಕೆ ಸ್ಥಾಪಿಸುವ ಪ್ರಯತ್ನಗಳು ಆಗಿಲ್ಲ.
ಉಮೇಶ ರಾಮಣ್ಣ ಕ್ಷೇತ್ರದ ವಿವಿಧ ಗ್ರಾಮೀಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಉತ್ತಮ ರಸ್ತೆಗಳು ನಿರ್ಮಾಣ ಆಗಿವೆ. ಆದರೆ, ಶಾಸಕ ಖೇಣಿ ಕ್ಷೇತ್ರದತ್ತ ಮುಖ ಮಾಡದೇ, ಜನರಿಂದ ದೂರ ಉಳಿದಿದ್ದಾರೆ. ಇಲ್ಲಿನವರ ಸಮಸ್ಯೆಗಳನ್ನು ಆಲಿಸುವುದಿಲ್ಲ. ನಮ್ಮ ನೋವಿಗೆ ದನಿಯಾಗದಿದ್ದರೆ ಸರ್ಕಾರಕ್ಕೆ ನಮ್ಮ ಬೇಡಿಕೆಗಳು ಹೇಗೆ ಅರಿಯಲು ಸಾಧ್ಯ?
ಪ್ರಭು ಬಿರಾದಾರ ಬೀದರ ದಕ್ಷಿಣ ತೆಲಂಗಾಣ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕ್ಷೇತ್ರ. ಆದರೆ, ಖಾಸಗಿ ಸಕ್ಕರೆ ಕಾರ್ಖಾನೆ ಹೊರತುಪಡಿಸಿದರೆ ಒಂದು ಕೈಗಾರಿಕೆ ಸಹ ಇಲ್ಲ. ಹಾಗಾಗಿ ಉದ್ಯೋಗಕ್ಕಾಗಿ ಯುವಕರು ಸಲಹೆ ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿ ಕೈಗೆ ಕೆಲಸ ಕೊಡುವಂಥ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಬೇಕಿದೆ.
ನಾಗನಾಥ ಅಂಬ್ರೆಪ್ಪ ಬೀದರ ದಕ್ಷಿಣ ಕ್ಷೇತ್ರವನ್ನು ಎರಡೇ ವರ್ಷದಲ್ಲಿ ಸಿಂಗಾಪುರ ಮಾದರಿ ಅಭಿವೃದ್ಧಿ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೆ, ಒಂದು ಗ್ರಾಮ ಸಹ ಪ್ರಗತಿ ಮಾಡಲು ಸಾಧ್ಯವಾಗಿಲ್ಲ. ಶಾಸಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕೆಲವು ಗ್ರಾಮಗಳಲ್ಲಿ ಮಾತ್ರ ಮೂಲ ಸೌಕರ್ಯಗಳು ಸಿಕ್ಕಿದ್ದು, ಬಹುತೇಕ ಹಳ್ಳಿಗಳು ವಂಚಿತವಾಗಿವೆ. ಅಲ್ಲಿಯ ಜನರಿಗೆ ಸವಲತ್ತುಗಳು ಸಿಗಬೇಕು.
ಧೂಳಪ್ಪ ಬುಕ್ಕಾ ಶಶಿಕಾಂತ ಬಂಬುಳಗೆ