Advertisement
ತುಮಕೂರು ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ನಡೆಯುತ್ತಿರುವ ಹೇಮಾವತಿ ಲಿಂಕ್ ಕಾಮಗಾರಿ ವಿರೋಧಿಸಿ ಬಂದ್‌ಗೆ ರೈತ ಸಂಘಟನೆಗಳು, ಹೋರಾಟ ಸಮಿತಿ, ವಿವಿಧ ಕನ್ನಡಪರ ಸಂಘಟನೆಗಳು ತುಮಕೂರು ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಮಂಗಳವಾರ ಕೊರಟಗೆರೆಯಲ್ಲೂ ಸಹ ಬಂದ್‌ಗೆ ಕರೆ ನೀಡಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ತಾಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿದರು.
Related Articles
Advertisement
ಈ ಪ್ರತಿಭಟನೆಯಲ್ಲಿ ತೆಂಗು ನಾರು ನಿಗಮದ ಮಾಜಿ ಅಧ್ಯಕ್ಷ ವೆಂಕಟಾಚಲಯ್ಯ, ರೈತ ಸಂಘದ ಅಧ್ಯಕ್ಷ ರಂಗಹನುಮಯ್ಯ, ಶಬ್ಬೀರ್‌ಬಾಷಾ, ಮಾರುತಿ, ಕರವೇ ಅಧ್ಯಕ್ಷ ನಟರಾಜ್, ಪ್ರಸನ್ನಕುಮಾರ್, ಮುಖಂಡರಾದ ನರಸಿಂಹರಾಜು, ದಾಡಿವೆಂಕಟೇಶ್, ರವಿಕುಮಾರ್(ಕೆಂಗ), ಅಶ್ವತ್ಥ್ ನಾರಾಯಣ ರಾಜು (ಲಂಬುರಾಜು), ತುಂಬಾಡಿ ಲಕ್ಷ್ಮೀಶ್, ಕಾಮರಾಜು, ಗುರುದತ್ತ ಸೇರಿದಂತೆ ಇತರರು ಇದ್ದರು.
ರೈತರ ಹಿತ ಕಾಯುವುದು ಸರ್ಕಾರದ ಕೆಲಸ. ಆದರೆ ಒಂದು ಜಿಲ್ಲೆಯ ರೈತರಿಗಾಗಿ ಮತ್ತೊಂದು ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲು ಹೊರಟಿರುವುದು ಯಾವ ನ್ಯಾಯ. ಸರ್ಕಾರ ಕೂಡಲೇ ಈ ಹೇಮಾವತಿ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಿ ರೈತರಿಗೆ ಶಕ್ತಿಯಾಗಿ ನಿಲ್ಲದೇ ರೈತರ ವಿರೋಧಿಯಾದರೆ, ಇದರಿಂದ ಯಾವುದೇ ಘಟನೆ ನಡೆದರೂ ಸರ್ಕಾರವೇ ಜವಬ್ದಾರಿಯಾಗಿರುತ್ತದೆ. –ದೇವರಾಜ್ ಕೆ.ಎನ್, ತಾ. ಅಧ್ಯಕ್ಷ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
ರೈತರಿಗೆ ವಿಷವುಣಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೆನಾಲ್ ಯೋಜನೆ ಬೇಡವೆಂದು ರೈತರು ಗೋಗರೆದರೂ ಅವರ ಅಳಲನ್ನು ತಿರಸ್ಕರಿಸಲಾಗಿದೆ. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿ ಎರಡು ಇಲ್ಲಾ, ಅವರೆಡನ್ನು ತೆರೆಸುವ ಪ್ರಯತ್ನವನ್ನು ಇವತ್ತಿನ ಪ್ರತಿಭಟನೆಯ ಮೂಲಕ ಮಾಡುತ್ತಿದ್ದೇವೆ. – ಅಶ್ವತ್ಥ್ ನಾರಾಯಣ, ಮಾಜಿ ಪ.ಪಂ ಸದಸ್ಯ. ಕೊರಟಗೆರೆ
ಕೊರಟಗೆರೆ ಬಂದ್ ಯಶಸ್ವಿ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನೀರಾವರಿ ಹೋರಾಟ ಸಮಿತಿ, ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ತುಮಕೂರು ಜಿಲ್ಲೆ ಬಂದ್‌ಗೆ ಕರೆ ನೀಡಿದ ಹಿನ್ನೆಲೆ, ಕೊರಟಗೆರೆಯ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಇತರೆ ಸಂಘಟನೆಗಳು ಬೆಂಬಲ ಸೂಚಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದ್ದು, ಅಂಗಡಿ-ಮುಗ್ಗಟ್ಟುಗಳು ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿ ಬೆಂಬಲ ಸೂಚಿಸಿದ್ದು, ಬಂದ್ ಯಶಸ್ವಿಯನ್ನು ಕಂಡಿದೆ.