Advertisement

ಹೊಸ ಗೆಳೆಯರ ಅಭಿವೃದ್ಧಿಯ ಕನಸು

04:01 PM Dec 02, 2019 | Suhan S |

ಮುಂಬಯಿ : ಪತ್ರಿಕೆಯೊಂದರಲ್ಲಿ ಕಾರ್ಟೂನಿಸ್ಟ್‌ ಆಗಿದ್ದ ವ್ಯಕ್ತಿ ಇಡೀ ಮಹಾರಾಷ್ಟ್ರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ರಾಜಕೀಯ ಶಕ್ತಿಯಾಗುತ್ತಾರೆ ಎಂದು ಅಂದು ಯಾರೂ ಊಹಿಸಿರಲಿಕ್ಕಿಲ್ಲ. 1996ರ ಜೂನ್‌ 19ರಂದು ಮರಾಠಿ ಮಾಣೂಸ್‌ ಎಂಬ ಎರಡು ಶಬ್ದದೊಂದಿಗೆ ಬಾಳಾ ಸಾಹೇಬ್‌ ಠಾಕ್ರೆ ಅವರು ಮಹಾರಾಷ್ಟ್ರ ಮರಾಠರಿಗಾಗಿ ಎಂಬ ಘೋಷವಾಕ್ಯ ದೊಂದಿಗೆ ಆರಂಭಿಸಿದ ಶಿವಸೇನೆಯು ಬಳಿಕ ದೇಶ ಮಟ್ಟದಲ್ಲಿ ಖ್ಯಾತಿಗಳಿಸಿದ ರಾಜಕೀಯ ಪಕ್ಷವಾಯಿತು.

Advertisement

ಬಾಳಾ ಠಾಕ್ರೆ ಚುನಾವಣೆಯನ್ನು ಎದುರಿಸದೆ, ಸಾಂವಿಧಾನಿಕ ಹುದ್ದೆ ಯನ್ನು ನಿಭಾಯಿಸದೆ ರಿಮೋಟ್‌ ಕಂಟ್ರೋಲ್‌ ಮೂಲಕವೇ ಇಡೀ ಮಹಾರಾಷ್ಟ್ರವನ್ನು ನಿಯಂತ್ರಿಸುತ್ತಿದ್ದ ರೀತಿ ಅವರಲ್ಲಿರುವ ವಿಶೇಷ ನಾಯಕತ್ವಕ್ಕೊಂದು ಸಾಕ್ಷಿ. ಆರಂಭದಲ್ಲಿ ಶಿವನೇಸೆಯು ಹೇಗೆ ಬೆಳೆಯಿತು ಎಂಬುದು ಈಗಿನ ಮುಖ್ಯ ವಿಷಯವಲ್ಲ. ಈಗ ಬಾಳಾ ಠಾಕ್ರೆ ಕುಟುಂಬದ ಕುಡಿ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾಗಿ ಆಯ್ಕೆಯಾಗುವ ಕ್ಷಣ ಹತ್ತಿರವಾಗಿದೆ.

ಈ ಹಿಂದೆ ಮನೋಹರ ಜೋಷಿ ಮತ್ತು ನಾರಾಯಣ ರಾಣೆ ಅವರು ಈ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರೂ ಈ ಬಾರಿಯ ವಿಶೇಷತೆ ಸಾಕಷ್ಟಿದೆ. ತನ್ನ ದೀರ್ಘ‌ ಕಾಲದ ಮಿತ್ರಪಕ್ಷವಾಗಿರುವ ಬಿಜೆಪಿಯ ಸಂಬಂಧ ಕಡಿದುಕೊಂಡು ಶಿವಸೇನೆಯು ಎನ್‌ ಸಿಪಿ ಮತ್ತು ಕಾಂಗ್ರೆಸ್‌ ಜತೆ ಸೇರಿ ಸರಕಾರ ರಚಿಸುವುದು ಮತ್ತು ಇದೇ ಮೊದಲ ಬಾರಿಗೆ ಮಾತೋ ಶ್ರೀಯ ಸದಸ್ಯನೋರ್ವ ಮುಖ್ಯಮಂತ್ರಿಯಾಗುತ್ತಿರುವ ಕಾರಣದಿಂದ ಶಿವಸೈನಿಕರಲ್ಲಿ ಹೊಸ ಉತ್ಸಾಹ ತುಂಬಿದೆ. ಬಾಳಾ ಠಾಕ್ರೆಯ ನಿವಾಸ  ಮಾತೋಶ್ರೀಯಿಂದ ಬರುವ ಮಾತನ್ನು ಯಥಾವತ್ತಾಗಿ ಪಾಲಿಸುವಂಥ ಪಕ್ಷ ನಿಷ್ಠ ಶಿವಸೈನಿಕರ ತಂಡವು ಆ ಪಕ್ಷದ ದೊಡ್ಡ ಶಕ್ತಿ.

ವಡಾಪಾವ್‌ ಮೂಲಕ ತನ್ನ ರಾಜಕೀಯ ಬೇರನ್ನು ಗಟ್ಟಿಗೊಳಿಸೊ ಅದಕ್ಕೆ ದೊಡ್ಡ ಮಾನ್ಯತೆ ತಂದುಕೊಟ್ಟಿತು. ಇಂಥ ಶಿವಸೇನೆಯು ಈಗ ಹೊಸ ಮೈತ್ರಿಕೂಟದೊಂದಿಗೆ ಅಭಿವೃದ್ದಿ ಪರ ಆಡಳಿತ ನೀಡಲು ಸಿದ್ಧವಾಗಿದೆ. ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗೆ ಪ್ರತ್ಯೇಕ ಕಾರ್ಯಸೂಚಿಯೊಂದಿಗೆ ಆಡ ಳಿತ ನೀಡಲು ಯೋಚಿಸಿದೆ. ಈ ಬಾರಿ ಶಿವಸೇನೆಯಿಂದ ಓರ್ವ ಮುಸ್ಲಿಂಶಾಸಕನೂ ಆಯ್ಕೆಯಾಗಿದ್ದು, ಅದು ಕೂಡ ಪ್ಲಸ್‌ ಪಾಯಿಂಟ್‌ ಆಗಿದೆ. ಮೂರೂ ಪಕ್ಷಗಳು ಸೇರಿಕೊಂಡು ಆಡಳಿತ ಪ್ರತ್ಯೇಕ ಮಾರ್ಗ ಸೂಚಿ ಹಾಗೂ ಕಾರ್ಯಕ್ರ ಮ ಗಳನ್ನು ರೂಪಿಸಿಕೊಳ್ಳಲಿವೆ. ಜನಪ್ರಿಯತೆ ಮತ್ತು ದಿಢೀರ್‌ ಪ್ರಚಾರ ಪಡೆಯಲು ಪ್ರಯತ್ನಿಸದೆ ಅಭಿವೃದ್ಧಿ ಯೋಜನೆಗೆ ಮುಂದಾಗಿದೆ.

ರಾಣೆ ಈಗ ಶಿವಸೇನೆಯಲ್ಲಿಲ್ಲ ಶಿವ ಸೇ ನೆ ಯಿಂದ ಮುಖ್ಯ ಮಂತ್ರಿಯಾಗಿ 1 ವರ್ಷ ಆಡ ಳಿತ ನಡೆ ಸಿದ್ದ ಹಿರಿಯ ನಾಯಕ ನಾರಾಯಣ ರಾಣೆ ಕಾಂಗ್ರೆಸ್‌ ಸೇರಿ, ಬಳಿಕ ಬಿಜೆಪಿ ನಾಯಕರಾಗಿದ್ದಾರೆ. ಶಿವಸೇನೆಯ ಮೊದಲ ಮುಖ್ಯ ಮಂತ್ರಿ  ಯಾಗಿದ್ದ ಮನೋಹರ ಜೋಷಿ ಲೋಕ ಸಭೆಯ ಸ್ಪೀಕರ್‌ ಕೂಡ ಆಗಿದ್ದರು.

Advertisement

ಶಿವಸೇನೆ ನಡೆದುಬಂದ ದಾರಿ:

1966 ಜೂ. 19: ಬಾಳ್‌ ಠಾಕ್ರೆ ಅವರಿಂದ ಶಿವಸೇನೆ ಸ್ಥಾಪನೆ. ಮುಂಬಯಿಯಲ್ಲಿ ಮರಾಠಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಆಂದೋಲನ ರೂಪಣೆ.

1967: ಥಾಣೆ ನಗರಪಾಲಿಕೆ ಚುನಾವಣೆ ಯಲ್ಲಿ 40 ಸ್ಥಾನಗಳ ಪೈಕಿ 17 ಗೆಲುವು.

1968: ಮುಂಬಯಿ ಪಾಲಿಕೆ ಚುನಾವಣೆ ಯಲ್ಲಿ 121 ಸ್ಥಾನಗಳ ಪೈಕಿ 42 ಸ್ಥಾನ ಗೆಲುವು.

1969: ಕರ್ನಾಟಕದೊಂದಿಗಿನ ಗಡಿ ವಿವಾದ ಸಂಬಂಧ ಮುಂಬಯಿ ಬಂದ್‌ಗೆ ಕರೆ ನೀಡಿ ಬಾಳ್‌ ಠಾಕ್ರೆ ಬಂಧನ.

1975: ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಗೆ ಬೆಂಬಲ.

1984: ಶಿವಸೇನೆಗೆ ಚುನಾವಣಾ ಚಿಹ್ನೆ ಇರಲಿಲ್ಲವಾದ್ದರಿಂದ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಲು ಪ್ರಮೋದ್‌ ಮಹಾಜನ್‌ ಅವರ

ಮನವೊಲಿಸಲೆತ್ನಿಸಿದ ಠಾಕ್ರೆ.

1985: 75 ಸ್ಥಾನಗಳನ್ನು ಗೆದ್ದು ಮುಂಬಯಿ ನಗರ ಪಾಲಿಕೆಯ ಚುಕ್ಕಾಣಿ ಹಿಡಿದ ಶಿವಸೇನೆ.

1989: ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಜತೆ ಮೈತ್ರಿ.ಪಕ್ಷದ ಮುಖವಾಣಿ “ಸಾಮ್ನಾ’ ಆರಂಭ.

1990: ವಿಧಾನಸಭಾ ಚುನಾವಣೆಯಲ್ಲಿ 52 ಸ್ಥಾನಗಳನ್ನು ಗೆದ್ದ ಶಿವಸೇನೆ.

1995: ಮೊದಲ ಬಾರಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ. 73 ಸ್ಥಾನಗಳನ್ನು ಗೆದ್ದ ಶಿವಸೇನೆ. ಸಿಎಂ ಆಗಿ

ಮನೋಹರ್‌ ಜೋಷಿ ಆಯ್ಕೆ.

1999: ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಕೂಟಕ್ಕೆ ಕಾಂಗ್ರೆಸ್‌ -ಎನ್‌ಸಿಪಿ ಮೈತ್ರಿಕೂಟದ ಎದುರು ಸೋಲು.

2003: ಕಾರ್ಯಾಧ್ಯಕ್ಷರಾಗಿ ಬಾಳ್‌ಠಾಕ್ರೆ ಅವರ ಪುತ್ರ ಉದ್ಧವ್‌ ಠಾಕ್ರೆ ನೇಮಕ.

2006: ರಾಜ್‌ ಠಾಕ್ರೆ ಅವರಿಂದ ಪಕ್ಷತ್ಯಾಗ ಮತ್ತು ಎಂಎನ್‌ಎಸ್‌ ಸ್ಥಾಪನೆ.

2012: ಮುಂಬಯಿ ನಗರಪಾಲಿಕೆ ಚುನಾವಣೆಯಲ್ಲಿ 75 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡ ಶಿವಸೇನೆ.

ನವೆಂಬರ್‌ನಲ್ಲಿ ಬಾಳ್‌ ಠಾಕ್ರೆ(85) ನಿಧನ. ಉದ್ಧವ್‌ ಠಾಕ್ರೆಗೆ ಪಕ್ಷಾಧ್ಯಕ್ಷ ಪಟ್ಟ.

2014: ಬಿಜೆಪಿ ಸಖ್ಯ ತ್ಯಜಿಸಿವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 63 ಸ್ಥಾನಗಳಲ್ಲಿ ಗೆಲುವು. ಮತ್ತೆ ಬಿಜೆಪಿ ಜತೆ ಚುನಾವಣೋತ್ತರ ಮೈತ್ರಿ ಹಾಗೂ ಸಮ್ಮಿಶ್ರ ಸರಕಾರ ರಚನೆ.

2019: ವಿಧಾನಸಭಾ ಚುನಾವಣೆಯಲ್ಲಿ 56 ಸ್ಥಾನಗಳ ಗೆಲುವು. ಆದರೆ ಅಧಿಕಾರ ಹಂಚಿ ಕೆ ಸಂಬಂಧ ಬಿಜೆಪಿ ಸಖ್ಯಕೆಕ ವಿದಾಯ. ಎನ್‌ಸಿಪಿ-ಕಾಂಗ್ರೆಸ್‌ ಜತೆ ಮೈತ್ರಿ ರಚಿಸಿ ಅಧಿಕಾರಕ್ಕೇರಲು ಸಜ್ಜು. ಉದ್ದವ್‌ಗೆ ಮುಖ್ಯಮಂತ್ರಿ ಪಟ್ಟ

Advertisement

Udayavani is now on Telegram. Click here to join our channel and stay updated with the latest news.

Next