Advertisement
ಪ್ರತಿಯೋರ್ವರಿಗೂ ಬದುಕು ಒಂದು ಸುಂದರ ಅವಕಾಶ. ದೈನಂದಿನ ಏರಿಳಿತಗಳಿಗೆ ಹೊಂದಿಕೊಂಡು ಜೀವಿಸಿದಾಗ ಅದ್ಭುತವಾದ ಅನುಭವ ಪ್ರಾಪ್ತಿಯಾಗುತ್ತದೆ. ಇಂತಹ ಅನುಭವಗಳು ಮನುಷ್ಯನನ್ನು ಒಳ್ಳೆಯವನನ್ನಾಗಿಸಿ ಆಂತರಿಕ ಮತ್ತು ಬಾಹ್ಯವಾಗಿ ಎತ್ತರಕ್ಕೆ ಬೆಳೆಸುತ್ತದೆ. ಈ ರೀತಿ ಒಳ್ಳೆಯತನವನ್ನೆ ಬದುಕಿನ ಮೂಲವಾಗಿಸಿಕೊಂಡ ಕನಕ ಎಂಬವನ ಸಾಂಸಾರಿಕ ನೆಲೆಗಟ್ಟು ಕಥೆಯ ವಸ್ತು. ಸಮಾಜಮುಖೀಯೂ, ಸ್ವಾಭಿಮಾನಿಯೂ ಆದ ಪತ್ರಕರ್ತ ಕನಕ ರಕ್ತಸಂಬಂಧಕ್ಕೆ ಆದ್ಯತೆ ನೀಡುತ್ತಾ ಸಹೋದರತ್ವದ ವಾತ್ಸಲ್ಯದಿಂದ ಉನ್ನತಿಯ ಕನಸುಗಳನ್ನು ಕಾಣುತ್ತಾನೆ.
Related Articles
Advertisement
ಇಡೀ ನಾಟಕದಲ್ಲಿ ಯಾವುದೇ ಅಶ್ಲೀಲ ಪದಗಳಿಲ್ಲದ ಹಾಸ್ಯ ಸನ್ನಿವೇಶಗಳಿದ್ದು ಅದನ್ನು ನಿರೂಪಿಸಿದ ರೀತಿ ಮೆಚ್ಚುವಂತದ್ದು. ಹರೀಶ್ ಕಲ್ಯಾಣಪುರ, ವಿನಯ್ ಕಲ್ಮಾಡಿ, ಜೀವನ್ ಕುಮಾರ್, ಮಾ| ಮುರುಗೇಶ್ ಅವರ ನೈಜ ಶೈಲಿಯ ಹಾಸ್ಯಾಭಿನಯವಿದೆ. ಪ್ರಮುಖ ಪಾತ್ರವಾದ ಕನಕನಾಗಿ ಪ್ರಬುದ್ಧ ರಂಗನಟ ಯೋಗೀಶ್ ಕೊಳಲಗಿರಿ ಅಭಿನಯಿಸಿದ್ದು, ಸಮಾಜ ಮತ್ತು ಕೌಟುಂಬಿಕ ಕಾಳಜಿಯ ಜೀವಂತಿಕೆ ಎದ್ದು ಕಾಣುತ್ತದೆ. ಸಂದರ್ಭಕ್ಕೆ ತಕ್ಕುದಾದ ಬೆಳಕಿನ ಸಂಯೋಜನೆಯನ್ನು ನಿಖೀಲ್ ಕೊಡವೂರು ಮಾಡಿದ್ದು, ನಿರ್ದೇಶನದೊಂದಿಗೆ ಸಂಗೀತ ನಿರ್ವಹಣೆಯನ್ನು ಮಾಡಿದ ಚಂದ್ರಕಾಂತ್ ಕಲ್ಮಾಡಿಯವರ ಪ್ರತಿಭೆ ಶಹಬ್ಟಾಸ್ ಎನ್ನುವಂತದ್ದು. ಗಾಯಕ ನವೀನ್ ಚಂದ್ರ ಕೊಪ್ಪ ಸ್ವರದಲ್ಲಿ ಸುಶ್ರಾವ್ಯ ಗೀತೆಗಳಿದ್ದು, ಸಂಗೀತ ನಿರ್ದೇಶಕ ಶರತ್ ಉಚ್ಚಿಲ ಸಂಯೋಜನೆಯಲ್ಲಿ ನಿರ್ಮಾಣಗೊಂಡಿದೆ.
ಜಯರಾಮ್ ನೀಲಾವರ