Advertisement
ಪೂರ್ಣಗೊಳ್ಳದ ಕೆಲಸಎರಡು ವರ್ಷಗಳ ಹಿಂದೆಯೇ ಸಂತೆ ಮಾರ್ಕೆಟ್‌ನಿಂದ ಪೇಟ್ರೋಲ್ ಬಂಕ್ ವರೆಗೆ ಚರಂಡಿ ನಿರ್ಮಿಸಲು ಕಾಮಗಾರಿ ಕೈಗೆತ್ತಿಗೊಳ್ಳಲಾಗಿತ್ತು.
ಅರೆಬರೆ ಕೆಲಸ ಮಾಡಿದ್ದು ಅಲ್ಲಲ್ಲಿ ಸಿಮೆಂಟ್ ಸ್ಲಾಬ್ ಮುಚ್ಚದೆ ಹಾಗೆಯೇ ಬಿಡಲಾಗಿದೆ. ಸ್ಲಾéಬ್ ಬದಿಗೆ ಹಾಕಿದ ಮಣ್ಣು ಕುಸಿದಿದೆ. ಇನ್ನು ರಸ್ತೆ ಬದಿಯಲ್ಲಿ ಹೊಂಡಗಳು ಇರುವುದರಿಂದ ವಾಹನ ಸವಾರರಿಗೂ ಅಪಾಯಕಾರಿಯಾಗಿದೆ.
ಐಆರ್‌ಬಿ ಕಂಪೆನಿ ಚರಂಡಿ ಕಾಮಗಾರಿ ಪೂರ್ಣಗೊಳಿಸದ್ದರಿಂದ ಅರ್ಧಂಬರ್ಧ ಕಾಮಗಾರಿ ನಡೆಸಿದ ಜಾಗದಲ್ಲಿ ನೀರು ತುಂಬಿದೆ. ಸಂತೆ ಮಾರ್ಕೆಟ್ ಬಳಿಯ ಚರಂಡಿಯ ಒಳಗೆ ನಿಂತ ನೀರಿನಲ್ಲಿ ಕೊಳೆತ ವಸ್ತುಗಳು ಸೇರಿದ್ದು ಕೆಟ್ಟ ವಾಸನೆ ಬರುತ್ತಿದೆ. ಜೋರು ಮಳೆ ಬಂದರೆ ನೀರು ರಸ್ತೆಗೆ ನುಗ್ಗುವ ಅಪಾಯವೂ ಇದೆ. ಅಪಾಯ ತಪ್ಪಿಸಿ
ಅರೆಬರೆ ಚರಂಡಿ ಕಾಮಗಾರಿಯಿಂದ ಕೆಲವೆಡೆ ಬಾಯ್ದೆರೆದುಕೊಂಡಿದ್ದು, ವಾಹನಗಳ ಧಾವಂತದ ಸಂದರ್ಭ ಓಡಾಡುವವರು ಚರಂಡಿಗೆ ಬೀಳುವ ಸಾಧ್ಯತೆ ಇದೆ. ಮಳೆನೀರು ಹರಿಯುವ ವೇಳೆ ಗುರುತಿಸುವುದೂ ಕಷ್ಟವಾದ್ದರಿಂದ ಸಂಭವನೀಯ ಅಪಾಯ ತಪ್ಪಿಸಬೇಕಿದೆ.
Related Articles
ಸಮಸ್ಯೆಗಳ ಬಗ್ಗೆ ಐಆರ್‌ಬಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಲ್ಲದೇ ಗ್ರಾ.ಪಂ.ಸದಸ್ಯರು ಅಧಿಕಾರಿಗಳ ಬಳಿ ಹೋಗಿ ಸಮಸ್ಯೆ ಕುರಿತು ತಿಳಿಸಿದ್ದಾರೆ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
-ಹರೀಶ ಮೊಗವೀರ, ಪಿಡಿಒ ಉಪ್ಪುಂದ ಗ್ರಾ.ಪಂ.
Advertisement
ರಸ್ತೆ ಕೆಸರುಮಯಎಂಬ್ಯಾಕ್ವೆುಂಟ್ ನಿರ್ಮಾಣದಿಂದ ಸರ್ವಿಸ್ ರಸ್ತೆ ತುಂಬ ಕಿರಿದಾಗಿದೆ. ಸ್ಥಳಾವಕಾಶದ ಕೊರತೆ ಜತೆಗೆ ಚರಂಡಿಯಲ್ಲಿ ಕೆಸರಿದ್ದು, ಕೆಲವೆಡೆ ರಸ್ತೆಯ ಮೇಲೆ ಕೆಸರು ನೀರು ಹರಿಯುತ್ತಿದೆ. ಇದರಿಂದ ನಾಗರಿಕರಿಗೆ ಓಡಾಟವೇ ಕಷ್ಟವಾಗಿದೆ.