Advertisement
ಜಿಲ್ಲೆಯ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೆಂದ್ರವಾದ ಮಲ್ಪೆ ನಗರದ ಹೃದಯ ಭಾಗದಲ್ಲಿರುವ ರಸ್ತೆಯ ಎರಡೂ ಬದಿಯಲ್ಲಿ ನೀರು ಹರಿಯುಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೆ ಹರಿಯುತ್ತಿದೆ. ಈ ಭಾಗದಲ್ಲಿನ ತೋಡಿನ ಹೂಳು ಕಳೆದ ಹಲವಾರು ವರ್ಷಗಳಿಂದ ತೆಗೆಯದ ಕಾರಣ ಚರಂಡಿಯೇ ನಾಮಾವಶೇಷಗೊಂಡಿದೆ.
ಮುಖ್ಯರಸ್ತೆಯಲ್ಲಿ ಅಂಗಡಿಗಳ ಮೆಟ್ಟಿಲುಗಳು ಚರಂಡಿಯನ್ನು ಮುಚ್ಚಿ ಕಟ್ಟಲಾಗಿದ್ದು, ಅಲ್ಲಲ್ಲಿ ತುಂಡು ತುಂಡು ಚರಂಡಿಗಳು ಮಾತ್ರ ಕಾಣುತ್ತಿವೆ. ಉಳಿದ ಕಡೆಯ ಚರಂಡಿಗಳು ಮಣ್ಣಿನಿಂದ ಮುಚ್ಚಿ ಹೋಗಿವೆ. ಹಾಗಾಗಿ ಪ್ರತಿ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿ, ಮಳೆ ನೀರು ರಸ್ತೆಯಲ್ಲೇ ಹರಿಯುವುದು ಸಾಮಾನ್ಯವಾಗಿದೆ. ಚರಂಡಿಯಲ್ಲಿ ಕಸಕಡ್ಡಿ
ಇಲ್ಲಿನ ಬೇಬಿ ಮೈರನ್‌ಇಂಡಸ್ಟ್ರೀಸ್‌ನಿಂದ ಬಾಪುತೋಟ ಪ್ರದೇಶದ ಬಳಿಯ ರಸ್ತೆಯ ಚರಂಡಿ ನಿರ್ವಹಣೆ ಮಾಡಿಲ್ಲ. ಚರಂಡಿಯಲ್ಲಿ ಕಸಕಡ್ಡಿ ತ್ಯಾಜ್ಯಗಳು ತುಂಬಿಹೋಗಿದ್ದು, ನೀರು ಹರಿಯಲು ಸಮಸ್ಯೆ ಇದೆ. ಕಸವನ್ನು ಎರಡು ಮೂರು ಬಾರಿ ತೆರವುಗೊಳಿಸಲಾಗಿದರೂ, ಕೆಲವೇ ದಿನದಲ್ಲಿ ಮತ್ತೆ ಕಸಕಡ್ಡಿ
ತುಂಬಿಕೊಳ್ಳುತ್ತದೆ. ಈ ಭಾಗದಲ್ಲಿ ಹೊರಜಿಲ್ಲೆಯ ಮಂದಿ ಇದ್ದು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಇದು ಕೂಡ ಸಮಸ್ಯೆಗೆ ಕಾರಣವಾಗುತ್ತಿದೆ.
Related Articles
ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ (ಫಿಶರೀಸ್) ಮುಂಭಾಗದಲ್ಲಿರುವ ಚರಂಡಿಗೆ ಸಮೀಪದ ಸಂಕೀರ್ಣಗಳಿಂದ ಕೊಳಚೆ ನೀರು ಹರಿದು ಬಂದು ಹೂಳಿನೊಂದಿಗೆ ಕಸಕಡ್ಡಿಯಿಂದ ಚರಂಡಿ ಮುಚ್ಚಿ ಹೋಗಿದೆ. ಇದರಿಂದ ಮಳೆ ನೀರು ರಸ್ತೆಯಲ್ಲಿ ಶೇಖರಣೆಗೊಳ್ಳುತ್ತಿದೆ. ಕಳೆದ ವರ್ಷ ಶಾಲಾ ಕಾಲೇಜಿನ ಮಕ್ಕಳು ಈ ಕೊಳಚೆ ನೀರನ್ನೇ ತುಳಿದುಕೊಂಡು ಹೋಗಿ ಶಾಲಾ ಆವರಣಕ್ಕೆ ತೆರಳುವ ಪರಿಸ್ಥಿತಿ ಇತ್ತು. ಇಲ್ಲಿನ ಸಮಸ್ಯೆಯನ್ನು ಕೂಡ ಬಗೆಹರಿಸಬೇಕಾಗಿದೆ.
Advertisement
ರಸ್ತೆ ಅಗಲೀಕರಣ ಕೈ ಗೂಡದ ಯೋಜನೆಹೂಳು ತುಂಬಿದ ಚರಂಡಿ, ಕೊಳಚೆ ಸಹಿತ ಮಳೆನೀರು, ಜತೆ ಸೊಳ್ಳೆಗಳ ಕಾಟದಿಂದಾಗಿ ಅಂಗಡಿ ಮುಂಗಟ್ಟು ಗಳ ಮಂದಿ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ. ಮಲ್ಪೆ ಆದಿವುಡುಪಿ ರಸ್ತೆ ಅಗಲೀಕರಣ ಯೋಜನೆ ಕೈ ಗೂಡದ ಹಿನ್ನೆಲೆಯಲ್ಲಿ ಇಲ್ಲಿ ಸುಸಜ್ಜಿತ ಚರಂಡಿ ನಿರ್ಮಾಣ ಮಾಡುವ ಯೋಜನೆಯೂ ಬಾಕಿಯಾಗಿದೆ. ಯುಬಿಎಂ ದೇವಾಲಯ, ಸಿಂಡಿಕೇಟ್ ಬ್ಯಾಂಕ್, ಮಸೀದಿ ಮುಂಭಾಗದ ರಸ್ತೆಯ ಬದಿಯ ತೋಡಿನಲ್ಲಿ ಗಿಡಗಂಟಿಗಳು ಬೆಳೆದು ನಿಂತು ನೀರು ಹರಿಯಲು ತಡೆಯೊಡ್ಡಿದೆ. ಕೊಪ್ಪಲತೋಟ ರೈಸ್ ಮಿಲ್ ಬಳಿ, ಹನುಮಾನ್‌ನಗರ ಭಜನಾ ಮಂದಿರ ಹಿಂಬದಿ ತೋಡಿನ ಹೂಳನ್ನು ತೆರವುಗೊಳಿಸುವ ಕಾರ್ಯ ನಡೆದಿಲ್ಲ. ವಾರಕ್ಕೊಮ್ಮೆ ಬರುತ್ತಾರೆ
ಮಳೆಯ ಮುನ್ನಚ್ಚರಿಕೆಯ ಕ್ರಮವಾಗಿ ಸಿದ್ಧತೆ ಮಾಡಲಾಗುತ್ತಿದೆ. ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆ ಇದೆ ಎಂದು ವಾರಕ್ಕೆ ಒಂದು ದಿನ 4 ಮಂದಿಯನ್ನು ಕಳುಹಿಸುತ್ತಾರೆ. ಕೆಲವಡೆ ಮಾತ್ರ ಚರಂಡಿ ತುಂಬಿರುವ ಹೂಳನ್ನು ತೆರವುಗೊಳಿಸಲಾಗಿದೆ. ಇನ್ನು ಹÇವಾರು ಕಡೆಗಳಲ್ಲಿ ಬಾಕಿ ಇದೆ. ಕೆಲವರು ಸ್ವತ್ಛಗೊಳಿಸಿದ ಚರಂಡಿಗೆ ಮತ್ತೆ ಕಸಕಡ್ಡಿಯನ್ನು ಎಸೆದು ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ.
-ಎಡ್ಲಿನ್ ಕರ್ಕಡ,
ನಗರಸಭಾ ಸದಸ್ಯರು, ಮಲ್ಪೆ ಸೆಂಟ್ರಲ್ -ನಟರಾಜ್ ಮಲ್ಪೆ