Advertisement
ಈ ವರ್ಷ ಹೆಚ್ಚುಹಲವು ವರ್ಷಗಳ ಬಳಿಕ ಮಹಿಳಾ ಮತ ದಾರರು ಪ್ರಜಾಪ್ರಭುತ್ವದಲ್ಲಿ ಹೆಚ್ಚು ತೊಡಗಿಸಿ ಕೊಳ್ಳುತ್ತಿದ್ದಾರೆ. 1960ರ ಸುಮಾರಿಗೆ ಶೇ. 16. 7ರಷ್ಟು ಇದ್ದ ಪುರುಷ ಹಾಗೂ ಮಹಿಳಾ ಮತ ದಾರರ ನಡುವೆ ವ್ಯತ್ಯಾಸ ಶೇ. 1.79ಕ್ಕೆ ಇಳಿದಿದೆ.
ರಾಜಕಾರಣ ಏನಿದ್ದರೂ ಪುರುಷರಿಗೆ ಎಂಬ ಮಾತ್ರ ಎಂಬ ಭಾವನೆ ಇತ್ತು. ಮಹಿಳೆಯರಿಗೆ ಕೆಲವು ಕ್ಷೇತ್ರಗಳಲ್ಲಿ ನಿಬಂಧನೆಗಳನ್ನು ಹೇರ ಲಾಗಿತ್ತು. ಇಂದು ಚಿತ್ರಣ ಬದಲಾಗಿದ್ದು, ಮಹಿಳೆಯರು ಅಬಲೆ ಅಲ್ಲ ಎಂಬ ದೃಢ ನಿರ್ಧಾರ ತಲೆದಿದ್ದಾರೆ. ಆಧುನಿಕ ಜೀವನ ಮಹಿಳೆಯರನ್ನು ಪ್ರಜಾಪ್ರಭುತ್ವದತ್ತ ಕರೆ ತಂದಿದೆ. ಇದು ಇಂದು-ನಿನ್ನೆಯ ಬೆಳವಣಿಗೆ ಅಲ್ಲ. ಸ್ವಾತಂತ್ರ್ಯ ಲಭಿಸಿದ ಬಳಿಕ ಭಾರತದಲ್ಲಿ ಉಂಟಾದ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಪ್ರತೀಕ.
Related Articles
ಮಹಿಳಾ ಮತದಾರರನ್ನು ಉತ್ತೇಜಿಸುವ ಸಲುವಾಗಿ ಚುನಾವಣ ಆಯೋಗ ಮಹಿಳಾ ಮತಗಟ್ಟೆಯನ್ನು (ಪಿಂಕ್‌ಮತಗಟ್ಟೆ) ಸ್ಥಾಪಿಸಲು ನಿರ್ಧರಿಸಿತ್ತು. ಇದರಿಂದ ಮಹಿಳೆಯರಿಗೆ ಉತ್ತೇಜನ ಲಭಿಸಿದ ಪರಿಣಾಮ ಇಂದು ಮತಗಟ್ಟೆಯತ್ತ ಬರುವ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.
Advertisement
ಯಾವೆಲ್ಲ ರಾಜ್ಯದಲ್ಲಿ ಹೆಚ್ಚಳ?ಪುದುಚೇರಿ, ಕೇರಳ, ಗೋವಾ, ಮಣಿಪುರ, ದಮನ್ ಮತ್ತು ದೀಯು, ಮೇಘಾಲಯ, ಲಕ್ಷದೀಪ, ತಮಿಳುನಾಡು ಈ ರಾಜ್ಯದಲ್ಲಿ ಮಹಿಳಾ ಮತದಾರರ ಸಂಖ್ಯೆ ಒಟ್ಟು ಮತದಾರರ ಪೈಕಿ ಶೇ. 50ಕ್ಕಿಂತ ಹೆಚ್ಚಿದೆ. ಈ 8 ರಾಜ್ಯಗಳಲ್ಲಿ 68 ಲೋಕಸಭಾ ಸೀಟುಗಳಿವೆ ಅಂದರೆ ಶೇ. 12.5 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ. ಇವು ಗಳಲ್ಲಿ ಕೇರಳ 20 ಮತ್ತು ತಮಿಳುನಾಡು 30 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ಇನ್ನು ಮಹಿಳಾ ವೋಟ್ ಬ್ಯಾಂಕ್?
ಈ ತನಕ ದೇಶದಲ್ಲಿ ಧರ್ಮ ಆಧಾರಿತ, ಜಾತಿಯಾಧಾರಿತ ವೋಟ್‌ಗಳಿಗೆ ರಾಜಕೀಯ ಪಕ್ಷಗಳು ಹೆಚ್ಚು ತಲೆಕೆಡಿಸಿಕೊಂಡಿದ್ದವು. ಇವುಗಳನ್ನು ಚಾಚಿಕೊಳ್ಳುವುದಕ್ಕೆ ಜಾತಿ ಆಧಾರಿತ, ಧರ್ಮಾಧಾರಿತ ಯೋಜನೆಗಳನ್ನು ಪಕ್ಷಗಳು ಜಾರಿಗೆ ತರುತ್ತಿದ್ದವು. ಇದೀಗ ಮಹಿಳಾ ಪರ ಯೋಜನೆಗಳನ್ನೂ ರಾಜಕೀಯ ಪಕ್ಷಗಳು ಜಾರಿಗೆ ತರಬೇಕಾದ ಅನಿವಾರ್ಯಕ್ಕೆ ಸಿಲುಕಿದಂತಾಗಿದೆ. 16ನೇ ಸಂಸತ್ತಿನಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) 89 ಮಹಿಳಾ ಸಂಸದೆಯರಿದ್ದರು. ಭಾರತ ಮತ್ತು ಪಾಕಿಸ್ಥಾನ
ಸರ್ವೇಯೊಂದರ ಪ್ರಕಾರ ಪಾಕಿಸ್ಥಾನದಲ್ಲಿ ಮಹಿಳೆಯರು ಮತದಾನದಲ್ಲಿ ಪಾಲ್ಗೊಳ್ಳುವ ಸಂಖ್ಯೆ ಅತೀ ಕಡಿಮೆಯಾಗಿದೆ. ಭಾರತಕ್ಕೆ ಹೋಲಿಸಿದರೆ ಪಾಕಿಸ್ಥಾನದ ಸಾಧನೆ ಅತೀ ಕಳಪೆ. ಭಾರತದಲ್ಲಿ ಒಟ್ಟು ಸಂಸದರಲ್ಲಿ ಶೇ.11.2ರಷ್ಟು ಮಹಿಳೆ ಯಾಗಿದ್ದರೆ, ಪಾಕಿಸ್ಥಾನದಲ್ಲಿ ಶೇ.20 ಮಹಿಳಾ ಸಂಸದೆಯರಿದ್ದಾರೆ. ವಿಶ್ವದಲ್ಲಿ ಈ ಸಂಖ್ಯೆ ಶೇ.24.3ರಷ್ಟಿದೆ. ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ
1999ರಿಂದ 2009ರ ವರೆಗೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಯಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ. 1999ರಲ್ಲಿ 284 ಇದ್ದ ಅಭ್ಯರ್ಥಿಗಳು 2009ರಲ್ಲಿ 556ಕ್ಕೆ ಏರಿದ್ದಾರೆ. ಕೇಂದ್ರ ಸಂಪುಟದಲ್ಲಿ 5 ಮಹಿಳೆಯರಿದ್ದಾರೆ. 5 ಪ್ರಮುಖ ನಾಯಕಿಯರು ವಿವಿಧ ರಾಜಕೀಯ ಪಕ್ಷಗಳ ಮುಖ್ಯಸ್ಥರಾಗಿದ್ದಾರೆ ಎಂಬುದು ವಿಶೇಷ.