Advertisement

ಪ್ರಕೃತಿ ಅಂತಾರಾಷ್ಟ್ರೀಯ ಸಾಕ್ಷ್ಯ ಚಿತ್ರೋತ್ಸವಕ್ಕೆ ತೆರೆ

01:20 PM Nov 29, 2021 | Team Udayavani |

ಮೈಸೂರು: ನಗರದ ಮಾನಸಗಂಗೋತ್ರಿಯಲ್ಲಿ 4 ದಿನಗಳಿಂದ ನಡೆದ ಪ್ರಕೃತಿ ಅಂತಾರಾಷ್ಟ್ರೀಯ ಸಾಕ್ಷ್ಯ ಚಿತ್ರೋತ್ಸವಕ್ಕೆ ಸಂಭ್ರಮದ ತೆರೆಬಿದ್ದಿತು. ನವ ದೆಹಲಿಯ ಶೈಕ್ಷಣಿಕ ಸಂವಹನ ಒಕ್ಕೂಟ ಹಾಗೂ ಮೈಸೂರು ವಿವಿ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ(ಇಎಂಆರ್‌ಸಿ) ಹಾಗೂ ಯುಜಿಸಿ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ಇಎಂಆರ್‌ಸಿ ಆತಿಥ್ಯದಲ್ಲಿ ನಡೆದ 23ನೇ ಶೈಕ್ಷಣಿಕ ವಿಡಿಯೋ ಸ್ಪರ್ಧೆ ಹಾಗೂ ಪ್ರಕೃತಿ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವದ ಕೊನೇ ದಿನ ಗ್ರೀನ್‌ ಮೋಕ್ಷ, ವೇವ್‌ ಆಫ್ ಟ್ರಾನ್ಸ್‌ಫಾರ್‌ ಮೇಷನ್‌, ಬ್ಲ್ಯೂಮಿಂಗ್‌ ಟುಗೆದರ್‌ ಹಾಗೂ ಸಿಕ್ಸ್ ವುಮನ್ಸ್‌ ಸಾಲಿಡ್‌ ವೆಸ್ಟ್ ಮ್ಯಾನೇಜ್ಮೆಂಟ್‌ ಸಾಕ್ಷ್ಯಚಿತ್ರಗಳು ರಾಷ್ಟ್ರ ಪ್ರಶಸ್ತಿಗೆ ಭಾಜನವಾದವು.

Advertisement

 ಪ್ರಮಾಣ ಪತ್ರ: ಮೈವಿವಿ ಮಾನಸ ಗಂಗೋತ್ರಿ ಆವರಣದ ವಿಜ್ಞಾನ ಭವನದಲ್ಲಿ ನಡೆದ ಸಮಾರೋಪದಲ್ಲಿ ಚಿತ್ರಗಳ ನಿರ್ದೇಶಕರಿಗೆ 50 ಸಾವಿರ ರೂ. ಚೆಕ್‌, ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಚಿತ್ರಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

 ವಿಜೇತರು: ಪರಿಸರ ವಿಭಾಗದಲ್ಲಿ ಮಧ್ಯ ಪ್ರದೇಶದ ಆಶಿಶ್‌ ಭಾವ್ಲಕರ್‌ ನಿರ್ದೇಶನದ ಗ್ರೀನ್‌ ಮೋಕ್ಷ(ಹಿಂದಿ), ಅಭಿವೃದ್ಧಿ ವಿಭಾಗದಲ್ಲಿ ಅಶೋಕ್‌ ಭುತನಿ ನಿರ್ದೇಶನದ ವೇವ್‌ ಆಫ್ ಟ್ರಾನ್ಸ್‌ಫಾರ್‌ಮೇಷನ್‌ (ಇಂಗ್ಲಿಷ್‌), ಮಾನವ ಹಕ್ಕುಗಳ ವಿಭಾಗದಲ್ಲಿ ಜಯಜೋಶ್‌ ರಾಜ್‌ ನಿರ್ದೇಶನದ ಬ್ಲ್ಯೂಮಿಂಗ್‌ ಟುಗೆದರ್‌ (ಬೆಂಗಾಲಿ/ ಇಂಗ್ಲಿಷ್‌), ಸ್ವತ್ಛ ಭಾರತ್‌ ವಿಭಾಗದಲ್ಲಿ ಬೆಂಗಳೂರಿನ ಟಿ.ಪಿ.ವರದ ನಾಯಕ್‌ ನಿರ್ದೇಶನದ ಸಿಕ್ಸ್ ವುಮನ್ಸ್ ಸಾಲಿಡ್‌ ವೆಸ್ಟ್ ಮ್ಯಾನೇಜ್ಮೆಂಟ್‌ (ಇಂಗ್ಲಿಷ್‌) ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದುಕೊಂಡವು. 4 ವಿಭಾಗಗಳ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ 97 ಸಾಕ್ಷ್ಯಚಿತ್ರ ಭಾಗವಹಿಸಿದ್ದವು.‌

ಅದರಲ್ಲಿ ನಾಲ್ಕು ಸಾಕ್ಷ್ಯಚಿತ್ರ ಪ್ರಶಸ್ತಿಗೆ ಭಾಜನವಾದರೆ, 16 ಚಿತ್ರಗಳು ಪ್ರದರ್ಶನ ಪ್ರಮಾಣ ಪತ್ರ ಪಡೆದುಕೊಂಡವು. ನವ ದೆಹಲಿಯ ಶೈಕ್ಷಣಿಕ ಸಂವಹನ ಒಕ್ಕೂಟದ ನಿರ್ದೇಶಕ ಪ್ರೊ.ಜಗತ್‌ ಭೂಷಣ್‌ ನಡ್ಡ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಹಾಗೂ ಮದ್ರಾಸ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ಗೌರಿ ಅವರು ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಿದರು. ಇಎಂಎಂಆರ್‌ಸಿ ನಿರ್ದೇಶಕ ಪ್ರೊ.ಎಚ್‌. ರಾಜಶೇಖರ್‌ರ, ಚಿತ್ರೋತ್ಸವದ ಸಂಚಾಲಕ ಡಾ.ಸುನೀಲ್‌ ಮೆಹ್ರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next