Advertisement
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಅಧ್ಯಕ್ಷೆ ನಯಿಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆ ಪ್ರಗತಿ ಕುರಿತು ಡಿಡಿಪಿಐ ಮಮತಾ ಮಾತನಾಡಿ, ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯು 11ನೇ ಸ್ಥಾನ ಪಡೆದಿತ್ತು.
ಮೊದಲ ಹಂತದಲ್ಲಿ ಬೆಳಗ್ಗೆ 9ರಿಂದ ವಿಶೇಷ ತರಗತಿ ನಡೆಯುತ್ತಿದೆ. ನವಂಬರ್‌ನಿಂದ ಸಂಜೆ ಸಮಯದಲ್ಲಿ ವಿಶೇಷ ತರಗತಿ ನಡೆಸಲಿದ್ದು, ಸೇತುಬಂಧ ಕಾರ್ಯಕ್ರಮದ ಮೂಲಕ ಎಂಟು, ಒಂಭತ್ತನೇ ತರಗತಿಯಿಂದಲೇ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು 62 ಮಕ್ಕಳು ಇದ್ದು, ಅದರಲ್ಲಿ 32 ಮಕ್ಕಳನ್ನು ಟೆಂಟ್ ಶಾಲೆಗೆ ಸೇರಿಸಲಾಗಿದೆ. ಆಯಾಯ ಶಾಲೆಯ ವ್ಯಾಪ್ತಿಗೆಬರುವ ಮಕ್ಕಳನ್ನು ಅಲ್ಲೇ ನೇರವಾಗಿ ಸೇರಿಸಲಾಗಿದೆ. ಗಜಪಡೆ ಮಾವುತರು, ಕಾವಾಡಿಗಳ ಮಕ್ಕಳಿಗಾಗಿ ಟೆಂಟ್ ಶಾಲೆಯನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
Related Articles
Advertisement
ಈ ಬಗ್ಗೆ ಪರಿಶೀಲಿಸಿ ವರದಿ ನೀಡಲು ಬಿಇಒಗೆ ಹೇಳಲಾಗಿದೆ. ಅಲ್ಲದೆ ನಿಯಮಾನುಸಾರ ಶೂಗಳನ್ನು ಜಿಎಸ್‌ಟಿ ಮೂಲಕ ಖರೀದಿ ಮಾಡಿರುವ ಬಗ್ಗೆ ಎಲ್ಲಾ 9 ವಲಯಗಳಿಂದ ಮಾಹಿತಿ ಪಡೆದು, ವರದಿ ನೀಡುವಂತೆ ಸೂಚಿಸಲಾಗಿದೆ. ಒಂದೊಮ್ಮೆ ಜಿಎಸ್‌ಟಿ ಮೂಲಕ ಶೂಗಳನ್ನು ಖರೀದಿ ಮಾಡಿಲ್ಲದಿದ್ದರೆ ಅಂತಹ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ನೋಟಿಸ್ ನೀಡಿ ಕ್ರಮವಹಿಸುವುದಾಗಿ ಜಿಪಂ ಸಿಇಒ ಜ್ಯೋತಿ ಅವರು ತಿಳಿಸಿದರು.
ಡಿಎಚ್‌ಒಗೆ ತರಾಟೆ: ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಸಾಲಿಗ್ರಾಮದ ಆರೋಗ್ಯ ಕೇಂದ್ರದಲ್ಲಿ ಶೌಚಾಲಯಕ್ಕೆ ಬಾಗಿಲು ಸಹ ಹಾಕಿಸಲು ಸಾಧ್ಯವಾಗಿಲ್ಲ. ನೀವು ಯಾವ ಆಸ್ಪತ್ರೆಗೆ ಭೇಟಿ ನೀಡಿದ್ದೀರಾ? ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್ ಪ್ರಶ್ನಿಸಿದರು.
40 ಸಾವಿರ ಜನಸಂಖ್ಯೆ ಇರುವ ಸಾಲಿಗ್ರಾಮದಲ್ಲಿ ಒಂದು ನರ್ಸ್ ಇಲ್ಲ, ಮಿರ್ಲೆ ಆಸ್ಪತ್ರೆಯಲ್ಲೂ ಇದ್ದಂತಹ ನರ್ಸ್‌ಗಳನ್ನು ವರ್ಗಾವಣೆಯಾಗಿದೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಬಸವರಾಜು, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೌನ್ಸಿಲ್‌ನಲ್ಲಿ ನಡೆಯಲಿದ್ದು, ಇದಕ್ಕೆ ನಾವೇನೂ ಮಾಡಲಾಗುವುದಿಲ್ಲ ಎಂದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಸಾ.ರಾ.ನಂದೀಶ್, ಪವರ್ ಇಲ್ಲ ಅಂದರೆ ಹೇಗೆ, ಆಡಳಿತ ಮಾಡಲಿಕ್ಕೆ ಆಗದಿದ್ದರೆ ಜಿಲ್ಲೆಯಲ್ಲಿ ಕುಳಿತು ಸಂಬಳ ಪಡೆಯಲು ಇದ್ದೀರಾ? ಎಂದು ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ನಟರಾಜು, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಇನ್ನಿತರರು ಹಾಜರಿದ್ದರು.
2300 ಹೆಕ್ಟೇರ್ ಬೆಳೆ ಹಾನಿ: ಜಿಲ್ಲೆಯಲ್ಲಿ ಕಾವೇರಿ, ಕಬಿನಿ ನದಿಯಿಂದ ನೀರು ಹರಿಯಲು ಬಿಟ್ಟಿದ್ದರಿಂದ ಬೆಳೆಹಾನಿಯಾಗಿದ್ದು,ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ 2300ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿಇಲಾಖೆ ಜಂಟಿ ನಿರ್ದೇಶಕ ಮಹಾಂತೇಶಪ್ಪ ವಿವರಿಸಿದರು.
ಜಿಲ್ಲೆಯಲ್ಲಿ ಬಿತ್ತನೆಬೀಜ, ರಸಗೊಬ್ಬರದ ಸಮಸ್ಯೆ ಇಲ್ಲ. ಪರಿಹಾರಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಂದ ಬಳಿಕ ಪರಿಹಾರ ನೀಡಲಾಗುವುದು. ಈ ವೇಳೆ ಮಾತನಾಡಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಚುತಾನಂದ ಕೆ.ಆರ್.ನಗರ ತಾಲೂಕಿನಲ್ಲಿ ಭತ್ತಕ್ಕೆ ಬೆಂಕಿ ರೋಗ ಕಾಣಿಸಿಕೊಂಡು ಬೆಳೆ ನಾಶವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲವೆಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿ ಕೃಷಿ ಇಲಾಖೆ ಜಿಂಟಿ ನಿರ್ದೇಶಕ, ಬೆಳೆಗಳಿಗೆ ನಿರಂತರವಾಗಿ ಔಷಧಿಯನ್ನು ಸಿಂಪಡಿಸುವಂತೆ ಹೇಳಲಾಗಿದ್ದು, ಇದರಿಂದ ರೋಗ ಕಡಿಮೆಯಾಗಲಿದೆ ಎಂದರು. ಇದಕ್ಕೆ ಒಪ್ಪದ ಅಚ್ಚುತಾನಂದ ಅಧಿಕಾರಿಗಳು ರೈತರಿಗೆ ಯಾವ ಮಾಹಿತಿ ಕೊಡಲ್ಲ. ಕೃಷಿ ಬಗ್ಗೆ ಅನುಭವವನ್ನೇ ಹೊಂದಿಲ್ಲವೆಂದು ತರಾಟೆಗೆ ತಗೆದುಕೊಂಡರು.