Advertisement
ಇದುವರೆಗೆ ತಾಲೂಕು ಕೇಂದ್ರವಾಗಲು ಪಟ್ಟ ಪರಿಶ್ರಮಕ್ಕೆ ಕೊನೆಯಿಲ್ಲ. ಹಾಗೆಂದು ಈಗ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಸಂಪೂರ್ಣ ಸುಸಜ್ಜಿತ ತಾಲೂಕು ಕೇಂದ್ರವಾಗಿ ಪರಿವರ್ತನೆಗೊಳ್ಳಲು ಒತ್ತಡ ಹೇರಬೇಕಾದ ಕೆಲಸ ಜನಪ್ರತಿನಿಧಿಗಳು, ನಾಗರಿಕರಿಂದ ಆಗಬೇಕಾಗಿದೆ. ಸುಸಜ್ಜಿತ ತಾಲೂಕು ಕೇಂದ್ರವಾಗಲು ಇನ್ನಷ್ಟು ಕಾಲಾವಕಾಶ ಅಗತ್ಯವಿದ್ದರೂ, ವ್ಯವಸ್ಥಿತ ಅಭಿವೃದ್ಧಿ ಕಾಮಗಾರಿ ತತ್‌ಕ್ಷಣ ಆರಂಭವಾಗಬೇಕಿದೆ.
ಕಡಬಕ್ಕೆ ಐತಿಹಾಸಿಕ ಹಿನ್ನೆಲೆ ಇದೆ ಅನ್ನುವುದಕ್ಕೆ ಪೂರಕವಾಗಿ ಅಂದಿನ ಕಾಲದ ದೇಗುಲಗಳು, ಕೋಟೆಗಳು ಹಾಗೂ ಕೆರೆಗಳು ಕಾಣಸಿಗುತ್ತವೆ. ಕಡಬ ಸಂಸ್ಥಾನಕ್ಕೆ 38 ಗ್ರಾಮಗಳು ಒಳಪಡುತ್ತಿದ್ದವು ಎನ್ನುವುದಕ್ಕೆ ದಾಖಲೆಗಳಿವೆ. ಪುತ್ತೂರು ತಾಲೂಕಿನ 27, ಸುಳ್ಯ ತಾಲೂಕಿನ 10, ಬೆಳ್ತಂಗಡಿ ತಾಲೂಕಿನ 5 ಗ್ರಾಮಗಳನ್ನೊಳಗೊಂಡ 1,99,572.38 ಎಕ್ರೆ ಭೌಗೋಳಿಕ ವಿಸ್ತೀರ್ಣ ಹೊಂದಿರುವ 1.25 ಲಕ್ಷ ಜನಸಂಖ್ಯೆ ಜನಸಂಖ್ಯೆ ಹೊಂದಿರುವ ಕಡಬವನ್ನು ಕೇಂದ್ರವಾಗಿಸಿಕೊಂಡ ಕಡಬ ತಾಲೂಕನ್ನು ರಚಿಸಬೇಕೆನ್ನುವ ಪ್ರಸ್ತಾವನೆ 60ರ ದಶಕದಲ್ಲಿಯೇ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿತ್ತು. 2001ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಸರಕಾರವಿದ್ದಾಗ ವಿಶೇಷ ತಹಶೀಲ್ದಾರ್ ನೇಮಿಸಲಾಯಿತು. 2004ರಲ್ಲಿ ಭೂಮಿ ಕೇಂದ್ರವನ್ನು ಪ್ರಾರಂಭಿಸಲಾಯಿತು. ನೆಮ್ಮದಿ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಸರ್ವೆ ಇಲಾಖೆ, ವಿದ್ಯುತ್ ಸಬ್ ಸ್ಟೇಶನ್, ಮೆಸ್ಕಾಂ ಉಪ ವಿಭಾಗ, ಎ.ಪಿ.ಎಂ.ಸಿ.ಉಪಪ್ರಾಂಗಣ, ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು ಸೇರಿದಂತೆ ಹೆಚ್ಚಿನ ಸವಲತ್ತುಗಳು ಈಗ ಲಭ್ಯವಾಗಿವೆ. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಅಭಿವೃದ್ಧಿಗೊಂಡಿದೆ. ಕಡಬ-ಪಂಜ ರಸ್ತೆಯ ಅಗಲೀಕರಣಕ್ಕೆ ಅನುದಾನ ಬಿಡುಗಡೆಯಾಗಿದೆ.
Related Articles
ಕಡಬ ತಾಲೂಕು ರಚನೆಯ ಪ್ರಸ್ತಾಪ ಬಂದಾಗ ಶಿರಾಡಿ, ಉದನೆ, ನೆಲ್ಯಾಡಿ ಭಾಗದವರಿಗೆ ಸಂಪರ್ಕ ವ್ಯವಸ್ಥೆಯ ಬಗ್ಗೆ ಸಮಸ್ಯೆ ಇತ್ತು, ಆದರೆ ಇದೀಗ ಹೊಸಮಠ ಸೇತುವೆ ನಿರ್ಮಾಣವಾಗಿದೆ. ಇಚ್ಲಂಪಾಡಿಯಲ್ಲಿ ಸೇತುವೆ ಆಗಿದೆ. ಉದನೆಯಲ್ಲೂ ಹೊಸ ಸೇತುವೆ ನಿರ್ಮಾಣವಾಗಲಿದೆ. ದೋಳ್ಪಾಡಿ, ಎಡಮಂಗಲ ಭಾಗದವರಿಗೆ ಕಡಬ ಇನ್ನೂ ಹತ್ತಿರವಾಗಲು ಪಿಜಕಳದ ಪಾಲೋಳಿ ಯಲ್ಲಿ ಕುಮಾರಧಾರೆಗೆ ಹೊಸ ಸೇತುವೆ ನಿರ್ಮಾಣವಾಗಬೇಕಾಗಿದೆ.
Advertisement
ಕಾದಿರಿಸಿದ ಜಮೀನುಗಳುಮಿನಿ ವಿಧಾನ ಸೌಧ ನಿರ್ಮಾಣಕ್ಕಾಗಿ 1.60 ಎಕ್ರೆ
ನಾಡ ಕಚೇರಿಗೆ 1.00 ಎಕ್ರೆ,
ಶಿಕ್ಷಣ ಇಲಾಖೆಗೆ 14.56 ಎಕ್ರೆ,
ಪೊಲೀಸ್ ಇಲಾಖೆಗೆ 2.5 ಎಕ್ರೆ,
ಲೋಕೋಪಯೋಗಿ ಇಲಾಖೆಗೆ 0.20 ಎಕ್ರೆ
ಪಂಚಾಯತ್ ರಾಜ್ ಇಲಾಖೆಗೆ 5.62 ಎಕ್ರೆ
ನ್ಯಾಯಾಂಗ ಇಲಾಖೆಗೆ 2.50 ಎಕ್ರೆ
ಕೃಷಿ ಇಲಾಖೆಗೆ 0.10 ಎಕ್ರೆ
ಮೆಸ್ಕಾಂಗೆ 2.90 ಎಕ್ರೆ
ಆರೋಗ್ಯ ಇಲಾಖೆಗೆ 2.11 ಎಕ್ರೆ - ನಾಗರಾಜ್ ಎನ್.ಕೆ. ಕಡಬ