Advertisement
26 ಸಾವಿರ ಹೆಕ್ಟೇರ್ ಪ್ರದೇಶ: ಜಿಲ್ಲೆಯಲ್ಲಿ ನೀರಾವರಿ ಇಲ್ಲದ ರೈತರು ನೆಲಗಡಲೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುವುದರಿಂದ ನೆಲಗಡಲೆ ಬೆಳೆಯುವ ರೈತರಸಂಖ್ಯೆ ಅಧಿಕವಾಗಿದೆ. ರಾಗಿ, ಮುಸುಕಿನ ಜೋಳ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಮೂರನೇ ಅತಿದೊಡ್ಡ ಬೆಳೆಯಾಗಿ ನೆಲಗಲಡೆ ಬೆಳೆಯುತ್ತಾರೆ. ಈ ವರ್ಷ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಸುಮಾರು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಪ್ರದೇಶ ಗುರುತಿಸಿದೆ. ಜಿಲ್ಲೆಗೆ ಅವಶ್ಯಕ ವಾದ 19,428 ಕ್ವಿಂಟಲ್‌ನಷ್ಟು ವಿವಿಧ ಬಿತ್ತನೆ ಬೀಜ ಅವಶ್ಯಕವಾಗಿದ್ದು ಆ ಪೈಕಿ 4,569 ಕ್ವಿಂಟಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೇಡಿಕೆಗೆ ತಕ್ಕಂತೆ ಜಿಲ್ಲೆಗೆ ಅವಶ್ಯ ಕವಾದ ಬಿತ್ತನೆ ಬೀಜಗಳು, ರಸಗೊಬ್ಬರ ಪೂರೈಕೆ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸರ್ಕಾರವು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲದಲ್ಲಿ ಒದಗಿಸಿ ರೈತರ ಆತಂಕ ದೂರ ಮಾಡ ಬೇಕಾಗಿದೆ. ಕಳೆದ ಸಲ ಬಾಗೇಪಲ್ಲಿ ತಾಲೂಕಿನಲ್ಲಿ ಮುಂಗಾರು ಮುಗಿದು ಹಿಂಗಾರಿನ ಸಮಯದಲ್ಲಿ ನೆಲಗಡಲೆ ಹಂಚಿಕೆಯಾಗಿತ್ತು. ಇದರಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿತ್ತು.
● ಮಾಡಪ್ಪಲ್ಲಿ ನರಸಿಂಹಮೂರ್ತಿ, ಯುವ ರೈತ
Related Articles
Advertisement