Advertisement

ಸೋಂಕು ಹರಡುವ ಭೀತಿಯಲ್ಲಿ ಜಿಲ್ಲೆ ಜನ

05:44 PM Apr 20, 2020 | mahesh |

ತುಮಕೂರು: ಕೋವಿಡ್ ಹರಡದಂತೆ ತಡೆಯಲು ಇಡೀ ದೇಶ ಲಾಕ್‌ಡೌನ್‌ ಆಗಿದೆ. ಒಂದೆಡೆಯಿಂದ ಮತ್ತೂಂದೆಡೆ ಹೋಗುವಂತ್ತಿಲ್ಲ, ಅಂತರ್‌ ರಾಜ್ಯ, ಅಂತರ್‌ ಜಿಲ್ಲಾ ಪ್ರವೇಶ ನಿಷೇಧವಿದೆ. ಆದರೆ ಹೆಚ್ಚು ಕೋವಿಡ್ ಪ್ರಕರಣಗಳಿರುವ ಬೆಂಗಳೂರಿನಿಂದ ಜನ ಪೊಲೀಸರ ಕಣ್ತತಪ್ಪಿಸಿ ಜಿಲ್ಲೆಗೆ ಬರುತ್ತಿರುವುದು ನಿಂತ್ತಿಲ್ಲ, ಇದರಿಂದ ಕೋವಿಡ್ ದಿಂದ ರಕ್ಷಿಸಿಕೊಂಡಿರುವ ತುಮಕೂರಲ್ಲಿ ಸೋಂಕು ಹರಡುತ್ತದೆಯೋ ಎನ್ನುವ ಭೀತಿ ಜನರಲ್ಲಿ ಆವರಿಸ ತೊಡಗಿದೆ.

Advertisement

ಬೆಂಗಳೂರಿಗೆ ಹೆಬ್ಟಾಗಿಲಾಗಿದ್ದು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಯಾವುದೇ ಕೋವಿಡ್ ಸೋಂಕು ಪ್ರಕರಣ ಕಂಡು ಬಂದಿಲ್ಲ, ದೆಹಲಿಯ ತಬ್ಲಿಘಿ ಜಮಾತ್‌ಗೆ ತೆರಳಿದ್ದ ಶಿರಾದ ವೃದ್ಧ ಮತ್ತು ಅವರ ಮಗ ಇಬ್ಬರಿಗೆ ಸೋಂಕು ಕಂಡು ಬಂದಿತ್ತು, ಅದರಲ್ಲಿ ವೃದ್ಧ ಮೃತರಾಗಿದ್ದರು. 13 ವರ್ಷದ ಮಗ ಈಗ ಗುಣಮುಖರಾಗಿ ಶಿರಾದ ಅವರ ಮನೆಗೆ ಬಂದಿದ್ದಾರೆ. ಜಿಲ್ಲೆಯ ಜನರಿಗೆ ಆತಂಕ ಹೆಚ್ಚುತ್ತಿರುವುದು ತುಮಕೂರಿಗೆ ಹತ್ತಿರವಿರುವ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ತುಮಕೂರುಗೆ ಒಂದಲ್ಲಾ ಒಂದು ರೀತಿಯಲ್ಲಿ ಬೆಂಗಳೂರಿನ ಸಂಪರ್ಕ ಇದೆ.

ನಿತ್ಯವೂ ಸಾವಿರಾರು ಜನ ಉದ್ಯೋಗಕ್ಕಾಗಿ ಹೋಗಿ ಬರುತ್ತಿದ್ದಾರೆ. ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚು ಜನ ನಿತ್ಯವೂ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ. ಎಲ್ಲಿಯೂ ಅವರ ಆರೋಗ್ಯ ತಪಾಸಣೆ ಆಗುತ್ತಿಲ್ಲ, ಹೋದವರಿಗೆ ಅಲ್ಲಿ ಸೋಂಕು ತಗಲಿದರೆ ತುಮಕೂರಿಗೆ ಹರಡುವ ಸಾಧ್ಯತೆ ಇರುತ್ತದೆ. ಬೆಂಗಳೂರಿಗೆ ಬಿಬಿಎಂಪಿಯ ಕೆಲವು ನೌಕರರು ಮತ್ತು ಆರೋಗ್ಯ ಇಲಾಖೆಯ ಸ್ಟಾಪ್‌ ನರ್ಸ್‌ಗಳು ಇತರೆ ಇಲಾಖೆಗಳ ಅಧಿಕಾರಿಗಳು ನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ. ಜೊತೆಗೆ  ಅವರಿಗೆ ಎಮರ್ಜೆನ್ಸಿ ಪಾಸ್‌ಗಳನ್ನು ನೀಡಲಾಗಿದೆ. ಆದ್ದರಿಂದ ಅವರು ಬೆಂಗಳೂರಿಗೆ ಹೋಗಿ ಬರಲು ತೊಂದರೆಯಾಗುತ್ತಿಲ್ಲ. ಆದರೆ ನಿತ್ಯ ಬೆಂಗಳೂರಿಗೆ ಹೋಗಿ ಬರುವ ಅಧಿಕಾರಿಗಳ ಆರೋಗ್ಯ ತಪಾಸಣೆ ಆಗಬೇಕು ಅದು ಆಗುತ್ತಿಲ್ಲ ಎನ್ನುವ
ಅರೋಪವಿದೆ. ಜೊತೆಗೆ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಕಣ್‌ ತಪ್ಪಿಸಿ ಗಡಿ ನುಸಳಿ ಬರುತ್ತಿದ್ದಾರೆ. ಗೂಡ್ಸ್‌ ವಾಹನಗಳಲ್ಲಿ, ಆ್ಯಂಬುಲೆನ್ಸ್‌ಗಳಲ್ಲಿ ಬರುವ ಜನ ಪೊಲೀಸರ ಚೆಕ್‌ಪೋಸ್ಟ್‌ಗಿಂತ ಒಂದು ಕಿ.ಮೀ ದೂರದಲ್ಲಿ ಇಳಿದು ಅಲ್ಲಿಂದ ನಡೆದು ಕೊಂಡು ಬಂದು ಪೊಲೀಸರ ಚೆಕ್‌ಪೋಸ್ಟ್‌ ನಲ್ಲಿ ಇಬ್ಬರಂತೆ ಹಾದು ಹೋಗುತ್ತಿದ್ದಾರೆ.

ನಂತರ ಮುಂದೆ ಹೋಗಿ ವಾಹನ ಹತ್ತಿ ತುಮಕೂರು ಪ್ರವೇಶಿಸುತ್ತಿದ್ದಾರೆ. ಈ ಮೂಲಕ ಸೋಂಕಿತರು ಜಿಲ್ಲೆಗೆ ಪ್ರವೇಶ ಮಾಡಿ ರೋಗ ಹರಡಿಸುತ್ತಾರೆ ಎನ್ನುವ ಭಯ ಆವರಿಸುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಅನಧಿಕೃತವಾಗಿ ಬೆಂಗಳೂರಿನಿಂದ ಓಡಾಡುವವರಿಗೆ ಕಡಿವಾಣ ಹಾಕಲೇ ಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಕೋವಿಡ್ ಮಹಾಮಾರಿ ಜಿಲ್ಲೆಗೆ ಒಕ್ಕರಿಸದಂತೆ ಮಾಡಿರುವ ಕ್ರಮಗಳು ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ ಗಡಿ ಚೆಕ್‌ ಪೋಸ್ಟ್‌ಗಳಲ್ಲಿ ಇನ್ನೂ ತೀವ್ರ ಭದ್ರತೆ ಮಾಡುವ ಅಗತ್ಯತೆ ಇದೆ.

ಜಿಲ್ಲೆಯಲ್ಲಿ ಈಗ ಯಾವುದೇ ಸೋಂಕಿತ ಪ್ರಕರಣವಿಲ್ಲ, ಜಿಲ್ಲೆಗೆ ಬೇರೆ ಜಿಲ್ಲೆಗಳಿಂದ ಯಾರೂ ಪ್ರವೇಶ ಮಾಡುವಂತಿಲ್ಲ. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಂದ ಯಾರಾದರೂ ತಮ್ಮ ಮನೆಗೆ ಬಂದಿದ್ದರೆ ತಿಳಿಸಿ, ಅವರಿಗೆ ಪರೀಕ್ಷೆ ಮಾಡಬೇಕು.
ಡಾ.ಕೆ.ರಾಕೇಶ್‌ಕುಮಾರ್‌, ಡೀಸಿ

Advertisement

●ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next