Advertisement
ಔಷಧಿ, ಬಟ್ಟೆ, ದವಸ ಧಾನ್ಯ ನೀಡಲು ಹಲವರು ಜಿಲ್ಲಾಡಳಿತದ ಮುಂದೆ ಬಂದಿದ್ದಾರೆ. ಆದರೆ ಜಿಲ್ಲಾಡಳಿತ ಸಾಮಾಗ್ರಿ ಬೇಡ. ನೆರವು ನೀಡಬೇಕು ಎಂದರೆ ಹಣದ ರೂಪದಲ್ಲಿ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ಜಮಾ ಮಾಡುವಂತೆ ಹೇಳಿದೆ.ಹೀಗಾಗಿ ಸಾಮಾಗ್ರಿಗಳನ್ನು ನೀಡಬೇಕು ಎಂದವರಿಗೆ ನಿರಾಸೆಯುಂಟಾಗುತ್ತಿದೆ.
ಸಂಗ್ರಹಿಸಿ ತಾವೇ ಪ್ರವಾಹ ಸಂತ್ರಸ್ತರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೆ ನಿರಾಶ್ರಿತರಿಗೆ ತಮ್ಮ ಕೈಲಾದ ಸಹಾಯ
ಮಾಡಬೇಕು ಎಂದು ಬಿಸಿಲೂರಿನ ನಾಗರಿಕರು ಹಾಗೂ ಕೆಲ ಸಮಾಜ ಸೇವಕರ ಮನ ತುಡಿಯುತ್ತಿದ್ದು, ಔಷಧಿಗಳು,
ನ್ಯಾಪ್‌ಕಿನ್‌ಗಳು, ಬೇಕರಿ ಪದಾರ್ಥಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಬಂದರೆ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯಾ ತೋರಿದೆ. ಪ್ರವಾಹದಿಂದಾಗಿ ಕೊಡಗು ಜನರು ನರಳುತ್ತಿದ್ದಾರೆ. ಕಲಬುರಗಿ ಜನರು ಸದಾ ನಿಮ್ಮೊಂದಿಗಿದ್ದೇವೆ ಎಂದು ಕಲಬುರಗಿ ಮಂದಿ ಹೇಳುತ್ತಿದ್ದಾರೆ. ಆದರೆ, ಸೋಮವಾರ ಪರಿಹಾರ ಸಾಮಾಗ್ರಿಗಳನ್ನು ಹೊತ್ತು ನೆರವಾಗಲು ಬಂದವರನ್ನು ಜಿಲ್ಲಾಡಳಿತದ ಅಧಿಕಾರಿಗಳು ಗಂಟೆಗಳ ಕಾಲ ಕಾಯಿಸಿ, ಬೇಜವಾಬ್ದಾರಿತ ಪ್ರದರ್ಶಿಸಿದ್ದಾರೆ. ಹೀಗಾಗಿ ಸಂಘಟಕರು ಜಿಲ್ಲಾಡಳಿತ ಬಾಗಿಲಲ್ಲಿ ತಾವು ತಂದ ಪರಿಹಾರ ಸಾಮಾಗ್ರಿಗಳನ್ನು ಇಟ್ಟು ಸಪ್ಪೆ ಮೊರೆ ಹಾಕಿಕೊಂಡು ಹೋಗಿದ್ದಾರೆ. ಇದು ನಿಜಕ್ಕೂ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ. ಸಂಘ-ಸಂಸ್ಥೆಗಳು ಸಾರ್ವಜನಿಕರಿಂದ ಸಾಮಾಗ್ರಿಗಳನ್ನು ಪಡೆದುಕೊಳ್ಳುವಲ್ಲಿ ಹಾಗೂ ಅದನ್ನು ಹಸ್ತಾಂತರಿಸುವಲ್ಲಿ ಲೋಪಗಳಾಗಬಹುದು ಎಂಬುದು ಜಿಲ್ಲಾಡಳಿತದ ವಿಚಾರವಾಗಿದ್ದರೆ. ಅದು ತಪ್ಪಲ್ಲ. ಆದರೆ ಈ ನಿಟ್ಟಿನಲ್ಲಿ ಜಾಗೃತಿ ವಹಿಸುವುದು ಹಾಗೂ ಸೂಕ್ತ ಕ್ರಮದ ನೋಟ ಬೀರುವುದು ಅಗತ್ಯವಾಗಿದೆ. ನೆಗಡಿ ಬಂದಿದೆ
ಎಂಬ ಮಾತ್ರಕ್ಕೆ ಮೂಗು ಕತ್ತರಿಸುವುದು ಬೇಡ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಹೆಜ್ಜೆ ಇಡಬೇಕು ಎಂದು ಸಾರ್ವಜನಿಕರು
ಆಗ್ರಹಿಸುತ್ತಿದ್ದಾರೆ.
Related Articles
ಶಿವಕುಮಾರ ರೇಶ್ಮಿ, ಸಮಾಜ ಸೇವಕ
Advertisement
ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಹಾಯ ಕಲ್ಪಿಸುವರು ನಗದು, ಇಲ್ಲವೇ ಡಿಡಿ ಅಥವಾ ಚೆಕ್ ರೂಪದಲ್ಲಿ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ಜಮಾ ಮಾಡಬೇಕು. ಯಾವ ವಸ್ತುಗಳನ್ನು ದೇಣಿಗೆ ರೂಪದಲ್ಲಿ ಸ್ವೀಕರಿಸಬೇಕು ಎಂಬುದರ ಕುರಿತಾಗಿ ಕೊಡಗು ಜಿಲ್ಲಾಧಿಕಾರಿಗಳು ಸೋಮವಾರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಹ ದೇಣಿಗೆಯಾಗಿ ಯಾವುದನ್ನು ಸ್ವೀಕರಿಸುತ್ತದೆ ಎಂಬುದರ ಕುರಿತಾಗಿ ಮಂಗಳವಾರ ಪ್ರಕಟಣೆ ಹೊರಡಿಸಲಾಗುವುದು.ಆರ್.ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ ರಂಗಪ್ಪ ಗಧಾರ