Advertisement

ಪಠ್ಯಪುಸ್ತಕ ಸಮಿತಿ ವಿಸರ್ಜನೆಯಾದರೂ ಮುಗಿಯದ ಗೊಂದಲ

12:09 AM Jun 05, 2022 | Team Udayavani |

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಶಿಕ್ಷಣ ಇಲಾಖೆಯು ಸರಕಾರಕ್ಕೆ ವರದಿ ನೀಡಿ ಮುಖ್ಯಮಂತ್ರಿಯವರು ಸಮಿತಿ ವಿಸರ್ಜಿಸಲಾಗಿದೆ ಎಂದು ಹೇಳಿದರೂ ಗೊಂದಲ ಮುಂದುವರಿದಿದೆ.
ಬಸವಣ್ಣವವರ ಪಠ್ಯವನ್ನು ಪರಿಷ್ಕರಿಸುವುದಾಗಿ ಸರಕಾರ ಹೇಳಿರುವುದರಿಂದ ಪ್ರಸ್ತುತ ಮುದ್ರಣವಾಗಿರುವ ಪುಸ್ತಕಗಳ ಕತೆ ಏನು. ಆಗಿರುವ ದೋಷ ಸರಿಪಡಿಸಲು ಮತ್ತೂಂದು ಸಮಿತಿ ಮಾಡಲಾಗುವುದೇ ಎಂಬ ಪ್ರಶ್ನೆ ಉಂಟಾಗಿದೆ.

Advertisement

ಜತೆಗೆ ಹಳೆಯ ಪುಸ್ತಕಗಳಲ್ಲಿರುವ ಪಾಠಗಳನ್ನು ಬೋಧಿಸಬೇಕಾ ಅಥವಾ ಹೊಸ ಪಠ್ಯದಲ್ಲಿರುವ ಪಾಠಗಳನ್ನು ಬೋಧಿಸಬೇಕಾ ಎಂಬ ಗೊಂದಲವೂ ಶಿಕ್ಷಕರಲ್ಲಿದೆ.

ಒಂದೆಡೆ ಪಠ್ಯಪುಸ್ತಕಗಳು ಇನ್ನೂ ಸಮರ್ಪಕವಾಗಿ ದೊರೆತಿಲ್ಲ. ಮತ್ತೂಂದೆಡೆ ಸರಕಾರ ಮರು ಪರಿಷ್ಕರಣೆ ಮಾಡುವುದಾಗಿ ಹೇಳಿಕೆ ನೀಡಿದೆ. ಆದಷ್ಟು ಬೇಗ ಶಿಕ್ಷಣ ಇಲಾಖೆಯು ಗೊಂದಲ ನಿವಾರಣೆ ಮಾಡಬೇಕು ಎಂದು ಶಿಕ್ಷಕರು ಹೇಳುತ್ತಾರೆ. ಈ ಮಧ್ಯೆ, ಮರು ಪರಿಷ್ಕೃತ ಪಠ್ಯವನ್ನು ಹಿಂಪಡೆಯದ ಹೊರತು ಲೇಖನಗಳನ್ನು ವಾಪಸ್‌ ಪಡೆಯುವುದಿಲ್ಲವೆಂದು ಸಾಹಿತಿಗಳು ಹೇಳುತ್ತಿದ್ದಾರೆ.

ಶಿಕ್ಷಣ ಇಲಾಖೆಯು ಮುಖ್ಯಮಂತ್ರಿಗಳಿಗೆ ವರದಿ ನೀಡುವ ಮೂಲಕ ತಿಪ್ಪೆ ಸಾರುವ ಕೆಲಸ ಮಾಡಿದೆ. ಶಾಲೆಗೆ ಪಠ್ಯಪುಸ್ತಕ ತಲುಪಿದ ಬಳಿಕ ಯಾವ ರೀತಿಯಲ್ಲಿ ಪರಿಷ್ಕರಿಸುತ್ತಾರೆ ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ಪರಿಷ್ಕೃತ ಪಠ್ಯವನ್ನು ವಾಪಸ್‌ ಪಡೆಯದ ಹೊರತು ನಮ್ಮ ಲೇಖನಗಳನ್ನು ಹಿಂಪಡೆಯುವುದಿಲ್ಲ.  -ಜಿ. –ರಾಮಕೃಷ್ಣ, ಲೇಖಕ

ಪರಿಷ್ಕೃತ ಪಠ್ಯದಲ್ಲಿ ಮಹಿಳೆಯರ ಲೇಖನಗಳು ಹಾಗೂ ಸಾವಿತ್ರಿ ಬಾಯಿ ಫ‌ುಲೆ ಸಹಿತ ಹಲವು ಮಹಿಳಾ ಸಾಧಕಿಯರ ಲೇಖನಗಳು ಕೂಡ ಇಲ್ಲ. ರಾಷ್ಟ್ರೀಯ ಪಠ್ಯದ ಚೌಕಟ್ಟು-2005 ಅನ್ನು ಪಾಲನೆ ಮಾಡಿಲ್ಲ.
-ರೂಪಾ ಹಾಸನ, ಲೇಖಕಿ

Advertisement

ಸರಕಾರಕ್ಕೆ ಎರಡು ಪತ್ರ ಬರೆದು ನನ್ನ ನಿಲುವನ್ನು ತಿಳಿಸಿದ್ದೇನೆ. ಶಿಕ್ಷಣ ಇಲಾಖೆ ವರದಿ ನೀಡಿದ ಬಳಿಕ ಮುಖ್ಯ ಮಂತ್ರಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ.
– ದೇವನೂರು ಮಹಾದೇವ,
ಹಿರಿಯ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next