Advertisement
ಇನ್ನು ಶಾಸಕ ಎಸ್.ಚಿಕ್ಕಮಾದು ನಿಧನದ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣಗೆ ಟಿಕೆಟ್ ನೀಡಲಾಗಿದೆ. ಪಿರಿಯಾಪಟ್ಟಣ ಕ್ಷೇತ್ರಕ್ಕೆ ಮಹದೇವ್, ವರುಣಾ ಕ್ಷೇತ್ರಕ್ಕೆ ಅಭಿಷೇಕ್, ಚಾಮರಾಜ ಕ್ಷೇತ್ರಕ್ಕೆ ಪೊ›.ಕೆ.ಎಸ್.ರಂಗಪ್ಪ, ಕೃಷ್ಣರಾಜ ಕ್ಷೇತ್ರಕ್ಕೆ ಕೆ.ವಿ. ಮಲ್ಲೇಶ್, ನರಸಿಂಹರಾಜ ಕ್ಷೇತ್ರಕ್ಕೆ ಅಬ್ದುಲ್ಲಾ, ತಿ. ನರಸೀಪುರ ಕ್ಷೇತ್ರಕ್ಕೆ ಅಶ್ವಿನ್ ಕುಮಾರ್ ಅವರು ಗಳನ್ನು ಅಭ್ಯರ್ಥಿಗಳಾಗಿ ಪ್ರಕಟಿಸಲಾಗಿದೆ.
Related Articles
Advertisement
ಅಶ್ವಿನ್ ಕುಮಾರ್ ಹೊರತುಪಡಿಸಿ, ನಮ್ಮಲ್ಲೇ ಯಾರಿಗಾದರೂ ಟಿಕೆಟ್ ನೀಡುವಂತೆ ಆಗ್ರಹಿಸುತ್ತಿರುವುದಲ್ಲದೆ, ಆಕಾಂಕ್ಷಿಗಳ ಬೆಂಬಲಿಗರು ಕ್ಷೇತ್ರದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಸುತ್ತಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದ್ದು, ಜೆಡಿಎಸ್ ಮುಖಂಡರ ಈ ಸಾಮೂಹಿಕ ಬಂಡಾಯ ಪಕ್ಷದ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ. ಪಕ್ಷದಲ್ಲಿನ ಈ ಬೆಳವಣಿಗೆಗಳು ಜೆಡಿಎಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈಗಾ ಗಲೇ ಅಶ್ವಿನ್‌ಗೆ ಜೆಡಿಎಸ್ ಟಿಕೆಟ್ ಘೋಷಣೆ ಯಾಗಿದೆ. ಈ ನಡುವೆ ಕೊನೆ ಕ್ಷಣದಲ್ಲಿ ಬದಲಾ ವಣೆಯಾದರೆ ಅಶ್ವಿನ್ ಕಾಂಗ್ರೆಸ್‌ನತ್ತ ಮುಖ ಮಾಡುವಂತಾದರೂ, ಇಲ್ಲ ನಿರ್ಧಾರ ಬದಲಾ ವಣೆಯಾಗದೆ ಅಶ್ವಿನ್ ಕಣದಲ್ಲಿ ಉಳಿದರೂ ಟಿಕೆಟ್ ಆಕಾಂಕ್ಷಿಗಳಾಗಿದ್ದ ಶಂಕರ್, ಧರಣಿ ಸುಂದ ರೇಶನ್, ಸಿದ್ಧಾರ್ಥ ಅವರುಗಳು ಕೈ ಅಥವಾ ಕಮಲಕ್ಕೆ ಬೆಂಬಲ ನೀಡಿದರೆ ಅಚ್ಚರಿಪಡುವಂತಿಲ್ಲ.
ಸದ್ಯಕ್ಕೆ ತಿ.ನರಸೀಪುರ ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗವಾಗಿದೆ. ಜತೆಗೆ ತಿ.ನರಸೀಪುರ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ವರುಣಾ ಕ್ಷೇತ್ರದ ಅಭ್ಯರ್ಥಿ ಅಭಿಷೇಕ್ ವಿರುದ್ಧ ಜೆಡಿಎಸ್‌ನ ಸ್ಥಳೀಯ ಮುಖಂಡರು ಬಂಡಾಯ ವೆದ್ದಿದ್ದಾರೆ. ಇನ್ನು ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ ಸಂದೇಶ್ ಸ್ವಾಮಿ ಅವರಿಗೆ ಟಿಕೆಟ್ ತಪ್ಪಿರುವುದಕ್ಕೆ ಪಕ್ಷದ ನಾಯ ಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತ ಬಿಜೆಪಿಯಲ್ಲಿ ಹಿಂದೊಮ್ಮೆ ಶಾಸಕರಾಗಿ ಪಕ್ಷದಿಂದ ಹೊರಹೋಗಿದ್ದ ಡಾ.ಭಾರತೀಶಂಕರ್ ಪ್ರಬಲ ಆಕಾಂಕ್ಷಿ. ಅವರ ಜತೆಗೆ ವಿಧಾನಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಸುಧಾ ಮಹ ದೇವಯ್ಯ, ಹಿಂದೆ ಡಾ.ಎಚ್.ಸಿ.ಮಹದೇವಪ್ಪ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಪಂ ಮಾಜಿ ಸದಸ್ಯ ಪುಟ್ಟಬಸವಯ್ಯ ಆಕಾಂಕ್ಷಿ ಗಳಾಗಿದ್ದಾರೆ. ಜೆಡಿಎಸ್‌ಪಕ್ಷದೊಳಗಿನ ಈ ಭಿನ್ನ ಮತ ಕಾಂಗ್ರೆಸ್ ಮತ್ತು ಬಿಜೆಪಿಗೆ ವರದಾನವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ.
* ಗಿರೀಶ್ ಹುಣಸೂರು