ಲಕ್ನೋ: ಅಯೋಧ್ಯೆಯಲ್ಲಿನ ವಿವಾದಿತ 2.77 ಎಕರೆ ಜಮೀನನ್ನು ಸೌಹಾರ್ದದ ಪ್ರತೀಕವಾಗಿ ಹಿಂದೂ ಗಳಿಗೆ ಬಿಟ್ಟುಕೊಡಬೇಕು ಎಂಬ ಸಲಹೆಯನ್ನು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತಿರಸ್ಕರಿಸಿದೆ. ಈ ಬಗ್ಗೆ ಅ.12ರಂದು ಲಕ್ನೋದಲ್ಲಿ ನಡೆಯಲಿರುವ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಅಲಿಗಢ ಮುಸ್ಲಿಂ ವಿವಿಯ ನಿವೃತ್ತ ಕುಲಪತಿ ಝಮಿರುದ್ದೀನ್ ಪಾಶಾ ಸೇರಿದಂತೆ ಹಲವು ಮುಸ್ಲಿಂ ಸಮುದಾಯದ ಬುದ್ಧಿ ಜೀವಿಗಳು “ಶಾಂತಿಗಾಗಿ ಭಾರತೀಯ ಮುಸ್ಲಿ ಮರು’ ಎಂಬ ಸಂಘಟನೆ ರಚಿಸಿಕೊಂ ಡಿದ್ದು, ಅದರ ಮೂಲಕ ಜಮೀನನ್ನು ಸದ್ಭಾವನಾ ಸಂಕೇತವಾಗಿ ಬಿಟ್ಟುಕೊಡು ವುದರ ಬಗ್ಗೆ ಸಲಹೆ ಮಾಡಿದ್ದರು. ಅ.17ರಂದು ಸುಪ್ರೀಂಕೋರ್ಟ್ ನಲ್ಲಿ ಜಮೀನು ಮಾಲೀಕತ್ವಕ್ಕೆ ಸಂಬಂಧಿ ಸಿದಂತೆ ವಾದ ಮಂಡನೆ ಮುಕ್ತಾಯ ವಾಗಲಿ ರುವಂತೆಯೇ ಈ ಸಲಹೆ ಮಂಡನೆಯಾಗಿದೆ. ಈ ಬಗ್ಗೆ “ಸಿಎನ್‌ಎನ್-ನ್ಯೂಸ್ 18′ ಜತೆಗೆ ಮಾತನಾ ಡಿದ ಮಂಡಳಿ ವಕ್ತಾರ ಝಫರ ಯೂಬ್ ಜಿಲಾನಿ, ಮಂಡಳಿ ಇಂಥ ಬೇಡಿಕೆಗಳಿಗೆ ಜಗ್ಗುವುದಿಲ್ಲ. ಇಂಥ ಸಲಹೆಗಳನ್ನು ನೀಡುವವರಿಗೆ ಪ್ರಕರಣದಲ್ಲಿ ಯಾವುದೇ ಹಂತದಲ್ಲಿ ಭಾಗಿಯಾಗಿಲ್ಲ. ಕಾನೂನಿನ ಮೂಲಕವೇ ಪರಿಹಾರ ಕಂಡುಕೊಳ್ಳಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.