Advertisement

ವಿಲೇವಾರಿಯಾದರೂ ಮತ್ತೆ ಮೂಟೆಗಟ್ಟಲೆ ಕಸ, ತ್ಯಾಜ್ಯ ಪ್ರತ್ಯಕ್ಷ

10:57 PM May 22, 2019 | sudhir |

ಕೋಟೇಶ್ವರ: ಸ್ವತ್ಛ ಗ್ರಾಮದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅದೆಷ್ಟೋ ಗ್ರಾಮಗಳ ಪಂಚಾಯತ್‌ ನಿಗಾವಹಿಸಿ ಶ್ರಮಿಸಿದರೂ ಸಹ ಅನೇಕ ಕಡೆ ಮತ್ತೆ ಮೂಟೆ ಮೂಟೆ ತ್ಯಾಜ್ಯ ಪ್ರತ್ಯಕ್ಷವಾಗುವುದು ಗ್ರಾಪಂಗಳಿಗೆ ನುಂಗಲಾರದ ತುತ್ತಾಗಿದ್ದು ಇದಕ್ಕೊಂದು ಜ್ವಲಂತ ನಿದರ್ಶನ ಕೋಟೇಶ್ವರ ಗ್ರಾ.ಪಂ.

Advertisement

ಪಂ. ವ್ಯಾಪ್ತಿಯ ಸರ್ವಿಸ್‌ ರಸ್ತೆಯ ಒಂದು ಪಾರ್ಶ್ವದ ಪ್ರದೇಶ, ಹಿಂದೂ ರುದ್ರಭೂಮಿಯ ಸನಿಹದ ರಾ. ಹೆದ್ದಾರಿಯಲ್ಲಿಯೂ ಕೂಡ ಮೂಟೆಗಟ್ಟಲೆ ತ್ಯಾಜ್ಯವಿದೆ.

ಹಾಲಾಡಿ ರಸ್ತೆಯ ಕೈಗಾರಿಕಾ ಘಟಕದ ಮುಖ್ಯ ರಸ್ತೆಯಲ್ಲಿಯೂ ಕೂಡ ತ್ಯಾಜ್ಯ ಎಸೆಯಲಾಗಿದ್ದು ವಿಲೇವಾರಿ ಗೊಳಿಸದಿದ್ದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಲಿದೆ.

ಕೈಚೆಲ್ಲಿ ಕುಳಿತ ಗ್ರಾ.ಪಂ.
ಅನೇಕ ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಗೊಳಿಸುತ್ತಿದ್ದರೂ ಜನರು ಮತ್ತೆ ಕಸ ಎಸೆಯುತ್ತಿರುವ ಪ್ರವೃತ್ತಿಯಿಂದ ಈ ಸಮಸ್ಯೆ ಉಂಟಾಗುತ್ತಿದ್ದು, ಸ್ವತ್ಛತೆಯ ದೃಷ್ಟಿಯಿಂದ ಇದೀಗ ಪಂ. ಸಾರ್ವಜನಿಕರ ಸಹಕಾರವನ್ನು ಕೋರಿದೆ.

ಬಹುತೇಕ ಕಡೆ ಜಾಗೃತಿ ಫಲಕವನ್ನು ಅಳವಡಿಸಲಾಗಿದ್ದರೂ ಕ್ಯಾರೇ ಎನ್ನದ ಮಂದಿ ಮತ್ತೆ ಪರಿಸರ ಮಾಲಿನ್ಯ ಮಾಡುತ್ತಿರುವುದು ಊರಿಗೆ ಮುಜುಗರದ ವಿಷಯವಾಗಿದೆ.

Advertisement

ಧಾರ್ಮಿಕ, ಶೆ„ಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕಸದ ಕಪ್ಪು ಚುಕ್ಕೆ ಸಪ್ತ ಕ್ಷೇತ್ರಗಳಲ್ಲೊಂದಾದ ಕೋಟೇಶ್ವರ ವ್ಯಾಪಾರ, ವ್ಯವಹಾರ, ಶೆ„ಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದ್ದರೂ ತ್ಯಾಜ್ಯ ಸಮಸ್ಯೆಯನ್ನು ನಿವಾರಿಸುವಲ್ಲಿ ಮಾತ್ರ ಇನ್ನೂ ಹಿಂದುಳಿದಿದೆ. ವಿಲೇವಾರಿಗೆ ಸರಕಾರಿ ಸ್ವಾಮ್ಯದ ಜಾಗದ ಕೊರತೆ ಎದುರಾಗಿದೆ. ಹಿಂದೂ ರುಧ್ರ ಭೂಮಿಯ ಬದಿಯಲ್ಲಿ ಹಸಿ ಹಾಗೂ ಒಣ ಕಸಗಳ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅವಕಾಶ ಸಿಕ್ಕಿದ್ದಲ್ಲಿ ಬಳಸಬಹುದು ಎಂಬ ಅಭಿಪ್ರಾಯವಿದ್ದರೂ ಸ್ಥಳೀಯರ ಅನುಮತಿ ದೊರೆತಲ್ಲಿ ಮಾತ್ರ ಈ ವ್ಯವಸ್ಥೆ ಜೀವ ಪಡೆಯುವ ಸಾಧ್ಯತೆ ಇದೆ.

ಪರಿಹಾರ ಒದಗಿಸಬಹುದು
ಬಹಳಷ್ಟು ಸಮಯದಿಂದ ಎದುರಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೊಂದು ಪರಿಹಾರ ಒದಗಿಸಲು ಜಿಲ್ಲಾಡಳಿತವು ಸೌಲಭ್ಯ ಕಂಡು ಕೊಳ್ಳಬೇಕಾಗಿದೆ. ಈಗಾಗಲೇ ಕುಂದಾಪುರ ಪುರಸಭೆ ಹಾಗೂ ಉಪ ಕಮಿಷನರ್‌ ಸಹಕರಿಸಿದಲ್ಲಿ ಪರಿಹಾರ ಒದಗಿಸಬಹುದು.
-ಉದಯ ನಾಯಕ್‌, ಪ್ರಭಾರ ಅಧ್ಯಕ್ಷರು, ಕೋಟೇಶ್ವರ ಗ್ರಾ.ಪಂ.

ಪರಿಹಾರ ಅಗತ್ಯ
ಈಗಾಗಲೇ ವಿವಿಧ ಸಂಘಟನೆಗಳ ಸಹಕಾರದಿಂದ ತ್ಯಾಜ್ಯ ವಿಲೇವಾರಿ ಗೊಳಿಸಲಾಗಿದೆ. ಆದರೂ ಮತ್ತೆ ತ್ಯಾಜ್ಯ ಎಸೆಯುವ ಪ್ರವೃತ್ತಿ ಕಂಡುಬಂದಿದೆ. ಪುರಸಭೆಯು ತಿಂಗಳಿಗೊಮ್ಮೆ ಅಲ್ಲಿನ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬಳಸಲು ಅವಕಾಶ ನೀಡಿದ್ದಲ್ಲಿ ಕೋಟೇಶ್ವರದ ತ್ಯಾಜ್ಯಕ್ಕೊಂದು ಶಾಶ್ವತ ಪರಿಹಾರ ಒದಗಿಸಿದಂತಾಗುವುದು.
-ತೇಜಪ್ಪ ಕುಲಾಲ್‌ , ಪಿ.ಡಿ.ಒ. ಕೋಟೇಶ್ವರ ಗ್ರಾ.ಪಂ.

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next