Advertisement

ಆವಿಷ್ಕಾರಕ್ಕೆ ಕುತೂಹಲದ ಮನೋಭಾವನೆ ಅಗತ್ಯ: ಡಾ|ಶಾಂತಾರಾಮ ಶೆಟ್ಟಿ 

01:04 PM Dec 09, 2017 | |

ಉಳ್ಳಾಲ: ಸಂಶೋಧಕರು ಹೊಸ ಹೊಸ ವಿಷಯಗಳ ಬಗ್ಗೆ ಆಳವಾದ ಜ್ಞಾನದೊಂದಿಗೆ ಕುತೂಹಲ ಮನೋಭಾವನೆಯಿಂದ ಸಂಶೋಧನೆ ನಡೆಸಿದರೆ, ಹೊಸ ಆವಿಷ್ಕಾರಗಳು ಬರಲು ಸಾಧ್ಯ ಎಂದು ನಿಟ್ಟೆ ವಿವಿಯ ಸಹ ಕುಲಾಧಿಪತಿ ಪ್ರೊ| ಡಾ| ಎಂ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು. 

Advertisement

ದೇರಳಕಟ್ಟೆಯ ನಿಟ್ಟೆ ವಿವಿಯ ಕೆ.ಎಸ್‌. ಹೆಗ್ಡೆ ಅಡಿಟೋರಿಯಂನಲ್ಲಿ ಇಂಡಿಯನ್‌ ವೈರೊಲಾಜಿಕಲ್‌ ಸೊಸೈಟಿ ಹಾಗೂ ನಿಟ್ಟೆ ವಿವಿ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ವೈರೋಕಾನ್‌- 2017 ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು. ಪ್ರಸ್ತುತ ದಿನಗಳು ಸಂಶೋಧನೆಗೆ ಪೂರಕವಾಗಿವೆ. ಈ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣಗಳು ಹೊಸ ವಿಚಾರಗಳ ಕುರಿತು ಬೆಳಕು ಚೆಲ್ಲಲಿ ಎಂದು ಆಶಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಇಂಡಿಯನ್‌ ವೈರೊಲಾಜಿಕಲ್‌ ಸೊಸೈಟಿ ಅಧ್ಯಕ್ಷ ಪ್ರೊ| ಅನುಪಮ್‌ ವರ್ಮ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಂಶೋಧನೆಗಳು ನಡೆದಿರುವುದರಿಂದ ಸದ್ಯ ರೋಗ ಪತ್ತೆಹಚ್ಚುವಿಕೆ ವಿಧಾನ ಸರಳವಾಗಿದೆ ಎಂದರು.

ನಿಟ್ಟೆ ವಿವಿ ಕುಲಪತಿ ಪ್ರೊ| ಡಾ| ಸತೀಶ್‌ ಕುಮಾರ್‌ ಭಂಡಾರಿ ನಿಟ್ಟೆ ವಿವಿಯ ಕುರಿತಾಗಿ ಪರಿಚಯಿಸಿ, ಎ ಸೆಂಚುರಿ ಆಫ್‌ ಪ್ಲಾಂಟ್‌ ವೈರಾಲಾಜಿ ಇನ್‌ ಇಂಡಿಯಾ ಎಂಬ ಕೃತಿ ಬಿಡುಗಡೆಗೊಳಿಸಿದರು.

ಸಂಪಾದಕ ಮಂಡಳಿಯ ಪ್ರೊ| ಮಂಡಲ್‌ ಕೃತಿಯ ಬಗ್ಗೆ ಪರಿಚಯಿಸಿದರು. ಇಂಟರ್‌ ನ್ಯಾಷನಲ್‌ ಕಮಿ ಷನ್‌ ಆಫ್‌ ವೈರಲ್‌ ಟ್ಯಾಕ್ಸಾನಮಿ ಯುನೈಟೆಡ್‌ ಕಿಂಗ್‌ಡಮ್‌ ಚೇರ್‌ವೆುನ್‌ ಪ್ರೊ| ಡಾ| ಆ್ಯಂಡ್‌ ರೋ ಡೇವಿಸನ್‌ ಮಾತನಾಡಿದರು. ವೈರೊಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾ ಪ್ರಧಾನ ಕಾರ್ಯದರ್ಶಿ ಪ್ರೊ| ಡಾ| ಜಿ.ಪಿ.ರಾವ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Advertisement

ಸಮ್ಮೇಳನ ಸಂಘಟಕ ಪ್ರೊ| ಡಾ| ಇಡ್ಯಾ ಕರುಣಾಸಾಗರ್‌ ಸ್ವಾಗತಿಸಿದರು. ನಿಟ್ಟೆ ವಿವಿ ಸಂಶೋಧನಾ ನಿರ್ದೇಶಕಿ, ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಪ್ರೊ| ಡಾ| ಇಂದ್ರಾಣಿ ಕರುಣಾಸಾಗರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next