Advertisement

ಇದ್ದು ಇಲ್ಲದಂತಾಗಿದೆ ಗ್ರಂಥಾಲಯ

12:35 PM Nov 16, 2019 | Suhan S |

ಗಜೇಂದ್ರಗಡ: ಗ್ರಂಥಾಲಯಕ್ಕಾಗಿ ಕಟ್ಟಡವಿದ್ದರೂ ಬಳಕೆ ಬಾರದೇ ಶಿಥಿಲಗೊಂಡಿದೆ. ಮೂರು ವರ್ಷ ಕಳೆದರೂ ದುರಸ್ತಿಯಾಗಿಲ್ಲ. ಹೀಗಾಗಿ ಪರ್ಯಾಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿದರೂ ಓದುಗರಿಗೆ ಕಿರಿಕಿರಿ ತಪ್ಪಿಲ್ಲ. ಇದು ಸಮೀಪದ ರಾಮಾಪುರ ಗ್ರಾಮದ ಗ್ರಂಥಾಲಯ ಪರಿಸ್ಥಿತಿ.

Advertisement

ರಾಮಾಪುರ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಲಭ್ಯ ಮರೀಚಿಕೆಯಾಗಿವೆ. ಒಂದೇ ಕಟ್ಟಡದಲ್ಲಿ ಇತ್ತ ಗ್ರಂಥಾಲಯ, ಅತ್ತ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಓದುಗರಿಗೆ ತೀವ್ರ ತೊಂದರೆಯಾಗುತ್ತಿದೆ. ಅಂಚೆ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಆಗಮಿಸುವಿಕೆಯಿಂದ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ.

ಗ್ರಾಮದಲ್ಲಿ ಈ ಹಿಂದೆ ಗ್ರಂಥಾಲಯದ ವ್ಯವಸ್ಥೆಯೇ ಇಲ್ಲವಾಗಿತ್ತು. ಅಲ್ಲಿನ ಯುವಕರು ಪಟ್ಟಣಕ್ಕೆ ಬಂದು ಪುಸ್ತಕಗಳನ್ನು ಓದುವ ಪರಿಸ್ಥಿತಿ ಉದ್ಭವಿಸಿತ್ತು. ಆದರೆ 2007 ಡಿಸೆಂಬರ ತಿಂಗಳಲ್ಲಿ ಗ್ರಾಮದ ಬಸ್‌ ನಿಲ್ದಾಣ ಕಟ್ಟಡದಲ್ಲಿ ಗ್ರಂಥಾಲಯ ತೆರೆಯಲಾಯಿತು. ಗ್ರಂಥಾಲಯದಲ್ಲಿ 2,714 ಪುಸ್ತಕಗಳಿವೆ. ನಿತ್ಯ ಮೂರು ದಿನಪತ್ರಿಕೆಗಳು ಬರುತ್ತವೆ. ಆದರೆ ಮಾಸಿಕ, ಪಾಕ್ಷಿಕ ಮತ್ತು ಸ್ಪರ್ಧಾತ್ಮಕ ಪುಸ್ತಕಗಳು ಮಾತ್ರ ಇಲ್ಲಿ ಮರೀಚಿಕೆಯಾಗಿದೆ.

ಇದ್ದು ಇಲ್ಲವಾದ ಗ್ರಂಥಾಲಯ: ಕಟ್ಟಡ ಒಂದೆಯಾದರೂ ಇಲಾಖೆಗಳು ಎರೆಡೆರೆಡು ಇದ್ದ ಕಾರಣ ಸುತ್ತಲೂ ಗದ್ದಲ ಗಲಾಟೆಯದ್ದೆ ಪರಿಸರ. ಹೀಗಾಗಿ ಬಹುತೇಕ ಯುವಕರು ಗ್ರಂಥಾಲಯಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ. 2007ರಿಂದ 2016ರ ವರೆಗೆ ಗ್ರಂಥಾಲಯ ಗ್ರಾಮದ ಬಸ್‌ ನಿಲ್ದಾಣದ ಕಟ್ಟಡದಲ್ಲಿ ಸ್ವತ್ಛಂದವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಕಟ್ಟಡ ಮೇಲ್ಛಾವಣಿ ಕುಸಿದು ಮೂರು ವರ್ಷ ಕಳೆದರೂ ಗ್ರಾಪಂ ಆಡಳಿತ ಮಾತ್ರ ಕಟ್ಟಡ ದುರಸ್ತಿಗೆ ಯಾವುದೇ ಕ್ರಮ ಜರುಗಿಸಿಲ್ಲ. ಈ ಕುರಿತು ಗ್ರಾಮಸ್ಥರು ಹಲವಾರು ಬಾರಿ ಆಡಳಿತಕ್ಕೆ ಮನವಿ ಮಾಡಿದರೂ ನಿರ್ಲಕ್ಷ್ಯ ಭಾವನೆ ತೋರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಂಥಾಲಯಗಳ ನಿರ್ವಹಣೆಗೆ ಇಲಾಖೆ ತನ್ನದೇ ಆದ ನಿಯಮಾನುಸಾರವನ್ನು ಹಾಕಿ ಕೊಂಡಿದೆ. ಬೆಳಗ್ಗೆ 9 ರಿಂದ 12 ಗಂಟೆಯ ವರೆಗೆ, ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಗ್ರಂಥಾಲಯವನ್ನು ತೆರೆಯಬೇಕು. ದಿನಕ್ಕೆ 6 ಗಂಟೆ ಗ್ರಂಥಾಲಯ ತನ್ನ ಕಾರ್ಯನಿರ್ವಹಿಸಬೇಕು. ಆದರೀಗ ಕೇವಲ 3ರಿಂದ 4 ಗಂಟೆ ಮಾತ್ರ ತೆಗೆಯುತ್ತಿದ್ದಾರೆ. ಇದರಿಂದ ಓದುಗರಿಗೆ ತೀವ್ರ ತೊಂದರೆಯಾಗುತ್ತಿದೆ.

ಗ್ರಂಥಾಲಯದ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ಎಂದು ಮನವಿ ಮಾಡಲಾಗಿದೆ. ಆದರೆ ಗ್ರಾಪಂ ಆಡಳಿತದಲ್ಲಿ ಗ್ರಂಥಾಲಯಕ್ಕೆ ಯಾವುದೇ ಅನುದಾನವಿಲ್ಲ ಎಂದು ಹೆಳುತ್ತಿದ್ದಾರೆ. ಹೀಗಾಗಿ ಗದ್ದಲದ ಪರಿಸರದಲ್ಲಿ ಗ್ರಂಥಾಲಯ ನಡೆಸುತ್ತಿದ್ದೇನೆ.-ಶಂಕರಗೌಡ ಗೌಡರ, ಗ್ರಂಥಾಲಯ ನಿರ್ವಾಹಕ

Advertisement

 ಈ ಮುಂಚೆ ಗ್ರಾಮದಲ್ಲಿ ಗ್ರಂಥಾಲಯ ಇದ್ದಿಲ್ಲ. ಹೀಗಾಗಿ ಗಜೇಂದ್ರಗಡಕ್ಕೆ ಅಲ್ಲಿನ ಗ್ರಂಥಾಲಯದಲ್ಲಿ ಓದುತ್ತಿದ್ದೇವು. ಆದರೆ 2007ರಿಂದ ಆರಂಭವಾಗಿರು ಗ್ರಂಥಾಲಯಕ್ಕೆ ಈವರೆಗೂ ಸಮರ್ಪಕ ಸೌಲಭ್ಯ ದೊರೆಯುತ್ತಿಲ್ಲ. ಇನ್ನು ಹೆಚ್ಚಿನ ದಿನಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಲಭ್ಯವಾದರೆ ಅನುಕೂಲವಾಗುತ್ತದೆ. ವೀರಭದ್ರಗೌಡ ಗೌಡರ, ಓದುಗ

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next