Advertisement
ಆ್ಯಪ್ ಮಾರುಕಟ್ಟೆಯ ವೇಗಕೋವಿಡ್ ಸಮಯದಲ್ಲಿ ಬೃಹತ್ ಹೊಟೇಲ್ ಸಮೂಹಗಳು ಸೇರಿದಂತೆ ಅನೇಕ ಉದ್ಯಮಗಳು ತಮ್ಮದೇ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಾರಣ ಆ್ಯಪ್ ನಿರ್ಮಾಣಕಾರರಿಗೆ, ಅದಕ್ಕೆ ಪೂರಕವಾದ ಗುಣಮಟ್ಟದ ಬರಹ ರೂಪಿಸುವ ಕಂಟೆಂಟ್ ರೈಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಟೀಮ್‌ಲೀಸ್ ಸರ್ವಿಸಸ್ ಎಂಬ ಅಧ್ಯಯನ ಸಂಸ್ಥೆಯ ಪ್ರಕಾರ, ಗಿಗ್ ವರ್ಕರ್‌ಗಳೆಂದು ಕರೆಸಿಕೊಳ್ಳುವ ತಾಂತ್ರಿಕ ವರ್ಗಕ್ಕೆ, ಗ್ರಾಫಿಕ್ಸ್ ಡಿಸೈನ್, ಕಂಟೆಂಟ್ ರೈಟಿಂಗ್ ಮಾಡುವ ಸ್ವತಂತ್ರೊದ್ಯೋಗಿ (ಫ್ರೀಲ್ಯಾನ್ಸರ್ಸ್) ಕಳೆದ ವರ್ಷದ ಎಪ್ರಿಲ್-ನವೆಂಬರ್ ತಿಂಗಳಿಗೆ ಹೋಲಿಸಿದರೆ, ಈ ವರ್ಷದಲ್ಲಿ ಬೇಡಿಕೆ 20-25 ಪ್ರತಿಶತ ಏರಿಕೆಯಾಗಿದೆ. ಅಲ್ಲದೇ ಈ ವರ್ಗದ ಉದ್ಯೋಗಿಗಳಿಗೆ ಈ ಬಾರಿ ಆದಾಯದಲ್ಲಿ 45-50 ಪ್ರತಿಶತ ಏರಿಕೆಯಾಗಿದೆ.
ಮಾನವ ಸಂಪನ್ಮೂಲ ಸೇವೆ ಒದಗಿಸುವ ಟೀಮ್‌ಲೀಸ್ ಸರ್ವಿಸಸ್, ಮೆಟ್ರೋ ನಗರಿಗಳಲ್ಲಿನ ಕಸಾಯಿ ಕಾರ್ಮಿಕರಿಗೆ ಉದ್ಯೋಗ ನೀಡಲಾರಂಭಿಸಿದೆ. ಕೋವಿಡ್ ಆರಂಭವಾದಾಗಿನಿಂದ ಗ್ರಾಹಕರು ಮೀನು ಮತ್ತು ಮಾಂಸಕ್ಕಾಗಿ ಮಾಂಸದಂಗಡಿಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ನಮ್ಮ ಆ್ಯಪ್‌ಗ್ ಳಲ್ಲಿ ಬೇಡಿಕೆಯಿಡಲಾರಂಭಿಸಿದರು. ಆಗ ನಾವು ಮಾಂಸ ಮಾರುಕಟ್ಟೆಗಳಲ್ಲಿ ಅಡ್ಡಾಡಿ, ಅಲ್ಲಿನ ಕಸಾಯಿ ಕಾರ್ಮಿಕರನ್ನು ಕರೆತಂದು, ಅವರಿಗೆ ಹೆಚ್ಚುವರಿ ತರಬೇತಿ ನೀಡುತ್ತಿದ್ದೇವೆ. ಇವರಿಗೆಲ್ಲ ತಿಂಗಳಿಗೆ 15 ಸಾವಿರದಿಂದ 20 ಸಾವಿರ ರೂ.ಗಳವರೆಗೆ ಸಂಬಳ ಕೊಡುತ್ತಿದ್ದೇವೆ ಎನ್ನುತ್ತಾರೆ ಟೀಮ್ ಲೀಸ್ ಸರ್ವಿಸಸ್‌ನ ಸಹಸ್ಥಾಪಕಿ ರಿತುಪರ್ಣಾ ಚಕ್ರವರ್ತಿ. ಗೃಹ ಸೇವೆ ಕ್ಷೇತ್ರದಲ್ಲಿ ಬೆಳವಣಿಗೆ
ಗೃಹ ಸೇವೆಗಳ ಉದ್ಯಮ ವಲಯದಲ್ಲಿ ಬೃಹತ್ತಾಗಿ ಬೆಳೆಯುತ್ತಿರುವ ಅರ್ಬನ್ ಕಂಪೆನಿ (ಈ ಹಿಂದೆ ಅರ್ಬನ್ ಕ್ಲಾಪ್)ಯ ಗ್ರಾಹಕರ ಸಂಖ್ಯೆ ಲಾಕ್ ಡೌನ್ ಅವಧಿಯಲ್ಲಿ 33 ಪ್ರತಿಶತ ಅಧಿಕವಾಗಿತ್ತು. ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಈ ಸಂಸ್ಥೆಯಡಿ ಸೇವೆ ಸಲ್ಲಿಸುವ ವಿವಿಧ ಕ್ಷೇತ್ರಗಳ ಜನರೂ ಅಧಿಕವಾದರು. ಗೃಹೋಪಕರಣಗಳನ್ನು ರಿಪೇರಿ ಮಾಡುವವರು, ಹೇರ್ ಕಟ್ ಮಾಡುವವರು, ಮನೆ ಸ್ವತ್ಛ ಮಾಡುವವರು ಸೇರಿದಂತೆ ವಿವಿಧ ರಂಗಗಳ ಉದ್ಯೋಗಿಗಳು, ಈಗ ಭಾರೀ ಪ್ರಮಾಣದಲ್ಲಿ ಅರ್ಬನ್ ಕಂಪೆನಿಯಲ್ಲಿ ನೋಂದಣಿ ಮಾಡಿಕೊಂಡು ಗ್ರಾಹಕರಿಗೆ ಮನೆ ಮನೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಈ ಸಂಸ್ಥೆಯೊಂದಿಗೆ 27,000 ಜನರು ಉದ್ಯೋಗ ಕಂಡು ಕೊಂಡಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಈ ಪ್ರಮಾಣ 35-40 ಪ್ರತಿಶತ ಏರಿಕೆಯಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಅರ್ಬನ್ ಕಂಪೆನಿಯ ಸಹ ಸ್ಥಾಪಕ ವರುಣ್ ಖೇತಾನ್.